ಸುಳ್ಯ:ಸರಕಾರಿ ಕೆಲಸಗಳಿಗಾಗಿ ಜನರು ಕಚೇರಿಗಳಿಗೆ ಅಲೆ ದಾಟುವನ್ನು ತಪ್ಪಿಸಿ ಜನರ ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರ ನೀಡಲು ಸರಕಾರ ಪ್ರಜಾಸೇವೆ ಆಂದೋಲನ ಸಭೆಯನ್ನು ಹಮ್ಮಿಕೊಂಡಿದೆ.ಜನರು ಸಭೆಯಲ್ಲಿ ಭಾಗವಹಿಸಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಶಾಸಕಿ ಭಾಗೀರಥಿ ಮುರುಳ್ಯ ಹೇಳಿದ್ದಾರೆ. ಸುಳ್ಯ ತಾಲೂಕು ಆಡಳಿತದ ವತಿಯಿಂದ
ಆಲೆಟ್ಟಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಶನಿವಾರ ನಡೆದ ಪ್ರಜಾಸೇವೆ ಆಂದೋಲನ ಸಭೆಯನ್ನು ಉದ್ಘಾಟಿಸಿ, ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಸಭೆಯಲ್ಲಿ ಬಂದ ಎಲ್ಲಾ ಅರ್ಜಿ, ಅಹವಾಲುಗಳನ್ನು ಕೂಲಂಕುಶವಾಗಿ ಪರಿಶೀಲಿಸಿ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.
ಸಭೆಯಲ್ಲಿ ರಾಜ್ಯ ಕನಿಷ್ಠ ವೇತನ ಸಲಹಾ ಮಂಡಳಿ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್, ಸುಳ್ಯ ತಾಲೂಕು ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಪಿ.ಎಸ್.ಗಂಗಾಧರ, ತಹಶೀಲ್ದಾರ್ ಮಂಜುಳ ಎಂ , ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ರಾಜಣ್ಣ, ಆಲೆಟ್ಟಿ ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಶೀತಲ್.ಯು.ಕೆ ಉಪಸ್ಥಿತರಿದ್ದರು. ಆಲೆಟ್ಟಿ ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಜಯಪ್ರಕಾಶ್ ಎಂ.ಆರ್ ಸ್ವಾಗತಿಸಿ, ಗ್ರಾಮ ಆಡಳಿತಾಧಿಕಾರಿ ಶರತ್ ಕುಮಾರ್ ವಂದಿಸಿದರು. ತಿಪ್ಪೇಶಪ್ಪ ಕಾರ್ಯಕ್ರಮ ನಿರೂಪಿಸಿದರು. ಸಭೆಯಲ್ಲಿ

ಪ್ಲಾಟಿಂಗ್ ಸಮಸ್ಯೆ, ಅಕ್ರಮ ಸಕ್ರಮ, 94ಸಿ, 9/11, ಕಸ್ತೂರಿ ರಂಗನ್ ವರದಿ, ಅರಣ್ಯ ಮತ್ತು ಕಂದಾಯ ಗಡಿ ಗುರುತು ಸಮಸ್ಯೆ, ಬರಪೀಡಿತ ತಾಲೂಕು ಘೋಷಣೆ ಮಾಡಬೇಕು, ಅಪಘಾತ ತಪ್ಪಿಸಲು ರಾಷ್ಟ್ರೀಯ ಹೆದ್ದಾರಿಯಲ್ಲಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಬೇಕು, ನಾಗಪಟ್ಟಣ ಸೇತುವೆ ದುರಸ್ತಿ ಕಾಮಗಾರಿ ಶೀಘ್ರ ಮುಗಿಸಬೇಕು, ಆಲೆಟ್ಟಿಯಲ್ಲಿ ಮೆಟ್ರಿಕ್ವರೆಗಿನ ಬಿಸಿಎಂ ಬಾಲಕ, ಬಾಲಕಿಯರ ವಸತಿ ನಿಲಯ ನಿರ್ಮಿಸಬೇಕು, ಆಲೆಟ್ಟಿ ಗ್ರಾಮದ ಕೊಚ್ಚಿ ಮತ್ತು ಮಾಣಿಮರ್ದು ಪ್ರದೇಶಗಳಿಗೆ ಇದುವರೆಗೆ ವಿದ್ಯುತ್ ಸಂಪರ್ಕ ಆಗಿರುವುದಿಲ್ಲ ಕೂಡಲೇ ವಿದ್ಯುತ್ ಸಂಪರ್ಕ ನೀಡಬೇಕು, ಸುಳ್ಯ ನಗರಕ್ಕೆ ಕಸವಿಲೇವಾರಿ ಘಟಕಕ್ಕೆ ಕೂಡಲೇ ಸ್ಥಳ ಗುರುತಿಸಬೇಕು, ಗ್ರಾಮದಲ್ಲಿ ನೆಟ್ವರ್ಕ ಸಮಸ್ಯೆ ಪರಿಹರಿಸಬೇಕು, ಏಣಾವರದಲ್ಲಿ ಸೇತುವೆ ನಿರ್ಮಾಣ ಮಾಡಬೇಕು,
ತಾಲೂಕು ಕಚೇರಿಯಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಬೇಕು ಇತ್ಯಾದಿ ಬೇಡಿಕೆಗಳನ್ನು ಸಾರ್ವಜನಿಕರು ಸಭೆಯಲ್ಲಿ ಮುಂದಿರಿಸಿದರು.
ಪ್ರಮುಖರಾದ ಅಶೋಕ್ ಪೀಚೆ, ಗೀತಾ ಕೋಲ್ಚಾರ್, ಧರ್ಮಪಾಲ ಕೊಯಿಂಗಾಜೆ, ಸತ್ಯಕುಮಾರ್ ಆಡಿಂಜ, ಸುದರ್ಶನ ಪಾತಿಕಲ್ಲು, ಗಿರೀಶ್ ನಾರ್ಕೋಡು, ಲೋಲಜಾಕ್ಷ ಭೂತಕಲ್ಲು, ರಾಧಾಕೃಷ್ಣ ಪರಿವಾರಕಾನ, ಧನಂಜಯ ಕುಂಚಡ್ಕ, ಚಂದ್ರಶೇಖರ, ವೇಣುಗೋಪಾಲ ಮತ್ತಿತರರು ವಿವಿಧ ಸಮಸ್ಯೆಗಳ ಬಗ್ಗೆ ಸಭೆಯಲ್ಲಿ ಪ್ರಸ್ತಾಪಿಸಿದರು. ಜನರು ಮುಂದಿರಿಸಿದ
ಸಮಸ್ಯೆಗಳಿಗೆ ಶಾಸಕಿ ಭಾಗೀರಥಿ ಮುರುಳ್ಯ ಹಾಗು ವಿವಿಧ ಇಲಾಖೆಯ ಅಧಿಕಾರಿಗಳು ಉತ್ತರ ನೀಡಿದರು. ತಹಶೀಲ್ದಾರ್ ಮಂಜುಳಾ ಎಂ, ವಲಯ ಅರಣ್ಯಾಧಿಕಾರಿ ನಿರಂಜನ್ ಶೆಟ್ಟಿ, ಎಸ್ಐ ಉದಯರವಿ ವೈ.ಎಂ, ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಸಹಾಯಕ ನಿರ್ದೇಶಕ ಡಾ.ನಿತಿನ್ ಪ್ರಭು, ಕ್ಷೇತ್ರ ಶಿಕ್ಷಣಾಧಿಕಾರಿ ವೈ.ಎಸ್.ಹರಗಿ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಶೈಲಜಾ ಕುಕ್ಕುಜಡ್ಕ, ಲೋಕೋಪಯೋಗಿ ಎಇಇ ಪೂವಯ್ಯ, ಪಂಚಾಯತ್ರಾಜ್ ಇಂಜಿನಿಯರಿಂಗ್ ವಿಭಾಗದ ಎಇಇ ಫಯಾಝ್ ಅಹಮ್ಮದ್, ನೀರು ನೈರ್ಮಲ್ಯ ಇಲಾಖೆಯ ಎಇಇ ಚೈತ್ರ, ತೋಟಾಗಾರಿಕಾ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಪ್ರಮೋದ್ ಸಿ.ಎಂ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಗುರುಪ್ರಸಾದ್, ಅಗ್ನಿಶಾಮಕ ದಳದ ಉಪನಿರೀಕ್ಷಕ ಕಿರಣ್ ಕುಮಾರ್, ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕ ಕೃಷ್ಣ, ತಾಲೂಕು ಆರೋಗ್ಯಾಧಿಕಾರಿ ಡಾ.ಆಶಾ ಅಭಿಕಾರ್, ಹಿಂದುಳಿದ ವರ್ಗಗಳ ಇಲಾಖೆಯ ಸಹಾಯಕ ನಿರ್ದೇಶಕಿ ಗೀತಾ, ಉಪ ತಹಶೀಲ್ದಾರ್ ಅವಿನ್ ರಂಗತ್ತಮಲೆ, ಮೆಸ್ಕಾಂ ಎಇ ಸುಪ್ರಿತ್ ಕುಮಾರ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.









