ಗುವಾಹಟಿ: ಭಾರತ ವಿರುದ್ಧ ನಡೆಯುತ್ತಿರುವ ಎರಡನೇ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವು ಬೃಹತ್ ಮೊತ್ತ ಪೇರಿಸಿದೆ.
ವೆಸ್ಟ್ ಇಂಡೀಸ್ ವಿರುದ್ಧ ಟಾಸ್ ಗೆದ್ದ ಭಾರತ ತಂಡವು ಬೌಲಿಂಗ್ ಆಯ್ಕೆ ಮಾಡಿಕೊಂಡಿತ್ತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ವಿಂಡೀಸ್ ಪಡೆ
50 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 405 ರನ್ ಗಳಿಸಿದೆ.
ವಿಂಡೀಸ್ ಪರ ಜಾನ್ ಕ್ಯಾಂಪ್ಬೆಲ್ (101), ಶಾಯ್ ಹೋಪ್ (104), ಅಮೀರ್ ಜಾಂಗೂ (114) ಶತಕ ಸಿಡಿಸಿ ಸಂಭ್ರಮಿಸಿದರು. ಭಾರತ ಪರ ಗುರ್ನೂರ್ ಬ್ರಾರ್, ರವೀಂದ್ರ ಜಡೇಜಾ, ಕುಲದೀಪ್ ಯಾದವ್ ತಲಾ ಎರಡು, ಪ್ರಸಿದ್ಧ ಕೃಷ್ಣ ಒಂದು ವಿಕೆಟ್ ಕಬಳಿಸಿದರು.ಮೊದಲ ಪಂದ್ಯದಲ್ಲಿ
ಗೆಲುವಿನ ನಗೆ ಬೀರಿರುವ ಭಾರತ ತಂಡವು ಎರಡನೇ ಪಂದ್ಯವನ್ನು ಗೆದ್ದು ಸರಣಿ ಕೈವಶ ಮಾಡಿಕೊಳ್ಳುವ ಕಾತರದಲ್ಲಿದೆ. ಆರಂಭಿಕ ಜಾನ್ ಕ್ಯಾಂಪ್ಬೆಲ್ ಸ್ಫೋಟಕ ಇನ್ನಿಂಗ್ಸ್ ನೀಡುವ ಮೂಲಕ ಅತ್ಯಂತ ವೇಗದ ಏಕದಿನ ಶತಕ ಸಿಡಿಸಿದರು. ಕೇವಲ 65 ಎಸೆತಗಳಲ್ಲಿ 9 ಬೌಂಡರಿ ಮತ್ತು 5 ಸಿಕ್ಸರ್ಗಳ ನೆರವಿನಿಂದ 101 ರನ್ ಬಾರಿಸಿದರು. ಜಾನ್ಗೆ ಸಾಥ್ ನೀಡಿದ ಶಾಯ್ ಹೋಪ್ (104 ರನ್, 94 ಎಸೆತ) ಮತ್ತು ಅಮಿರ್ ಜಾಂಗೋ (114 ರನ್, 77 ಎಸೆತ) ಇಬ್ಬರೂ ಸಹ ಶತಕ ಬಾರಿಸಿದರು.









