ಅಲ್ ಅಮೆರಾತ್: 19 ವರ್ಷದೊಳಿಗಿನವರ ಏಷ್ಯಾ ಕಪ್ ಕ್ರಿಕೆಟ್ ಫೈನಲ್ನಲ್ಲಿ ಭಾರತ ತಂಡವು ಪಾಕಿಸ್ತಾನವನ್ನು ರೋಚಕವಾಗಿ ಮಣಿಸಿ ಅಂಡರ್19 ಎಸಿಸಿ ಮೆನ್ಸ್ ಏಷ್ಯಾ ಕಪ್ ಚಾಂಪಿಯನ್ ಆಗಿದೆ ಹೊರಹೊಮ್ಮಿದೆ.ಕೊನೇ ಹಂತದಲ್ಲಿ ಮನಾಲ್ ಚೌಹಾಣ್ (47ರನ್, 32 ಎಸೆತ) ಮತ್ತು ಮೋಹಿತ್ ಉಳ್ವಾ (ಅಜೇಯ 49ರನ್, 26ಎಸೆತ) ಹೋರಾಟದಿಂದ ಭಾರತ ಅಕ್ಷರಷಃ ಜಯವನ್ನು ಕಸಿದುಕೊಂಡಿತು.ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪಾಕಿಸ್ತಾನ ತಂಡವು
ಉಸ್ಮಾನ್ ಖಾನ್ ಶತಕ (107), ಅಬ್ದುಲ್ ಖಾದಿರ್ (80) ಮತ್ತು ಫರ್ಹಾನ್ ಖಾನ್ (63) ಆಟದ ನೆರವಿನಿಂದ ನಿಗದಿತ 50 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 337 ರನ್ ಕಲೆಹಾಕಿತ್ತು.ಈ ಬೃಹತ್ ಗುರಿ ಬೆನ್ನಟ್ಟಿದ ಭಾರತ ತಂಡಕ್ಕೆ ಕೊನೆ ಎಸೆತದಲ್ಲಿ ಮೂರು ರನ್ಗಳ ಅಗತ್ಯವಿತ್ತು. ಈ ಹಂತದಲ್ಲಿ ಕ್ರೀಸ್ನಲ್ಲಿದ್ದ 10ನೇ ಕ್ರಮಾಂಕದ ಬ್ಯಾಟರ್ ಮೋಹಿತ್ ಉಳ್ವಾ ಆಕರ್ಷಕ ಬೌಂಡರಿ ಬಾರಿಸಿ ಭಾರತಕ್ಕೆ ರೋಚಕ ಗೆಲುವು ತಂದುಕೊಟ್ಟರು.338 ರನ್ಗಳ ಗುರಿ ಬೆನ್ನಟ್ಟಿದ ಭಾರತ ತಂಡಕ್ಕೆ

ಉತ್ತಮ ಆರಂಭ ಸಿಕ್ಕಿತು.ನಾಯಕ ಲಕ್ಷ್ಯ ರೈಚಂದಾನಿ (80) ಮತ್ತು ಆರ್ಯವೀರ್ ಸೆಹ್ವಾಗ್ (58) 95 ರನ್ಗಳ ಜೊತೆಯಾಟ ಆಡಿದರು. ಆದರೆ, ನಂತರ ಬಂದ ಬ್ಯಾಟರ್ಗಳು ಬಂದಷ್ಟೇ ವೇಗದಲ್ಲಿ ಪೆವಿಲಿಯನ್ ಸೇರಿಕೊಂಡರು.ಪರಿಣಾಮ ಭಾರತ ತಂಡವು 41.3 ಓವರ್ಗಳಲ್ಲಿ 252 ರನ್ಗಳಿಸುವಷ್ಟದಲ್ಲಿ 8 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು.
252 ರನ್ಗಳಿಗೆ ಎಂಟು ವಿಕೆಟ್ ಕಳೆದುಕೊಂಡಾಗ ಭಾರತ ಸೋಲುವುದು ಖಚಿತ ಎಂಬ ವಾತಾವರಣ ನಿರ್ಮಾಣವಾಗಿತ್ತು. ಈ ಹಂತದಲ್ಲಿ
ಜೊತೆಯಾದ ಮನಾಲ್ ಚೌಹಾಣ್ ಮತ್ತು ಮೋಹಿತ್ ಉಳ್ವಾ ಪಾಕಿಸ್ತಾನದ ಗೆಲುವಿನ ಲೆಕ್ಕಾಚಾರ ಉಲ್ಟಾ ಮಾಡಿದರು. ಈ ಜೋಡಿ 9ನೇ ವಿಕೆಟ್ಗೆ 57 ರನ್ಗಳ ಜೊತೆಯಾಟ ಆಡಿದರು. ಮೊತ್ತ 309 ಆಗಿದ್ದಾಗ ಸೆಟ್ ಬ್ಯಾಟರ್ ಮನಾಲ್ ಕೂಡ ವಿಕೆಟ್ ಒಪ್ಪಿಸಿ ಹೊರನಡೆಯುತ್ತಾರೆ. ಈ ಹಂತದಲ್ಲಿ ತಂಡದ ಗೆಲುವಿಗೆ 29 ರನ್ಗಳ ಅಗತ್ಯವಿರುತ್ತದೆ. ಕೊನೆಯವರಾಗಿ ಕ್ರೀಸ್ಗೆ ಇಳಿದ ಚಿಗುರುಪತಿ ವೆಂಕಟ್ ಮೊದಲ ಎಸೆತದಲ್ಲೇ ಬೌಂಡರಿ ಬಾರಿಸಿ, ಕೊನೆಯ 12 ಎಸೆತಗಳಿಗೆ 25 ರನ್ ಬೇಕಾಗುವಂತೆ ನೋಡಿಕೊಳ್ಳುತ್ತಾರೆ.
ಕೊನೆಯವರೆಗೂ ರೋಚಕವಾಗಿ ಸಾಗಿದ ಪಂದ್ಯದಲ್ಲಿ ಅಂತಿಮ ಎಸೆತದಲ್ಲಿ ಭಾರತದ ಗೆಲುವಿಗೆ 3 ರನ್ಗಳ ಅಗತ್ಯವಿತ್ತು. ಈ ಹಂತದಲ್ಲಿ ಮಿಡ್ ವಿಕೆಟ್ ಮೇಲೆ ಆಕರ್ಷಕ ಬೌಂಡರಿ ಬಾರಿಸಿದ ಮೋಹಿತ್ ಅಜೇರಾಗಿ ಉಳಿದು ತಂಡವನ್ನು ಗೆಲುವಿನ ದಡ ಸೇರಿಸಿದರು.














