ಸುಳ್ಯ:ಸುಳ್ಯ ತಾಲೂಕಿನ ಬಾಳುಗೋಡು ಗ್ರಾಮದ ಪದಕ ಮುಳುಗು ಸೇತುವೆ ಇದ್ದಲ್ಲಿ ನೂತನ ಸೇತುವೆ ನಿರ್ಮಾಣಕ್ಕಾಗಿ 1.75ಕೋಟಿ ಅನುದಾನ ಬಿಡುಗಡೆಗೊಂಡಿದ್ದು ದ.ಕ. ಜಿಲ್ಲಾ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ ಗುದ್ದಲಿಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ
ಶ್ರೀ ಹರಿಹರೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಸದಸ್ಯ ದಯಾನಂದ ಕಟ್ಟೆಮನೆ, ಸುಳ್ಯ ಬ್ಲಾಕ್ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಚೇತನ್ ಕಜೆಗದ್ದೆ, ಬಾಳುಗೋಡು ಗ್ರಾಮ ಕಾಂಗ್ರೆಸ್ ಸಮಿತಿಯ ಪ್ರಮುಖರಾದ ಶೈಲೇಶ್ ಕಟ್ಟೆಮನೆ, ಸದಾನಂದ ಬಾಳುಗೋಡು, ಆನಂದ ಬೆದ್ರುಪಣೆ, ದೇವಿದಾಸ ಕೊತ್ನಡ್ಕ, ಮಂಜುನಾಥ ಕಿರಿಭಾಗ, ಯುವ ಕಾಂಗ್ರೆಸ್ ಕಾರ್ಯದರ್ಶಿ ಜೀವನ್ ಮಿತ್ತಡ್ಕ,ಯುವ ಕಾಂಗ್ರೆಸ್ ಪ್ರಮುಖರಾದ
ಪ್ರಮೋದ್ ಬಾಳುಗೋಡು, ಪ್ರಧಾನ್ ಕೂಜುಗೋಡು ಕಟ್ಟೆಮನೆ, ನವೀನ್ ವಾಡ್ಯಪ್ಪನಮನೆ, ಅಖಿನ್ ಬಾಳುಗೋಡು, ನಿರಣ್ ಬಾಳುಗೋಡು, ವಿಶ್ವನಾಥ ಪುಣೇರಿ,ಪುಟ್ಟಣ್ಣ ಪುಣೇರಿ, ಉದಯ ಕುಮಾರ್ ಪುಣೇರಿ, ಸುಕೇಶ್ ಬೆಟ್ಟುಮುಖಿ, ಜಾಣಪ್ಪ ಪುಣೇರಿ,ಗಣೇಶ್ ಪುಣೇರಿ,ಎಲ್ಲಪ್ಪ ಮುಂಡೋಕಜೆ, ರಾಮಚಂದ್ರ ಬೆಟ್ಟುಮುಖಿ, ಪುರುಷೋತ್ತಮ ಮಾನಡ್ಕ, ಭುವನಾ ವಿಶ್ವನಾಥ ಪುಣೇರಿ ಹಾಗೂ ಮತ್ತಿತರ ಗ್ರಾಮಸ್ಥರು ಉಪಸ್ಥಿತರಿದ್ದರು. ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ಚೇತನ್ ಕಜೆಗದ್ದೆ ಸ್ವಾಗತಿಸಿ ಜೀವನ್ ಮಿತ್ತಡ್ಕ ವಂದಿಸಿದರು.














