ಸುಳ್ಯ:ಸುಳ್ಯ ವಿಧಾನ ಸಭಾಕ್ಷೇತ್ರದ ವಿವಿಧ ರೈಲ್ವೆ ಅಭಿವೃದ್ಧಿ ಯೋಜನೆಗಳಿಗೆ ಅನುದಾನ ಒದಗಿಸಬೇಕು ಎಂದು ಶಾಸಕಿ ಭಾಗೀರಥಿ ಮುರುಳ್ಯ ಅವರು ಕೇಂದ್ರ ರೈಲ್ವೆ ಸಚಿವರಾದ ಅಶ್ವಿನಿ ವೈಷ್ಣವ್ ಅವರಿಗೆ ಸಂಸದಕ್ಯಾ ಬ್ರಿಜೇಶ್ ಚೌಟ ಅವರ ಮುಖಾಂತರ ಮನವಿ ಸಲ್ಲಿಸಿದರು. ಮಂಗಳೂರಿಗೆ ಆಗಮಿಸಿದ
ರೈಲ್ವೆ ಸಚಿವರನ್ನು ಭೇಟಿ ಮಾಡಿ ಮನವಿ ಸಲ್ಲಿಸಲಾಯಿತು. ಸವಣೂರು ಮತ್ತು ಎಡಮಂಗಳದಲ್ಲಿ ರೈಲ್ವೆ ಗೇಟ್ನಿಂದ ಸಾರ್ವಜನಿಕರಿಗೆ ತೊಂದರೆಯಾಗುತ್ತಿದ್ದು ಅದನ್ನು ಸರಿ ಪಡಿಸುವ ದೃಷ್ಟಿಯಲ್ಲಿ ರೈಲ್ವೆ ಒವರ್ ಬ್ರಿಡ್ಜ್ ನಿರ್ಮಾಣ ಮಾಡಬೇಕು ಮತ್ತು ಸುಳ್ಯ ಕ್ಷೇತ್ರದಲ್ಲಿ ಇರುವ ಎಲ್ಲಾ ರೈಲ್ವೆ ನಿಲ್ದಾಣಗಳ ಮೂಲಭೂತ ಸೌಕರ್ಯಗಳನ್ನು ಅಭಿವೃದ್ಧಿ ಪಡಿಸಬೇಕು ಮತ್ತು ಕಾಣಿಯೂರು ರೈಲ್ವೆ ನಿಲ್ದಾಣವನ್ನು ಪಕ್ಕದ ಎಲಡ್ಕಕ್ಕೆ ಸ್ಥಳಾಂತರಗೊಳಿಸಿ ಟರ್ಮಿನಲ್ ನಿಲ್ದಾಣ ನಿರ್ಮಿಸಬೇಕು ಎಂದು ಮನವಿಯಲ್ಲಿ ವಿನಂತಿಸಲಾಯಿತು. ರಾಜ್ಯ ಖಾತೆ ಸಚಿವರಾದ ವಿ.ಸೊಮಣ್ಣ ಅವರಿಗೂ ಶಾಸಕರು ಈ ಮನವಿಯನ್ನು ಸಲ್ಲಿಸಿದ್ದರು.














