ಸಂಪಾಜೆ: ಮಾಣಿ-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಪಾಜೆ ಗ್ರಾಮದ ಗೂನಡ್ಕ ಬೀಜದಕಟ್ಟೆ ಬಳಿ ಬೃಹತ್ ಗಾತ್ರದ ಮರ ಬಿದ್ದು ವಾಹನ ಸಂಚಾರಕ್ಕೆ ತಡೆ ಉಂಟಾದ ಘಟನೆ ನಡೆದಿದೆ. ಇದರಿಂದ ಗಂಟೆಗೂ ಹೆಚ್ಚು ಕಾಲ
ರಾಷ್ಟ್ರೀಯ ಹೆದ್ದಾರಿಯಲ್ಲಿ ತಡೆ ಉಂಟಾಯಿತು. ಬಳಿಕ ಸ್ಥಳೀಯರು ಸೇರಿ ಮರ ತೆರವು ಕಾರ್ಯಾಚರಣೆ ನಡೆಸಿದರು. 2 ಜೆಸಿಬಿ ಸಹಾಯದಿಂದ ಮರ ತೆರವು ಮಾಡಲಾಯಿತು. ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಜಿ.ಕೆ.ಹಮೀದ್ ಗೂನಡ್ಕ, ಉಪಾಧ್ಯಕ್ಷ ಎಸ್.ಕೆ. ಹನೀಫ್ ವಿಪತ್ತು ನಿರ್ವಹಣಾ ತಂಡದ ಚಿದಾನಂದ ಮೂಡನಕಜೆ,ಎಸ್.ಎಸ್ ಎಫ್ ತಂಡದ ಜಾಬಿರ್, ಹ್ಯಾರಿಸ್, ಸಿದ್ದೀಕ್, ಸ್ಥಳೀಯರಾದ ಅಶ್ರಫ್, ನವೀನ್ ಜಿ. ಜಿ, ರಕ್ಷಿತ್ ಜಿ. ಜಿ, ಇಬ್ರಾಹಿಂ ಎಂ. ಬಿ. ಆಟೋ ಚಾಲಕ ಕೃಷ್ಣ ಪ್ರಸಾದ್, ಅಮೀರ್ ಜಿ.ಎಂ ಮತ್ತಿತರರು ಸಹಕರಿಸಿದರು.














