ಸುಳ್ಯ:ಕಳೆದ ಮೂರೂವರೆ ದಶಕಗಳಿಗಿಂತಲೂ ಹೆಚ್ಚು ಸಮಯದಿಂದ ಸುಳ್ಯ ತಾಲೂಕಿನ ಗ್ರಾಮೀಣ ವಿದ್ಯಾರ್ಥಿಗಳ ಭರವಸೆಯ ಆಶಾಕಿರಣವಾಗಿ ಮೂಡಿ ಬಂದ ಶಿಕ್ಷಣ ಸಂಸ್ಥೆ ಸುಳ್ಯದ ಶ್ರೀ ಶಾರದಾ ಪದವಿ ಪೂರ್ವ ಕಾಲೇಜು. ಮೌಲ್ಯಯುತ ಶಿಕ್ಷಣ ನೀಡುವ ಮೂಲಕ ನಿರಂತರ ಶೇ.100 ಫಲಿತಾಂಶ ದಾಖಲಿಸುತ್ತಿರುವ ಶಾರದಾ ಪದವಿ ಪೂರ್ವ ಕಾಲೇಜು ಇದೀಗ ಸಾಧನೆಯ ಹಾದಿಯಲ್ಲಿ ಮುನ್ನಡೆದು ಅತ್ಯುತ್ತಮ ಶಿಕ್ಷಣವನ್ನು
ಧಾರೆಯೆರೆದು ರಾಜ್ಯದಲ್ಲಿಯೇ ಮುಂಚೂಣಿ ಶಿಕ್ಷಣ ಸಂಸ್ಥೆಗಳ ಸಾಲಿಗೆ ಸೇರಿದೆ. ಶಾರದಾ ಪದವಿ ಪೂರ್ವ ಕಾಲೇಜಿನಲ್ಲಿ 2026-27ನೇ ಸಾಲಿನಲ್ಲಿ ದಾಖಲಾತಿ ಆರಂಭಗೊಂಡಿದ್ದು. ದಾಖಲಾತಿಗೆ ಹೆಚ್ಚಿನ
ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಆಗಮಿಸುತ್ತಿದ್ದಾರೆ. ಅತ್ಯಾಧುನಿಕ ವ್ಯವಸ್ಥೆಗಳೊಂದಿಗೆ ಉತ್ತಮ ಕಾಲೇಜು ಕಟ್ಟಡ, ತರಗತಿಗಳು, ಅನುಭವಿ ಮತ್ತು ಪರಿಣಿತ ಶಿಕ್ಷಕ ವರ್ಗ, ಉತ್ತಮ ಗ್ರಂಥಾಲಯ, ಲ್ಯಾಬ್ಗಳು, ಪಠ್ಯ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಅತ್ಯುತ್ತಮ ವಾತಾವರಣವನ್ನು ಹೊಂದಿರುವ ಪ್ರತಿಷ್ಠಿತ ಸಂಸ್ಥೆ ಶ್ರೀ ಶಾರದಾ ಪದವಿ ಪೂರ್ವ ಕಾಲೇಜು. ಈ ಹಿಂದೆ ಹೆಣ್ಣು ಮಕ್ಕಳಿಗೆ ಮಾತ್ರ ಸೀಮಿತವಾಗಿದ್ದ ಕಾಲೇಜು ಮೂರು ವರ್ಷಗಳ ಹಿಂದೆ ಕೋ-ಎಜ್ಯುಕೇಷನ್ ಮಾದರಿ ಅಳವಡಿಸಿದ್ದು ಗಂಡು ಹಾಗೂ ಹೆಣ್ಣು ಮಕ್ಕಳು ಒಟ್ಟಾಗಿ ಕಲಿಯುವ ಮಿಕ್ಸಡ್ ಕಾಲೇಜಾಗಿ ಮಾರ್ಪಾಡಾಗಿದ್ದು ಗಂಡು ಹಾಗೂ ಹೆಣ್ಣು ಮಕ್ಕಳು ಪ್ರವೇಶ ಪಡೆದು ಶಿಕ್ಷಣ ಪಡೆಯುತ್ತಿದ್ದಾರೆ.

ಈ ಬಾರಿ ಪದವಿ ಪೂರ್ವ ಕಾಲೇಜಿನಲ್ಲಿ ದ್ವಿತೀಯ ಪಿಯುಸಿಯಲ್ಲಿ ವಾಣೀಜ್ಯ ಹಾಗೂ ಕಲಾ ವಿಭಾಗದಲ್ಲಿ ಶೇ.100 ಫಲಿತಾಂಶ, ವಿಜ್ಞಾನ ವಿಭಾಗದಲ್ಲಿ ಶೇ.99 ಫಲಿತಾಂಶ ದಾಖಲಿಸಿ ಅತ್ಯುತ್ತಮ ದಾಖಲೆ ಮಾಡಿದೆ. ಕಲಾವಿಭಾಗದಲ್ಲಿ 600ರಲ್ಲಿ 595 ಅಂಕ ಪಡೆದು ಫಾತಿಮಾತ್ ಶಹ್ಲಾ ರಾಜ್ಯದಲ್ಲಿ ಎರಡನೇ ಸ್ಥಾನ ಪಡೆದಿದ್ದಾರೆ.
ಶಾರದಾ ಪ್ರೌಢ ಶಾಲೆಯು ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿಯೂ ಶೇ.100 ಫಲಿತಾಂಶ ದಾಖಲಿಸಿದೆ.
ದಕ್ಷಿಣ ಕನ್ನಡ ಗೌಡ ವಿದ್ಯಾ ಸಂಘ (ರಿ.)ಸುಳ್ಯ ಇದರ ಆಡಳಿತಕ್ಕೆ ಒಳಪಟ್ಟ ಸಂಸ್ಥೆ ಶ್ರೀ ಶಾರದಾ ಪದವಿ ಪೂರ್ವ ಕಾಲೇಜು.1921ರಲ್ಲಿ ಆಸ್ತಿತ್ವಕ್ಕೆ ಬಂದ ದಕ್ಷಿಣ ಕನ್ನಡ ಗೌಡ ವಿದ್ಯಾ ಸಂಘಕ್ಕೆ ಬಹುದೊಡ್ಡ ಇತಿಹಾಸವಿದೆ. ಪ್ರಾರಂಭದಲ್ಲಿ ವಿದ್ಯಾರ್ಥಿ ನಿಲಯಗಳನ್ನು ಸ್ಥಾಪಿಸಿ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ಪಡೆಯುವುದಕ್ಕೆ ಸಹಕಾರಿ ಯಾಗಿದ್ದು, ನಂತರದ ದಿನಗಳಲ್ಲಿ ಸುಳ್ಯ ಮತ್ತು ಪುತ್ತೂರಿನಲ್ಲಿ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸುವುದರ ಮೂಲಕ ಶೈಕ್ಷಣಿಕ ಕ್ರಾಂತಿಯನ್ನು ಮಾಡಿದ ಹೆಗ್ಗಳಿಕೆಯಾಗಿದೆ. ಡಾ.ಕುರುಂಜಿ ವೆಂಕಟರಮಣ ಗೌಡ ಅವರ ನೇತೃತ್ವದಲ್ಲಿ ಪುತ್ತೂರಿನಲ್ಲಿ ಶ್ರೀ ಮಹಾಲಿಂಗೇಶ್ವರ ಕೈಗಾರಿಕಾ ತರಬೇತಿ ಕೇಂದ್ರವನ್ನು 1986ರಲ್ಲಿ ಸಂಘದ ಆಶ್ರಯದಲ್ಲಿ ಸ್ಥಾಪಿಸಿದರು.

ವಿದ್ಯಾರ್ಥಿನಿಯರಿಗಾಗಿಯೇ 1982ರಲ್ಲಿ ಶ್ರೀ ಶಾರದಾ ಹೆಣ್ಣು ಮಕ್ಕಳ ಪ್ರೌಢಶಾಲೆಯನ್ನು ಸ್ಥಾಪಿಸಲಾಯಿತು.1991 ಜುಲೈ 9 ರಂದು ನೂತನ ಪಿಯುಸಿ ಕಲಾ ವಿಭಾಗ ಪ್ರಾರಂಭವಾಗುವ ಮೂಲಕ ಶ್ರೀಶಾರದಾ ಪದವಿ ಪೂರ್ವ ಮಹಿಳಾ ಕಾಲೇಜು ಉದಯಿಸಿತು.ಆರಂಭದಲ್ಲಿ ಕಲಾ ವಿಭಾಗ ಮಾತ್ರ ಇದ್ದು ಕಾಲೇಜು ಅಭಿವೃದ್ಧಿ ಹೊಂದಿ ಬಳಿಕದ ವರ್ಷಗಳಲ್ಲಿ ಪಿಯುಸಿಯಲ್ಲಿ ವಿಜ್ಞಾನ ವಿಭಾಗ ಮತ್ತು ವಾಣಿಜ್ಯ ವಿಭಾಗವನ್ನು ತೆರೆಯಲಾಯಿತು.
ಡಾ.ಕುರುಂಜಿಯವರ ಬಳಿಕ ಒಂದು ವರ್ಷಗಳ ಕಾಲ ಡಾ.ಕೆ.ವಿ ಚಿದಾನಂದ ಅವರು ಸಂಸ್ಥೆಯನ್ನು ಮುನ್ನಡೆಸಿದರು. 2010ರಲ್ಲಿ ಧನಂಜಯ ಅಡ್ಡಂಗಾಯ ಅವರ ಅಧ್ಯಕ್ಷತೆಯಲ್ಲಿ ಹೊಸ ಆಡಳಿತ ಮಂಡಳಿ ಅಸ್ತಿತ್ವಕ್ಕೆ ಬಂದಿತು. ಕಳೆದ 16 ವರ್ಷಗಳಿಂದ ಧನಂಜಯ ಅಡ್ಪಂಗಾಯ ಅವರ ನೇತೃತ್ವದಲ್ಲಿ ಶಿಕ್ಷಣ ಸಂಸ್ಥೆ ಪ್ರಗತಿಯ ಹಾದಿಯಲ್ಲಿ ಮುನ್ನಡೆದಿದೆ. ಕಳೆದ ಒಂದೂವರೆ ದಶಕಗಳಿಂದ ಮೂರು ವಿಭಾಗಗಳಲ್ಲಿ ವಿದ್ಯಾರ್ಥಿನಿಯರ ದಾಖಲಾತಿಯಲ್ಲಿ ಗಣನೀಯ ಏರಿಕೆ ಕಂಡಿದೆ.

2009ರಲ್ಲಿ ‘ಎ’ ಗ್ರೇಡ್ ಮಾನ್ಯತೆಯೊಂದಿಗೆ ಸರಕಾರದ ಅನುದಾನವನ್ನು ಪಡೆದುಕೊಂಡು ಬಳಿಕ ದಯಾಮಣಿ ಕೆ. ಅವರು ಪ್ರಾಂಶುಪಾಲರಾಗಿ ಸಂಸ್ಥೆಯನ್ನು ಮುನ್ನಡೆಸಿಕೊಂಡು ಬರುತ್ತಿದ್ದಾರೆ. ಪ್ರಸ್ತುತ ವಿಜ್ಞಾನ,ವಾಣೀಜ್ಯ, ಕಲಾ ವಿಭಾಗ ಇದ್ದು ಉತ್ತಮ ಫಲಿತಾಂಶ ದಾಖಲಿಸುತಿದೆ.
ಸೌಲಭ್ಯಗಳು :
ಅರ್ಹ ಮತ್ತು ಅನುಭವಿ ಉಪನ್ಯಾಸಕ ವೃಂದ, ಉತ್ತಮ ರಚನಾತ್ಮಕ ತರಗತಿ ಕೊಠಡಿಗಳು.ಸುಸಜ್ಜಿತ ವಿಜ್ಞಾನ ಪ್ರಯೋಗಾಲಯ, ಸಂಪನ್ಮೂಲ ಗ್ರಂಥಾಲಯ,ಸ್ಮಾರ್ಟ್ ಕ್ಲಾಸ್ ಸೌಲಭ್ಯ,CET/ NEET ಕೋಚಿಂಗ್ ಸೌಲಭ್ಯ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ.ಸಾಂಸ್ಕೃತಿಕ ಮತ್ತು ಕ್ರೀಡಾ ಚಟುವಟಿಕೆಗಳಿಗೆ ಪ್ರಾಮುಖ್ಯತೆ. ಮಧ್ಯಾಹ್ನದ ಊಟ, ಯೋಗ, ಧ್ಯಾನ ಮತ್ತು ಪ್ರಾಣಾಯಾಮ ಕಲಿಸಲಾಗುತ್ತದೆ.ಕಾಲೇಜು ವಾಹನ ವ್ಯವಸ್ಥೆಯೂ ಇದೆ.
ಶಿಕ್ಷಣದ ಸಂಯೋಜನೆಗಳು:
ಕನ್ನಡ ಮತ್ತು ಇಂಗ್ಲೀಷ್ ಬೋಧನಾ ಮಾಧ್ಯಮವಾಗಿದ್ದು
ಕಲಾ ವಿಭಾಗದಲ್ಲಿ ಇತಿಹಾಸ, ಅರ್ಥಶಾಸ್ತ್ರ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ
ವಾಣಿಜ್ಯ ವಿಭಾಗದಲ್ಲಿ ಇತಿಹಾಸ, ಅರ್ಥಶಾಸ್ತ್ರ, ವ್ಯವಹಾರ ಅಧ್ಯಯನ, ಲೆಕ್ಕಶಾಸ್ತ್ರ,ವಿಜ್ಞಾನ ವಿಭಾಗದಲ್ಲಿ ಭೌತಶಾಸ್ತ್ರ, ರಸಾಯನಶಾಸ್ತ್ರ, ಗಣಿತಶಾಸ್ತ್ರ, ಜೀವಶಾಸ್ತ್ರ ಹಾಗೂ ಭಾಷಾ ವಿಷಯವಾಗಿ ಕನ್ನಡ, ಇಂಗ್ಲೀಷ್ ಇದೆ. ಸಹಪಠ್ಯವಾಗಿ ದೈಹಿಕ ಶಿಕ್ಷಣ,ರೆಡ್ ಕ್ರಾಸ್ ಯುನಿಟ್,ಸಾಂಸ್ಕೃತಿಕ ಸಂಘ,ರೀಡರ್ ಕ್ಲಬ್, ಇಕೋ ಕ್ಲಬ್ ಇದೆ.
ಕಲಾ ವಿಭಾಗಕ್ಕೆ ಸರಕಾರಿ ಶುಲ್ಕ ಮಾತ್ರ:
ಅತೀ ಕಡಿಮೆ ಶುಲ್ಕದಲ್ಲಿ ಗುಣಮಟ್ಟದ ಶಿಕ್ಷಣ ನೀಡುವ ಶಿಕ್ಷಣ ಸಂಸ್ಥೆ ಶ್ರೀ ಶಾರದ ಪದವಿ ಪೂರ್ವ ಕಾಲೇಜು. ಈ ವರ್ಷ ಕಲಾ ವಿಭಾಗ ಪ್ರವೇಶಕ್ಕೆ ಕೇವಲ ಸರಕಾರಿ ಶುಲ್ಕ ಮಾತ್ರ ಪಡೆದುಕೊಳ್ಳಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
08257-230286
9481212588, 9449451381
Email : sharadass116@gmail.com














