ಸುಳ್ಯ:2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶವು ಪ್ರಕಟವಾಗಿದ್ದು, ಸ್ನೇಹ ಶಾಲೆಗೆ ಶೇ.100 ಫಲಿತಾಂಶ ಬಂದಿರುತ್ತದೆ. ಪರೀಕ್ಷೆಗೆ ಹಾಜರಾದ 19 ವಿದ್ಯಾರ್ಥಿಗಳಲ್ಲಿ ಎಲ್ಲರೂ

ಉತ್ತೀರ್ಣರಾಗಿದ್ದಾರೆ. 10 ವಿದ್ಯಾರ್ಥಿಗಳು ಅತ್ಯುತ್ತಮ ಶ್ರೇಣಿಯಲ್ಲಿ ಹಾಗೂ 9 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಮೂಲಕ ಉತ್ತಮ ಫಲಿತಾಂಶ ದಾಖಲಾಗಿದೆ. ವಿದ್ಯುಲತಾ ಪಿ.ಎನ್.(590), ವೈಶಾಲಿ ಎಸ್.ಭಟ್(587), ಗಗನ್ ಎ.ವಿ,(582),ಅನ್ವಯಿ ಗಣೇಶ್ ಶರ್ಮ(578),ಯಶ್ವಿತಾ ಪಿ.ಜೆ(576), ಚೈತನ್ಯ(574), ಅರವಿಂದ ಕೆ.ಆರ್(558), ದೃಷ್ಟಿ.ಡಿ.ಕೆ(558), ಭುವನ್ ಭಟ್(538) ವರುಣ್.ಕೆ(534) ಅತೀ ಹೆಚ್ಚು ಅಂಕ ಪಡೆದಿದ್ದಾರೆ.














