ಸುಳ್ಯ: ಶಾಸಕರ ಶಿಫಾರಸ್ಸಿನ ಮೇರೆಗೆ ಸುಳ್ಯ ಮತ್ತು ಕಡಬ ತಾಲ್ಲೂಕಿನ ಜಿಲ್ಲಾ ಪಂಚಾಯತ್ ಮುಖ್ಯ ರಸ್ತೆ ಮತ್ತು ಲೊಕೋಪಯೋಗಿ ರಸ್ತೆಗಳಲ್ಲಿ ಶಿಥಿಲಗೊಂಡಿರುವ 5 ಸೇತುವೆಗಳ ಅಭಿವೃದ್ಧಿಗೆ 5ಕೋಟಿ ರೂ.ಅನುದಾನ ಬಿಡುಗಡೆಗೊಂಡಿದೆ ಎಂದು ಶಾಸಕಿ ಭಾಗೀರಥಿ ಮುರುಳ್ಯ ಅವರ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ. ಸುಳ್ಯ ತಾಲೂಕಿನ
ನಡುಗಲ್ಲು-ಹರಿಹರ-ಪಲ್ಲತಡ್ಕ ಬಾಳುಗೋಡು ರಸ್ತೆಯ ಕಿ.ಮೀ 10.75 ರಲ್ಲಿ ಪದಕ ಎಂಬಲ್ಲಿ ಸೇತುವೆ ನಿರ್ಮಾಣಕದಕೆ 1.75 ಕೋಟಿ, ಮಡಪ್ಪಾಡಿ ಗ್ರಾಮದ ಸೇವಾಜೆ-ಮಡಪ್ಪಾಡಿ- ಕಂದ್ರಪ್ಪಾಡಿ-ಗುತ್ತಿಗಾರು ರಸ್ತೆಯ ಕಿ.ಮೀ 11.70ರ ಮೆಟ್ಟಿನಡ್ಕ ಎಂಬಲ್ಲಿ ಸೇತುವೆ ನಿರ್ಮಾಣಕ್ಕೆ 1.50 ಕೋಟಿ
ಮಂಡೆಕೋಲು ಗ್ರಾಮದ ಸುಳ್ಯ-ಕಾಂತಮಂಗಲ- ಅಜ್ಜಾವರ-ಮಂಡೆಕೋಲು- ಕನ್ಯಾನ ರಸ್ತೆಯ ಕಿ.ಮೀ 8.50 ರಲ್ಲಿ ತೋಟಂಪ್ಪಾಡಿ ಎಂಬಲ್ಲಿ ಸೇತುವೆ ನಿರ್ಮಾಣಕ್ಕೆ 60 ಲಕ್ಷ
ಸುಳ್ಯ ತಾಲೂಕು ಪುಳಿಕುಕ್ಕು-ಎಡಮಂಗಲ- ಅಲೆಕ್ಕಾಡಿ ರಸ್ತೆಯ ಕಿ.ಮೀ 2.50 ರಲ್ಲಿ ಡೆಕ್ಕಳ ಎಂಬಲ್ಲಿ ಸೇತುವೆ ನಿರ್ಮಾಣಕ್ಕೆ (ಹಾನಿಗೊಳಗಾದ ಕಿರಿದಾದ ಸೇತುವೆ ಬದಲಿಗೆ) 25 ಲಕ್ಷ, ಪೈಚಾರು-ಬೆಳ್ಳಾರೆ-ಸವಣೂರು-ಕುದ್ಮಾರು-ಅಲಂಕಾರು-ಸುಬ್ರಹ್ಮಣ್ಯ ರಸ್ತೆಯ ಕಿ.ಮೀ 3.50 ರಲ್ಲಿ ಸೇತುವೆ ನಿರ್ಮಾಣಕ್ಕೆ 90 ಲಕ್ಷ ಬಿಡುಗಡೆಯಾಗಿದೆ ಎಂದು ಪ್ರಕಟಣೆ ತಿಳಿಸಿದೆ.













