ಸುಳ್ಯ: ಪಾಟಾಳಿ ಯಾನೆ ಗಾಣಿಗ ಸಮಾಜ ಸೇವಾ ಸಂಘ ಮಾಹಸಭೆ ಹಾಗೂ ಆರೋಗ್ಯ ನಿಧಿ ಮತ್ತು ವಿಧ್ಯಾನಿಧಿ ಹಸ್ತಾಂತರ ಕಾರ್ಯಕ್ರಮವು ವರ್ತಕರ ಭವನ ಸುಳ್ಯದಲ್ಲಿ ಭಾನುವಾರ ನಡೆಯಿತು.ಸಂಘದ ಅಧ್ಯಕ್ಷ ವೆಂಕಟ್ರಮಣ ಬೇರ್ಪಡ್ಕ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ 5 ಜನರಿಗೆ ಹಾಗೂ ಹತ್ತನೇ ತರಗತಿ ಹಾಗೂ ಪಿಯುಸಿ ಯಲ್ಲಿ ಅತೀ ಹೆಚ್ಚು ಅಂಕ ಪಡೆದ ವಿಧ್ಯಾರ್ಥಿಗಳಿಗೆ ವಿಧ್ಯಾನಿಧಿ ನೀಡಿ ಗೌರವಿಸಲಾಯಿತು. ಮಾಹಾ ಸಭೆಯಲ್ಲಿ
ನೂತನ ಪಧಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ನಡೆದು ನೂತನ ಸಮಿತಿ ಅಧ್ಯಕ್ಷರಾಗಿ ಸುರೇಶ್ ಕರ್ಲಪ್ಪಾಡಿ ಹಾಗೂ ಕಾರ್ಯದರ್ಶಿಯಾಗಿ ಗೋಪಾಲಕೃಷ್ಣ ಮೊರಂಗಲ್ಲು, ಕೋಶಾಧಿಕಾರಿಯಾಗಿ ರಾಧಕೃಷ್ಣ ಬೇರ್ಪಡ್ಕ,ಉಪಾಧ್ಯಕ್ಷರಾಗಿ ಹೇಮಾವತಿ ದಬ್ಬಡ್ಕ,ಜೊತೆ ಕಾರ್ಯದರ್ಶಿ ನಿತೇಶ್ ಎರ್ಮೆಟ್ಟಿ,ಸಂಘಟನಾ ಕಾರ್ಯದರ್ಶಿಯಾಗಿ ವಿಜಯ ಎರ್ಮೆಟ್ಟಿ ಹಾಗೂ ನಿರ್ದೇಶಕರುಗಳಾಗಿ ವೆಂಕಟ್ರಮಣ ಬೇರ್ಪಡ್ಕ,ಸಚಿತ್ ಕಲ್ಮಡ್ಕ ,ಸತ್ಯವತಿ ,ಚಂದ್ರಶೇಖರ ಉದ್ದಂತಡ್ಕ ,ಸಂಜಯ್ ನೆಟ್ಟಾರು, ಸೌಮ್ಯ ರಮೇಶ್ ಇರಂತಮಜಲು,ಕೇಶವ ಮೊರಂಗಲ್ಲು, ವಿಶಾಲಾಕ್ಷಿ ಮೊರಂಗಲ್ಲು ಹಾಗೂ ಪ್ರವೀಣ್ ಕುಮಾರ್ ಆಯ್ಕೆಯಾದರು.
ಆಂತರಿಕ ಲೆಕ್ಕಪರಿಶೋಧಕರಾಗಿ ಮಹಾಲಿಂಗನ್ ಭಾಜರ್ ತೊಟ್ಟಿ ಹಾಗೂ ಕಾನೂನು ಸಲಹೆಗಾರರಾಗಿ ವಕೀಲರಾದ ನಾರಾಯಣ ಕೆ ಆಯ್ಕೆಯಾದರು. ಕಾರ್ಯದರ್ಶಿ ಸಂಜಯ್ ನೆಟ್ಟಾರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.












