ಸುಳ್ಯ:ಜೇಸಿಐ ಸುಳ್ಯ ಪಯಸ್ವಿನಿ ಘಟಕಕ್ಕೆ ವಲಯಾಧ್ಯಕ್ಷ ಸಂತೋಷ್ ಶೆಟ್ಟಿ ಅವರ ಅಧಿಕೃತ ಭೇಟಿ ಕಾರ್ಯಕ್ರಮ ಸಂಚಯ ನಿವಾಸ ಚೂಂತಾರು ಇಲ್ಲಿ ನಡೆಯಿತು.ಜೇಸಿಐ ಸುಳ್ಯ ಪಯಸ್ವಿನಿ ಅಧ್ಯಕ್ಷೆ ಲತಾಶ್ರೀ ಸುಪ್ರೀತ್ ಮೋಂಟಡ್ಕ ಅಧ್ಯಕ್ಷತೆ ವಹಿಸಿದ್ದರು. ಘಟಕದ ಬುಲೇಟಿನ್ ಪಯಸ್ವಿನಿಯನ್ನು
ವಲಯಾಧ್ಯಕ್ಷರು ಬಿಡುಗಡೆ ಗೊಳಿಸಿದರು.
ಮುಖ್ಯ ಅತಿಥಿಗಳಾಗಿ ಜೇಸಿಐ ಭಾರತ ವಲಯ 15ರ ನೇತ್ರಾವತಿ ರೀಜನ್ ಬಿ ಇದರ ವಲಯ ಉಪಾಧ್ಯಕ್ಷ ಜಿತೇಶ್ ಪಿರೇರಾ ಭಾಗವಹಿಸಿದ್ದರು. ಕಾರ್ಯಕ್ರಮವನ್ನು ಆಯೋಜಿಸಲು ಸಹಕರಿಸಿದ ಜೇಸಿಐ ಪೂರ್ವ ವಲಯಾಧ್ಯಕ್ಷ ಅಶೋಕ್ ಚೂಂತಾರು ದಂಪತಿಗಳನ್ನು ಸನ್ಮಾನಿಸಲಾಯಿತು.ಗುರುರಾಜ್ ಅಜ್ಜಾವರ ಅತಿಥಿಗಳನ್ನು ವೇದಿಕೆಗೆ ಆಹ್ವಾನಿಸಿದರು. ರವಿಕುಮಾರ್ ಅಕ್ಕೋಜಿಪಾಲ್ ಜೇಸಿವಾಣಿ ವಾಚಿಸಿದರು. ವಿನೋದ್ ಮೂಡಗದ್ದೆ ಅಭಿನಂದನಾ ಪತ್ರ ವಾಚಿಸಿದರು. ಜೇಸಿಐ ಸುಳ್ಯ ಪಯಸ್ವಿನಿಯ ಕಾರ್ಯದರ್ಶಿ ಜೇಸಿ ತಾರಾ ಮಾಧವ ವಂದಿಸಿದರು.












