ಸುಳ್ಯ:ನಿರಂತರ 12 ವರ್ಷಗಳಿಂದ ಶೇ.100 ಫಲಿತಾಂಶ ದಾಖಲಿಸುವ, ಅತ್ಯಾಧುನಿಕ ಶೈಕ್ಷಣಿಕ ವ್ಯವಸ್ಥೆಗಳೊಂದಿಗೆ ಸಿಬಿಎಸ್ಇ ಸಿಲಬಸ್ನಲ್ಲಿ ಗುಣಮಟ್ಟದ ಮತ್ತು ಮೌಲ್ಯಯುತ ಶಿಕ್ಷಣ ನೀಡುವ
ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಕೆವಿಜಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್. ಸ್ಕೂಲ್ನಲ್ಲಿ 2026-26ನೇ ಶೈಕ್ಷಣಿಕ ವರ್ಷಕ್ಕೆ ಪ್ರವೇಶಾತಿ ಆರಂಭಗೊಂಡಿದೆ.ಪ್ರತಿವರ್ಷ ಶೇ.100 ಫಲಿತಾಂಶ ಪಡೆಯುವುದರ ಜೊತೆಗೆ
ಉತ್ತಮ ಅಂಕಗಳೊಂದಿಗೆ ಉನ್ನತ ಶ್ರೇಣಿಯಲ್ಲಿ ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಿರುವುದು ಇಲ್ಲಿನ ಹೆಗ್ಗಳಿಕೆ.
ಸಂಸ್ಥೆಯಲ್ಲಿ ಪ್ಲೇ ಹೋಂ, ಕಿಂಡರ್ ಗಾರ್ಟನ್ ಮತ್ತು ಒಂದರಿಂದ 10ನೇ ತರಗತಿಯವರೆಗೆ ಸಿಬಿಎಸ್ಇ ಸಿಲಬಸ್ನ ಶಿಕ್ಷಣ ನೀಡಲಾಗುತಿದೆ.
ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಕಮಿಟಿ ಬಿ ಅಧ್ಯಕ್ಷ ಡಾ.ರೇಣುಕಾಪ್ರಸಾದ್ ಕೆ.ವಿ.ಅವರ ಆಡಳಿತಕ್ಕೆ ಒಳಪಟ್ಟ ಕೆವಿಜಿ ಇಂಟರ್ನ್ಯಾಷನಲ್ ಪಬ್ಲಿಕ್ ಸ್ಕೂಲ್ ಸುಳ್ಯ ತಾಲೂಕಿನ ನಗರ ಹಾಗೂ ಗ್ರಾಮೀಣ ಭಾಗದ ಹಾಗೂ ರಾಜ್ಯದ ವಿವಿಧ ಭಾಗಗಳ ವಿದ್ಯಾರ್ಥಿಗಳಿಗೆ

ಮೌಲ್ಯಯುತ ಶಿಕ್ಷಣ ಧಾರೆಯೆರೆಯುವ ಮೂಲಕ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾಗಿ ಹೆಸರು ಮಾಡಿದೆ. ಕೇಂದ್ರಿಯ ಪಠ್ಯ ಕ್ರಮದಲ್ಲಿ (CBSE) ಶಿಕ್ಷಣ ನೀಡುವುದರ ಜೊತೆಗೆ ಮಕ್ಕಳ ಸರ್ವಾಂಗಿಣ ಪ್ರಗತಿಗೆ ಇಲ್ಲಿ ಆದ್ಯತೆ ನೀಡಲಾಗುತಿದೆ. ಸತತ ಶೇ.100 ಫಲಿತಾಂಶದೊಂದಿಗೆ ಸ್ಕೂಲ್ ಮುನ್ನಡೆದಿದ್ದು ರಾಜ್ಯದ ಮುಂಚೂಣಿ ಸ್ಕೂಲ್ಗಳ ಪಟ್ಟಿಗೆ ಸೇರಿದೆ.
ಸ್ಕೂಲ್ ಆಧುನಿಕ ಸೌಲಭ್ಯಗಳ ಆಗರ:
ಎಲ್ಲಾ ರೀತಿಯ ಆಧುನಿಕ ಸೌಲಭ್ಯಗಳು ಹಾಗು ಎಲ್ಲಾ ಸವಲತ್ತುಗಳೊಂದಿಗೆ ಕಾರ್ಯಾಚರಿಸುವ ಸ್ಕೂಲ್ನಲ್ಲಿ ಡಿಜಿಟಲ್ ಮಲ್ಟಿಮೀಡಿಯಾ ಕ್ಲಾಸ್ ರೂಮ್ಗಳು,ಉತ್ತಮ ಶೈಕ್ಷಣಿಕ ಅರ್ಹತೆ ಹೊಂದಿದ ನುರಿತ ಮತ್ತು ಅನುಭವಿ ಶಿಕ್ಷಕರು,ಹೈಟೆಕ್ ಕಂಪ್ಯೂಟರ್ ಲ್ಯಾಬ್ಗಳು, ಅತ್ಯಾಧುನಿಕ ಮ್ಯಾಥ್ಮೆಟಿಕ್ಸ್ ಮತ್ತು ಸೈನ್ಸ್ ಲ್ಯಾಬ್ಗಳು, ಉತ್ತಮ ಕ್ರೀಡಾ ಸೌಲಭ್ಯಗಳು,ಉತ್ತಮ ಕಲಾ ಸಾಂಸ್ಕೃತಿಕ ವಾತಾವರಣ, ಸ್ಪರ್ಧಾತ್ಮಕ ಪರೀಕ್ಷಾ ತರಬೇತಿಗಳು, ಸ್ವಿಮ್ಮಿಂಗ್, ಡಾನ್ಸ್, ಕರಾಟೆ, ಯೋಗ, ಆರ್ಟ್, ಕ್ರಾಪ್ಟ್ ತರಗತಿಗಳು, ಮೆಸ್ ವ್ಯವಸ್ಥೆ, ಸುಳ್ಯ ಮತ್ತು ಪರಿಸರದಲ್ಲಿ ವಿದ್ಯಾರ್ಥಿಗಳ ಪ್ರಯಾಣಕ್ಕೆ ಸೂಕ್ತ ಸ್ಕೂಲ್ ಬಸ್ ವ್ಯವಸ್ಥೆ, ಹುಡುಗರಿಗೆ ಮತ್ತು ಹುಡುಗಿಯರಿಗೆ ಪ್ರತ್ಯೇಕ ಹಾಸ್ಟೆಲ್ ವ್ಯವಸ್ಥೆ ಲಭ್ಯವಿದೆ.
ಹೀಗೆ ಪಠ್ಯ ಹಾಗು ಪಠ್ಯೇತರ ಶಿಕ್ಷಣ ನೀಡಿ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗೆ ಆದ್ಯತೆ ನೀಡಲಾಗುತಿದೆ. ಬೇಸಿಗೆ ಶಿಬಿರಗಳು,ತರಬೇತಿ ಶಿಬಿರ, ಈಜು ತರಬೇತಿ ಶಿಬಿರಗಳನ್ನು ಆಯೋಜಿಸಲಾಗುತ್ತದೆ.ಅಲ್ಲದೆ ವಿದ್ಯಾರ್ಥಿಗಳ ಸಮಗ್ರ ಅಭಿವೃದ್ಧಿಗಾಗಿ ಎಲ್ಲಾ ಆಧುನಿಕ ಸೌಲಭ್ಯಗಳೊಂದಿಗೆ ಉನ್ನತ ಗುಣಮಟ್ಟದ ಶಿಕ್ಷಣವನ್ನು ಇಲ್ಲಿ ಧಾರೆಯೆರೆಯಲಾಗುತ್ತದೆ.
For Admission and Further Information contact:
08257-233818 / 235157,
Mob: 9483640707
E-mail: kvgipssullia@gmail.com
Website:
www.kvgips.in













