ಮ್ಯಾಂಚೆಸ್ಟರ್: 4ನೇ ಟೆಸ್ಟ್ನಲ್ಲಿ ಎರಡನೇ ಇನ್ನೀಂಗ್ಸ್ನಲ್ಲಿ ಕನ್ನಡಿಗ ಕೆ.ಎಲ್. ರಾಹುಲ್ ಮತ್ತು ನಾಯಕ ಶುಭಮನ್ ಗಿಲ್ ಅವರು ಸೋಲು ತಪ್ಪಿಸಲು ದಿಟ್ಟ ನಡೆಸುತ್ತಿದ್ದಾರೆ.ಮೊದಲ ಇನ್ನೀಂಗ್ಸ್ನಲ್ಲಿ ಇಂಗ್ಲೆಂಡ್ 669 ರನ್ ಪೇರಿಸಿತು. 311ರನ್ಗಳ ಹಿನ್ಮಡೆಯೊಂದಿಗೆ ಎರಡನೇ ಇನ್ನೀಂಗ್ಸ್ ಬ್ಯಾಟ್ ಮಾಡುತ್ತಿರುವ ಭಾರತ 4ನೇ ದಿನದಾಟದ ಅಂತ್ಯಕ್ಕೆ
2 ವಿಕೆಟ್ ಕಳೆದುಕೊಂಡು 174 ರನ್ ಬಾರಿಸಿದೆ.
ಬೆನ್ ಸ್ಟೋಕ್ಸ್ ಅಮೋಘ ಶತಕ (141; 198ಎಸೆತ)ದ ನೆರವಿನಿಂದ ಮೊದಲ ಇನಿಂಗ್ಸ್ನಲ್ಲಿ ಇಂಗ್ಲೆಂಡ್ 157.1 ಓವರ್ಗಳಲ್ಲಿ 669 ರನ್ ಗಳಿಸಿತು. ಎರಡನೇ ಇನಿಂಗ್ಸ್ನ ಮೊದಲ ಓವರ್ನ ಸತತ ಎರಡು ಎಸೆತಗಳಲ್ಲಿ ಯಶಸ್ವಿ ಜೈಸ್ವಾಲ್ ಮತ್ತು ಸಾಯಿ ಸುದರ್ಶನ್ ವಿಕೆಟ್ ಪತನಗೊಂಡು ಭಾರತ ತಂಡವು ಅಲ್ಪಮೊತ್ತಕ್ಕೆ ಕುಸಿಯುವ ಅತಂಕ ಮೂಡಿತ್ತು. ಆದರೆ ಗಿಲ್ (ಬ್ಯಾಟಿಂಗ್ 78) ಮತ್ತು ಕೆ.ಎಲ್. ರಾಹುಲ್ (ಔಟಾಗದೇ 87) ಆತಂಕ ದೂರ ಮಾಡಿದರು. ಇದರಿಂದಾ ಭಾರತ ತಂಡವು 2 ವಿಕೆಟ್ಗಳಿಗೆ 174ರನ್ ಗಳಿಸಿತು. ಪಂದ್ಯದಲ್ಲಿ ಇನ್ನೊಂದು ದಿನ ಬಾಕಿಯಿದೆ. ಇಂಗ್ಲೆಂಡ್ ತಂಡದ ಬಾಕಿ ಚುಕ್ತಾ ಮಾಡಲು ಇನ್ನೂ 137 ರನ್ ಗಳಿಸಬೇಕಿದೆ.














