ಸುಳ್ಯ:ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಕೆವಿಜಿ ಅಮರಜ್ಯೋತಿ ಪದವಿ ಪೂರ್ವ ಕಾಲೇಜಿನಲ್ಲಿ 2026-27ನೇ ಶೈಕ್ಷಣಿಕ ಸಾಲಿಗೆ ಪ್ರವೇಶಾತಿ ಪ್ರಕ್ರಿಯೆ ಚುರುಕಿನಿಂದ ಸಾಗುತ್ತಿದೆ. ಸತತ ಉತ್ತಮ ಫಲಿತಾಂಶದ ಹಿನ್ನೆಲೆಯಲ್ಲಿ ದಾಖಲಾತಿಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಮತ್ತು ಪೋಷಕರು ಕಾಲೇಜಿಗೆ ಭೇಟಿ ನೀಡುತ್ತಿದ್ದಾರೆ.ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳಲ್ಲಿ ಸೀಟುಗಳು ಲಭ್ಯವಿದ್ದು, ಆಸಕ್ತರು
ಶೀಘ್ರ ಅರ್ಜಿ ಸಲ್ಲಿಸಬಹುದಾಗಿದೆ.ಹೊರ ಊರುಗಳಿಂದ ಬರುವ ವಿದ್ಯಾರ್ಥಿಗಳಿಗೆ ಸುರಕ್ಷಿತ ಹಾಗೂ ಸುಸಜ್ಜಿತ ಹಾಸ್ಟೆಲ್ ಸೌಲಭ್ಯ ಒದಗಿಸಲಾಗುತ್ತಿದ್ದು, ಪ್ರವೇಶಾತಿ ಪಡೆಯುವಾಗಲೇ ಹಾಸ್ಟೆಲ್ ನೋಂದಣಿ ಮಾಡಿಕೊಳ್ಳಲು ಅವಕಾಶವಿದೆ.2026-27ನೇ ಶೈಕ್ಷಣಿಕ ಸಾಲಿನ ಪ್ರವೇಶಾತಿ ಪ್ರಕ್ರಿಯೆ ಈಗಾಗಲೇ ಆರಂಭವಾಗಿದೆ.
ಲಭ್ಯವಿರುವ ಕೋರ್ಸ್ಗಳು:
ವಿಜ್ಞಾನ (Science): PCMB (Physics, Chemistry, Mathematics, Biology) ಮತ್ತು PCMC (Computer Science).
ವಾಣಿಜ್ಯ (Commerce): EBAC (Economics, Business Studies, Accountancy,
EBAS (Economics, Business Studies, Accountancy,
Statistics).
ವಿಶೇಷ ತರಬೇತಿ: ಕಾಲೇಜು ವತಿಯಿಂದ CET, NEET, JEE ಮತ್ತು CA Foundation ಪರೀಕ್ಷೆಗಳಿಗೆ ವಿಶೇಷ ತರಬೇತಿ ನೀಡಲಾಗುತ್ತದೆ.
CET, NEET ಮತ್ತು CA ಫೌಂಡೇಶನ್ ತರಗತಿಗಳಿಗೂ ಹೊಸ ಬ್ಯಾಚ್ಗಳ ತಯಾರಿ ನಡೆಯುತ್ತಿದೆ.

ಸಂಪರ್ಕ ಮಾಹಿತಿ:
ಪ್ರವೇಶಾತಿ ಪಡೆಯಲು ಅಥವಾ ಹೆಚ್ಚಿನ ಮಾಹಿತಿಗಾಗಿ ನೀವು ಕಾಲೇಜನ್ನು ನೇರವಾಗಿ ಸಂಪರ್ಕಿಸಬಹುದು:
ದೂರವಾಣಿ: 08257-235255 / 235254,+9189049 85254
ವೆಬ್ಸೈಟ್: www.kvgajpuc.com
ವಿಳಾಸ: ಕುರುಂಜಿಭಾಗ್, ಸುಳ್ಯ, ದಕ್ಷಿಣ ಕನ್ನಡ – 574327.
ಕಾಲೇಜಿಗೆ ಸತತ ಶೇ.100 ಫಲಿತಾಂಶದ ಗರಿ:
ಕಳೆದ ಒಂದು ದಶಕದಿಂದ ನಿರಂತರ ಶೇ.100 ಫಲಿತಾಂಶದೊಂದಿಗೆ ಸಾವಿರಾರು ವಿದ್ಯಾರ್ಥಿಗಳ ಭವಿಷ್ಯ ರೂಪಿಸಿದ ಹೆಮ್ಮೆ ಕೆವಿಜಿ ಅಮರ ಜ್ಯೋತಿ ಕಾಲೇಜಿನ ಹಿರಿಮೆ. 2025-26ನೇ ಸಾಲಿನಲ್ಲಿಯೂ
ವಾಣಿಜ್ಯ ಹಾಗೂ ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ ಹಾಜರಾದ ಎಲ್ಲಾ ವಿದ್ಯಾರ್ಥಿಗಳೂ ಉತ್ತೀರ್ಣರಾಗಿದ್ದಾರೆ. ವಿದ್ಯಾರ್ಥಿನಿ ವಂಶಿ ಪಿ. ಎಂ. (594/600) ಮತ್ತು ಹಿಮಾನಿ ಬಿ (593/600) ರಾಜ್ಯ ಮಟ್ಟದ ಶ್ರೇಷ್ಠ ಸಾಧನೆ ಮಾಡಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಸಾನ್ವಿ ಪಿ. ಎನ್. (584/600) ಪ್ರಥಮ ಸ್ಥಾನ ಪಡೆದಿದ್ದಾರೆ.

ಶಿಕ್ಷಣ ಕ್ಷೇತ್ರದಲ್ಲಿ ದಶಕದ ಸಾಧನೆ: ಕೆವಿಜಿ ಅಮರಜ್ಯೋತಿ ಕಾಲೇಜಿನಲ್ಲಿ ದಶಮಾನೋತ್ಸವದ ಸಂಭ್ರಮದೊಂದಿಗೆ ಪ್ರವೇಶಾತಿ ಆರಂಭವಾಗಿದೆ.
ಸುಳ್ಯದ ಶೈಕ್ಷಣಿಕ ಭೂಪಟದಲ್ಲಿ ತನ್ನದೇ ಆದ ಛಾಪು ಮೂಡಿಸಿರುವ ಕೆವಿಜಿ ಅಮರಜ್ಯೋತಿ ಪದವಿ ಪೂರ್ವ ಕಾಲೇಜು ಇದೀಗ ತನ್ನ ಯಶಸ್ವಿ 10ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿದೆ.ಕಳೆದ ಒಂದು ದಶಕದಿಂದ ನಿರಂತರ ಶೇ.100 ಫಲಿತಾಂಶದೊಂದಿಗೆ ಮುನ್ನಡೆಯುತಿದೆ. ಈ ಶೈಕ್ಷಣಿಕ ಹಿರಿಮೆಯೊಂದಿಗೆ 2026-27ನೇ ಸಾಲಿನ ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳ ಪ್ರವೇಶಾತಿ ಪ್ರಕ್ರಿಯೆ ಆರಂಭಗೊಂಡಿದೆ.
ಆಧುನಿಕ ಸೌಲಭ್ಯ:
ಕಾಲೇಜಿನಲ್ಲಿ ಅತ್ಯಾಧುನಿಕ ಸೌಲಭ್ಯಗಳು ಲಭ್ಯವಿದೆ. ಅತ್ಯಾಧುನಿಕ ತರಗತಿಗಳು, ಲ್ಯಾಬ್ಗಳು, ಲೈಬ್ರೆರಿ, ಕ್ರೀಡಾ, ಸಾಂಸ್ಕೃತಿಕ ವ್ಯವಸ್ಥೆಗಳು, ಸುಸಜ್ಜಿತ ಹಾಸ್ಟೇಲ್ ವ್ಯವಸ್ಥೆ ಕೂಡ ಲಭ್ಯವಿದೆ.
ಕಾಲೇಜಿನಲ್ಲಿ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಸ್ ಸೌಲಭ್ಯ ಹಾಗೂ ಮೆಸ್ ಸೌಲಭ್ಯ ಲಭ್ಯವಿದೆ ಎಂದು ಕಾಲೇಜಿನ ಪ್ರಕಟಣೆ ತಿಳಿಸಿದೆ.















