ಸುಳ್ಯ:ಕರ್ನಾಟಕ ಅಮೆಚೂರ್ ಬಾಡಿ ಬಿಲ್ಡರ್ಸ್ ಅಸೋಸೊಯೇಷನ್ ಮತ್ತು ಸುಳ್ಯದ ಹರೀಶ್ ಫಿಟ್ನೆಸ್ ನೇತೃತ್ವದಲ್ಲಿ ರಾಜ್ಯ ಮಟ್ಟದ ಹಾಗೂ ಜಿಲ್ಲಾ ಮಟ್ಟದ ದೇಹದಾರ್ಢ್ಯ ಸ್ಪರ್ಧೆ ಏ.25ರಂದು ಸುಳ್ಯದ ಬಂಟರ ಭವನದಲ್ಲಿ ನಡೆಯಲಿದೆ. ಮುಕ್ತ ರಾಜ್ಯ ಮಟ್ಟದಲ್ಲಿ ಮಿಸ್ಟರ್ ಕರಾವಳಿ ಮತ್ತು ಮಿಸ್ಟರ್ ಕರಾವಳಿ ಮೆನ್ ಫಿಸಿಕ್ ಹಾಗೂ ಜಿಲ್ಲಾ ಮಟ್ಟದಲ್ಲಿ ಮಿಸ್ಟರ್ ತುಳುನಾಡು ಮತ್ತು
ಮಿಸ್ಟರ್ ತುಳುನಾಡು ಮೆನ್ ಫಿಸಿಕ್ ಸ್ಫರ್ಧೆಗಳು ನಡೆಯಲಿದೆ.ಶಾರ್ಟ್, ಮೀಡಿಯಂ, ಟಾಲ್, ಸೂಪರ್ ವಿಭಾಗದ ಗ್ರೂಪ್ ವಿಭಾಗದ ಸ್ಪರ್ಧೆಗಳು ನಡೆಯಲಿದೆ. ವಿವಿಧ ವಿಭಾಗಗಳಲ್ಲಿ ವಿಜೇತರಿಗೆ ನಗದು, ಟ್ರೋಫಿ, ಮೆಡಲ್, ಪ್ರಮಾಣ ಪತ್ರ ನೀಡಲಾಗುವುದು.
ಸುಳ್ಯದ ಇತಿಹಾಸದಲ್ಲಿ ಪ್ರಪ್ರಥಮ ಬಾರಿಗೆ ಮಿಸ್ಟರ್ ಕರಾವಳಿ 2026 ರಾಜ್ಯ ಮಟ್ಟದ ದೇಹದ ಮತ್ತು ಪುರುಷರ ಮೈಕಟ್ಟು ಸ್ಪರ್ಧೆ ಹಾಗೂ ಮಿಸ್ಟರ್ ತುಳುನಾಡು 2026 ಜಿಲ್ಲಾ ಮಟ್ಟದ ದೇಹದ ಮತ್ತು ಪುರುಷರ ಮೈಕಟ್ಟು ಸ್ಪರ್ಧೆ ಏರ್ಪಡಿಸಲಾಗಿದೆ.
ವಿಜೇತರಿಗೆ ಒಟ್ಟು 1,67,000 ರೂ ಮೊತ್ತದ ಬಹುಮಾನ ನೀಡಲಾಗುತ್ತಿದ್ದು ರಾಜ್ಯ ಮಟ್ಟದ ದೇಹದಾರ್ಢ್ಯ ಮತ್ತು ಪುರುಷರ ಮೈಕಟ್ಟು ಸ್ಪರ್ಧೆ,ಜಿಲ್ಲಾ ಮಟ್ಟದ ದೇಹದಾರ್ಢ್ಯ ಮತ್ತು ಪುರುಷರ ಮೈಕಟ್ಟು ಸ್ಪರ್ಧೆಗಳಿಗೆ ಕರಾವಳಿ ಮತ್ತು ಒಳನಾಡಿನ ಪ್ರದೇಶಗಳಿಂದ ಉನ್ನತ ಕ್ರೀಡಾಪಟುಗಳನ್ನು ಕರೆತರಲಾಗುತ್ತಿದೆ ಎಂದು ದೇಹದಾರ್ಢ್ಯ ಸ್ಪರ್ಧೆಯ ಸಂಘಟನಾ ಸಮಿತಿಯ ಗೌರವಾಧ್ಯಕ್ಷ ಹರೀಶ್ ಕುಮಾರ್ ತಿಳಿಸಿದ್ದಾರೆ.
ಸ್ಪರ್ಧೆಯಲ್ಲಿ ಮಿಸ್ಟರ್ ಕರಾವಳಿ 2026 ಚಾಂಪಿಯನ್ ಬಹುಮಾನವಾಗಿ ರೂ 15 ಸಾವಿರ ರೂಪಾಯಿ ಮತ್ತು ಟ್ರೋಫಿ ಪದಕ ಹಾಗೂ ಪ್ರಮಾಣ ಪತ್ರ,ರನ್ನರ್ ಅಪ್ 7,000/- ನಗದು, ಟ್ರೋಫಿ, ಮೆಡಲ್ ಪ್ರಮಾಣಪತ್ರ, ಮಿಸ್ಟರ್ ತುಳುನಾಡು 2026 ಪ್ರಥಮ 7.000/- ನಗದು, ಟ್ರೋಫಿ,ಮೆಡಲ್ ಪ್ರಮಾಣಪತ್ರ ಅಲ್ಲದೆ ತೃತೀಯ, ಚತುರ್ಥ ಬಹುಮಾನಗಳು, ಗುಂಪು ಹಂತದಲ್ಲಿ ಬಹುಮಾನಗಳನ್ನು
ನೀಡಲಾಗುವುದು, ಭಾಗವಹಿಸಿದ ಎಲ್ಲರಿಗೆ ಪದಕ ಮತ್ತು ಪ್ರಮಾಣಪತ್ರ ದೊರೆಯುತ್ತದೆ. ಮಧ್ಯಾಹ್ನ 2.30 ರಿಂದ ಸ್ಪರ್ಧೆಗಳು ಆರಂಭವಾಗಲಿದೆ.
ಸ್ಪಾಟ್ ನೋಂದಣಿ ನಗದು ಮಾತ್ರ ಸ್ವೀಕರಿಸಲಾಗುವುದು ಎಂದು ಅವರು ವಿವರಿಸಿದರು.














