ಸುಳ್ಯ:ಸುಳ್ಯದಲ್ಲಿ ಪ್ರಥಮ ಬಾರಿಗೆ ಸ್ವದೇಶಿ ಆಹಾರ ಮೇಳ ಅ.2ರಿಂದ 4ರ ತನಕ ಸುಳ್ಯದ ಶ್ರೀ ದುರ್ಗಾ ಪರಮೇಶ್ವರಿ ಕಲಾ ಮಂದಿರದಲ್ಲಿ ನಡೆಯಲಿದೆ. ವೈವಿಧ್ಯಮಯ ಸ್ವದೇಶಿ ಆಹಾರದ ಸವಿಯುಣ್ಣುವ ಸುವರ್ಣಾವಕಾಶ ಸುಳ್ಯದ ಜನರಿಗೆ ಒದಗಿ ಬಂದಿದೆ. ಶಾಸಕಿ ಭಾಗೀರಥಿ ಮುರುಳ್ಯ ಅವರ ನೇತೃತ್ವದಲ್ಲಿ ಶಕ್ತಿ ಈವೆಂಟ್ಸ್ ಆಶ್ರಯದಲ್ಲಿ ಪ್ರಥಮ ಬಾರಿಗೆ ಸುಳ್ಯದಲ್ಲಿ
ಸ್ವದೇಶಿ ಆಹಾರ ಮೇಳ ಆಯೋಜಿಸಲಾಗಿದೆ. ಸ್ವದೇಶಿ ಆಹಾರ ಖಾದ್ಯಗಳ ಜೊತೆಗೆ ವೈವಿಧ್ಯಮಯ ಸ್ವದೇಶಿ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಇರಲಿದೆ.
ಮೂರು ದಿನಗಳ ಕಾಲ ನಡೆಯುವ ಸ್ವದೇಶಿ ಆಹಾರ ಮೇಳದ ಮಳಿಗೆಯಲ್ಲಿ ವಿವಿಧ ತಿಂಡಿ ತಿನಿಸುಗಳು, ಖಾದಿ ಬಟ್ಟೆಗಳ ಮಳಿಗೆ, ಮಸಾಲ ಪದಾರ್ಥಗಳ ಮಳಿಗೆ, ಕರಕುಶಲ ಮಳಿಗೆ, ಗೃಹ ಉಪಯೋಗಿ ವಸ್ತುಗಳ ಮಳಿಗೆಗಳು ಇರಲಿದೆ.
ಅಲ್ಲದೆ ಕೈಮಗ್ಗ, ತೆಂಗಿನ ಎಣ್ಣೆ, ಆಯುರ್ವೇದ ಔಷಧಿಗಳು, ತಾಳೆ ಬೆಲ್ಲ, ಹೋಳಿಗೆ (ಅನಾನಸು, ಖರ್ಜೂರ ), ಜಿಲೇಬಿ, ಬೋಂಡಾ, ಐಸ್ಕ್ರೀಮ್ಗಳು, ಮಣ್ಣಿನ ಪಾತ್ರೆಗಳು, ಉಪ್ಪಿನ ಕಾಯಿ, ಸೆಂಡಿಗೆ, ವಿವಿಧ ತಳಿಯ ಹೂ, ಹಣ್ಣುಗಳ ಗಿಡಗಳು ಇರಲಿದೆ. ಜೊತೆಗೆ

ಹಳೆಯ ಸೀರೆಗಳ ಖರೀದಿ ನಡೆಯಲಿದೆ.ಕಾಂಜಿವರಂ, ಬನಾರಸ್, ಮೈಸೂರು ಸಿಲ್ಕ್ ಮತ್ತಿತರ ಹಳೆಯ ಸೀರೆಯನ್ನು ಖರೀದಿಸಲಾಗುತ್ತದೆ. ಸಾವಯವ ಆಹಾರ ವಸ್ತುಗಳು ಲಭ್ಯವಿರಲಿದೆ. ಹೋಳಿಗೆ, ಜಿಲೇಬಿ, ಚಿಪ್ಸ್ ಸೇರಿ ವಿವಿಧ ತಿಂಡಿ ತಿನಿಸುಗಳನ್ನು ಸ್ಥಳದಲ್ಲಿಯೇ ತಯಾರಿಸಿ ನೀಡಲಾಗುವುದು. ಹತ್ತಾರು ವೈವಿಧ್ಯಮಯ ಖಾದ್ಯಗಳು, ತಿಂಡಿ, ತಿನಿಸುಗಳ ನಾಲಗೆಗೆ ಹೊಸ ರುಚಿ ಉಣಬಡಿಸಲಿದೆ.
ಆಹಾರ ಮೇಳಕ್ಕೆ ಸುಳ್ಯ ಜನತೆ, ಶಾಲಾ, ಕಾಲೇಜು ವಿದ್ಯಾರ್ಥಿಗಳು ಆಗಮಿಸಿ ಮಳಿಗೆಗೆ ಭೇಟಿ ನೀಡಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು ಎಂದು ಸುಳದಯ ಶಾಸಕಿ ಭಾಗೀರಥಿ ಮುರುಳ್ಯ ಹಾಗು ಶಕ್ತಿ ಇವೆಂಟ್ಸ್ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.









