ಸುಳ್ಯ:ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘ ನಿಯಮಿತ, ಪುತ್ತೂರು ಇದರ ರಜತ ಮಹೋತ್ಸವ ಸಂಭ್ರಮದಲ್ಲಿದ್ದು ನ.22 ರಂದು ಕೇರ್ಪಳದ ಶ್ರೀ ದುರ್ಗಾಪರಮೇಶ್ವರಿ ಕಲಾಮಂದಿರದಲ್ಲಿ ‘ರಜತ ಸಂಭ್ರಮ’ -2026 ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.2001ರಲ್ಲಿ ಕರ್ನಾಟಕ ಸೌಹಾರ್ದ ಸಹಕಾರಿ ಕಾಯ್ದೆ 1997ರಡಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಆರಂಭಗೊಂಡ
ರಾಜ್ಯದ ಪ್ರತಿಷ್ಠಿತ ಸಹಕಾರಿ ಸಂಸ್ಥೆ ಶ್ರೀ ಸರಸ್ವತಿ ಸಹಕಾರಿಯು 25 ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿ ರಾಜ್ಯವ್ಯಾಪಿ ಕಾರ್ಯವ್ಯಾಪ್ತಿಯೊಂದಿಗೆ 23 ಶಾಖೆಗಳನ್ನು ಹೊಂದಿ ಸದಸ್ಯರಿಗೆ ಸೇವೆಯನ್ನು ನೀಡುತ್ತಾ ರೂ.900ಕೋಟಿ ಮೀರಿ ವ್ಯವಹಾರವನ್ನು ಮಾಡುತ್ತಿದೆ.ರಜತ ಮಹೋತ್ಸವದ ಸಂಭ್ರಮದಲ್ಲಿ ಸುಳ್ಯ, ಬೆಳ್ಳಾರೆ ಮತ್ತು ಕಡಬ ಶಾಖೆಗಳನ್ನು ಕೇಂದ್ರೀಕರಿಸಿ ‘ಸುಳ್ಯದಲ್ಲಿ ರಜತ ಸಂಭ್ರಮ – 2026’ ಕಾರ್ಯಕ್ರಮವನ್ನು ಆಯೋಜಿಸಿದೆ.ಪೂ.11.30ರಿಂದ ನಡೆಯುವ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಸರಸ್ವತಿ ಕ್ರೆಡಿಟ್ ಸೌಹಾರ್ದ ಸಹಕಾರಿ ಸಂಘದ ಅಧ್ಯಕ್ಷರು ಹಾಗೂ ದಿ ಕ್ಯಾಂಪ್ಕೋ ಲಿಮಿಟೆಡ್ ಮಂಗಳೂರು ಇದರ ಅಧ್ಯಕ್ಷರಾದ ಎಸ್.ಆರ್. ಸತೀಶ್ಚಂದ್ರ ಅವರು ವಹಿಸಲಿದ್ದಾರೆ. ಕಾರ್ಯಕ್ರಮವನ್ನು
ಅಕಾಡೆಮಿ ಆಫ್ ಲಿಬರಲ್ ಎಜುಕೇಶನ್ ಸುಳ್ಯ ಇದರ ಅಧ್ಯಕ್ಷ ಡಾ. ಕೆ.ವಿ. ಚಿದಾನಂದ ಉದ್ಘಾಟಿಸಲಿದ್ದಾರೆ.ಮುಖ್ಯ ಅತಿಥಿಗಳಾಗಿ ಶಾಸಕಿ ಭಾಗೀರಥಿ ಮುರುಳ್ಯ, ದಿ ಕ್ಯಾಂಪ್ಕೋ ಲಿಮಿಟೆಡ್ನ ಮಾಜಿ ನಿರ್ದೇಶಕರಾದ
ರಾಧಾಕೃಷ್ಣ ಕೋಟೆ, ಕರ್ನಾಟಕ ಫ್ಲೈವುಡ್ ಇಂಡಸ್ಟ್ರೀಸ್ನ ಮಾಲಕರಾದ ಕೃಷ್ಣ ಕಾಮತ್, ಮಂಗಳೂರು ಎ.ಜೆ. ಆಸ್ಪತ್ರೆ ಮತ್ತು ರಿಸರ್ಚ್ ಸೆಂಟರ್ನ ಗ್ಯಾಸ್ಟ್ರೋಎಂಟರಾಜಲಿಸ್ಟ್ ಮತ್ತು ಹೆಪಟಾಲಿಜಿಸ್ಟ್ ಕನ್ಸಲ್ಟೆಂಟ್
ಡಾ. ರಾಘವೇಂದ್ರ ಪ್ರಸಾದ್ ಕೆ.ವಿ., ಸುಳ್ಯ ಭಾಲಾವಲೀಕಾರ್ ರಾಜಾಪುರ ಸಾರಸ್ವತ ಸಮಾಜದ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ, ಭಾಗವಹಿಸಲಿದ್ದಾರೆ.ವಿಶೇಷ ಆಹ್ವಾನಿತರಾಗಿ


ವಕೀಲರು ಮತ್ತು ಆದರ್ಶ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತ ಪುತ್ತೂರು ಇದರ ನಿರ್ದೇಶಕರಾದ ಎನ್. ಜಯಪ್ರಕಾಶ್ ರೈ, ಉದ್ಯಮಿ ಹಾಗು ಪ್ರಗತಿಪರ ಕೃಷಿಕರಾದ ಗೋಪಾಲಕೃಷ್ಣ ಪೊಸವಳಿಕೆ, ಸುಳ್ಯ ರೋಟರಿ ಕ್ಲಬ್ ಅಧ್ಯಕ್ಷೆ ಲತಾ ಮಧುಸೂದನ್, ಸ್ನೇಹ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ದಾಮ್ಲೆ ಅವರು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸ್ಥಳೀಯ ಸಾಧಕರನ್ನು ಸನ್ಮಾನಿಸಲಾಗುವುದು.
ಕಪೂರ್ವಾಹ್ನ ಗಂಟೆ 9ರಿಂದ 11.30ರವರೆಗೆ ಸಾಂಸ್ಕೃತಿಕ ಕಾರ್ಯಕ್ರಮ,11.30ರಿಂದ 1ರವರೆಗೆ ಸಭಾ ಕಾರ್ಯಕ್ರಮ, ಅಪರಾಹ್ನ 2.30ರಿಂದ 5 ಗಂಟೆಯವರೆಗೆ ಬಲೆ ತೆಲಿಪಾಲೆ ಖ್ಯಾತಿಯ ಪ್ರಶಂಸ ಕಾಪು ತಂಡದ ಶ್ರೀ ಪ್ರಸನ್ನ ಶೆಟ್ಟಿ ಬೈಲೂರು ಇವರ ನಿರ್ದೇಶನದ ಚೈತನ್ಯ ಕಲಾವಿದರು ಬೈಲೂರು ಇವರಿಂದ ಹಾಸ್ಯಮಯ ತುಳು ನಾಟಕ ‘ರಾಘು ಮಾಷ್ಟ್ರು’ ಪ್ರದರ್ಶನ ನಡೆಯಲಿದೆ. ಕಳೆದ 25 ವರ್ಷಗಳಿಂದ ಸಹಕಾರ ಕ್ಷೇತ್ರದಲ್ಲಿ ಸಂಘವು ಮಾಡಿದ ಸಾಧನೆ, ಸದಸ್ಯರಿಗೆ ನೀಡಿದ ಸೇವೆಗಳ ಬಗ್ಗೆ ಈ ಸಂದರ್ಭದಲ್ಲಿ ಸ್ಮರಿಸಲಾಗುವುದು. ರಜತ ಮಹೋತ್ಸವದ ಪ್ರಯುಕ್ತ ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಸಂತ ನಾಯಕ್ ಎ ಅವರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
































