ಕ್ಯಾಲಿಕಟ್: ಮರ್ಕಝ್ ವಿದ್ಯಾ ಸಮುಚ್ಚಯಗಳ ಶಿಲ್ಪಿ, ಇಂಡಿಯನ್ ಗ್ರ್ಯಾಂಡ್ ಮುಫ್ತಿ ಎ.ಪಿ. ಅಬೂಬಕ್ಕರ್ ಮುಸ್ಲಿಯಾರ್ ಅವರಿಗೆ ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ವತಿಯಿಂದ ನೀಡುವ ‘ಸಜ್ಜನ ಸಿರಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಸಜ್ಜನ ಪ್ರತಿಷ್ಠಾನದ
ಅಧ್ಯಕ್ಷ ಡಾ. ಉಮ್ಮರ್ ಬೀಜದಕಟ್ಟೆ ಅವರು ಕೇರಳದ ಕ್ಯಾಲಿಕಟ್ನಲ್ಲಿರುವ ಕಾರಂದೂರು ಮರ್ಕಝ್ಗೆ ತೆರಳಿ ಎ.ಪಿ.ಅಬೂಬಕ್ಕರ್ ಮುಸ್ಲಿಯಾರ್ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು.ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆಯ ನಿರ್ದೇಶಕ ಶರೀಫ್ ಜಟ್ಟಿಪಳ್ಳ,ನ್ಯಾಲೇಜ್ ಸಿಟಿ ನಿರ್ದೇಶಕ ರವೂಪ್, ಹಮೀದ್ ಸುಳ್ಯ, ಸಂಶುದ್ದೀನ್ ಹಾಸನ, ಅಬ್ದುಲ್ಲಾ ಪೆರಂಗೊಡಿ, ಅನ್ಶೀಪ್ ಪೇರಡ್ಕ ಹಾಗೂ ಮರ್ಜೂಕ್ ಕಡೆಪಾಲ ಮತ್ತಿತರರು ಉಪಸ್ಥಿತರಿದ್ದರು.































