ಐಚಿ-ನಗೋಯಾ:ಏಷ್ಯನ್ ಗೇಮ್ಸ್ನಲ್ಲಿ ಭಾರತದ ಪದಕ ಬೇಟೆ ಮುಂದುವರಿದಿದೆ.ಸೆ.28ರಂದು ತಲಾ 4 ಬೆಳ್ಳಿ ಹಾಗು ಕಂಚು ಸೇರಿ 8 ಪದಕ ಗೆದ್ದುಕಡಿದೆ. ಭಾರತ ಇದುವರೆಗೆ 4 ಚಿನ್ನ, 20 ಬೆಳ್ಳಿ, 21 ಕಂಚು ಸೇರಿ 45 ಪದಕಗಳೊಂದಿಗೆ ಪದಕ ಪಟ್ಟಿಯಲ್ಲಿ 12ನೇ ಸ್ಥಾನದಲ್ಲಿದೆ. ಪುರುಷರ ಜಾವೆಲಿನ್ ಥ್ರೋದಲ್ಲಿ
ಯಶ್ವೀರ್ ಸಿಂಗ್, ಮಹಿಳೆಯರ 25 ಮೀಟರ್ ಪಿಸ್ತೂಲ್ ಶೂಟಿಂಗ್ ವಿಭಾಗದಲ್ಲಿ ಇಶಾ ಸಿಂಗ್, ಪುರುಷರ 1500 ಮೀಟರ್ ಓಟದಲ್ಲಿ ಗುಲ್ವೀರ್ ಸಿಂಗ್, ಪುರುಷರ ಲಾಂಗ್ ಜಂಪ್ನಲ್ಲಿ ಮುರಳಿ ಶ್ರೀಶಂಕರ್ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು. ಪುರುಷರ ಜಾವೆಲಿನ್ ಥ್ರೋದಲ್ಲಿ ರೋಹಿತ್ ಯಾದವ್ ಕಂಚು ಗೆದ್ದರು, ಮಹಿಳೆಯರ 400 ಮೀಟರ್ ಹರ್ಡಲ್ಸ್ (54.75 ಸೆಕೆಂಡ್) ಪಿ.ಟಿ. ಉಷಾ ಅವರ 42 ವರ್ಷಗಳ ಹಳೆಯ ರಾಷ್ಟ್ರೀಯ ದಾಖಲೆಯನ್ನು ಸರಿಗಟ್ಟಿದ
ವಿದ್ಯಾ ರಾಮರಾಜ್ ಕಂಚು ಗೆದ್ದರು.
ಮಹಿಳೆಯರ 5000 ಮೀಟರ್ ಓಟದಲ್ಲಿ ಪಾರುಲ್ ಚೌಧರಿ, ಮಹಿಳೆಯರ 78 ಕೆಜಿ ವಿಭಾಗ ಕುರಾಶ್ನಲ್ಲಿ
ಪಿಂಕಿ ಬಲ್ಹಾರಾ ಕಂಚು ಗೆದ್ದರು. ಮಳೆಯ ಕಾರಣದಿಂದಾಗಿ ಭಾರತ ಮತ್ತು ಅಫ್ಘಾನಿಸ್ತಾನ ನಡುವಿನ ಪುರುಷರ ಕ್ರಿಕೆಟ್ ಕ್ವಾರ್ಟರ್ಫೈನಲ್ ಪಂದ್ಯ ರದ್ದಾಗಿದೆ.ಆದರೆ ಉತ್ತಮ ಐಸಿಸಿ ಟಿ20 ಶ್ರೇಯಾಂಕದ ಆಧಾರದ ಮೇಲೆ ಭಾರತ ತಂಡವು ನೇರವಾಗಿ ಸೆಮಿಫೈನಲ್ಗೆ ಪ್ರವೇಶಿಸಿದೆ. ಜೊತೆಗೆ ಲವ್ಲಿನಾ ಬೊರ್ಗೊಹೈನ್ ಸೇರಿದಂತೆ ಮೂವರು ಬಾಕ್ಸರ್ಗಳು ಕ್ವಾರ್ಟರ್ಫೈನಲ್ ಗೆದ್ದು ಭಾರತಕ್ಕೆ ಕನಿಷ್ಠ ಕಂಚಿನ ಪದಕವನ್ನು ಖಚಿತಪಡಿಸಿದ್ದಾರೆ.









