ಸುಳ್ಯ:ಜೇಸಿಐ ಸುಳ್ಯ ಸಿಟಿಯ 2027ನೇ ಸಾಲಿನ ನೂತನ ಅಧ್ಯಕ್ಷರಾಗಿ ರಂಜಿತ್ ಅಡ್ತಲೆ ಆಯ್ಕೆಯಾಗಿದ್ದಾರೆ.ಜೇಸಿಐ ಸುಳ್ಯ ಸಿಟಿ ಘಟಕದ ಅಧ್ಯಕ್ಷೆ ನಾಗವೇಣಿ ದಾಮೋದರ ಕೋರಡ್ಕ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ ನಡೆಯಿತು.ಘಟಕದ
ಮಾಜಿ ಅಧ್ಯಕ್ಷ ವಿಷ್ಣು ಪ್ರಕಾಶ್ ನಾರ್ಕೋಡು ಚುನಾವಣಾಧಿಕಾರಿಯಾಗಿದ್ದರು. 2027ನೇ ಸಾಲಿನ ನೂತನ ಅಧ್ಯಕ್ಷರಾಗಿ ರಂಜಿತ್ ಅಡ್ತಲೆ, ಕಾರ್ಯದರ್ಶಿಯಾಗಿ ನಿಖಿಲ್ ಮಡ್ತಿಲ, ಉಪಾಧ್ಯಕ್ಷರಾಗಿ ತೇಜಸ್ವಿ ಪ್ರಕಾಶ್ ನಾರ್ಕೋಡು, ರಾಜೇಶ್ ಕುಂಬಳಚೇರಿ ಪ್ರಮಿಳಾ ಮನಮೋಹನ ಬಳ್ಳಡ್ಕ, ಉಮಾದೇವಿ, ಖಜಾಂಜಿಯಾಗಿ ಶರತ್ ಕುಡೆಕಲ್ಲು ಆಯ್ಕೆಯಾದರು.ಈ ಸಂದರ್ಭದಲ್ಲಿ ಪ್ರಮುಖರಾದ ಮನಮೋಹನ ಬಳ್ಳಡ್ಕ, ವಿನಯ್ ರಾಜ್ ಮಡ್ತಿಲ, ಚಂದ್ರಶೇಖರ ಕನಕಮಜಲು, ರಂಜಿತ್ ಪಿ.ಜೆ ಮತ್ತು ಸದಸ್ಯರು ಭಾಗವಹಿಸಿದ್ದರು.
































