ಚೆನ್ನೈ:ಖ್ಯಾತ ಸಂಗೀತ ಸಂಯೋಜಕ ಅನಿರುದ್ಧ್ ರವಿಚಂದರ್ ಹಾಗೂ ಐಪಿಎಲ್ ತಂಡ ಸನ್ರೈಸರ್ಸ್ ಹೈದರಾಬಾದ್ನ ಸಿಇಒ ಕಾವ್ಯಾ ಮಾರನ್ ಅವರು ಅದ್ದೂರಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನ.11ರಂದು ಗ್ರೀಸ್ನಲ್ಲಿ ಗುರು–ಹಿರಿಯರ ಸಮ್ಮುಖದಲ್ಲಿ ಅನಿರುದ್ಧ್ ರವಿಚಂದರ್ ಹಾಗೂ ಕಾವ್ಯಾ ಮಾರನ್ ಮದುವೆ ನಡೆದಿದೆ.ವಿವಾಹದ ಸುಂದರ
ಫೋಟೊಗಳನ್ನು ಅನಿರುದ್ಧ್ ರವಿಚಂದರ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಅನಿರುದ್ಧ್ ರವಿಚಂದರ್ ಹಾಗೂ ಕಾವ್ಯಾ ಮಾರನ್ ಮದುವೆ ಫೋಟೊಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಈ ಜೋಡಿಯ ಮದುವೆಗೆ ರಜನಿಕಾಂತ್ ದಂಪತಿ, ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ದಂಪತಿ ಸೇರಿದಂತೆ ಹಲವಾರು ಸಿನಿ ತಾರೆಯರು ಭಾಗಿಯಾಗಿದ್ದರು. ಗ್ರೀಸ್ನಲ್ಲಿ ಆಪ್ತರು ಹಾಗೂ ಕುಟುಂಬಸ್ಥರ ಸಮ್ಮುಖದಲ್ಲಿ ವಿವಾಹವಾಗಿರುವ ಈ ನವದಂಪತಿ,ಮುಂಬರುವ ನವೆಂಬರ್ 21ರಂದು ಚೆನ್ನೈನಲ್ಲಿ ಚಿತ್ರರಂಗ, ಕ್ರೀಡಾ ಹಾಗೂ ಉದ್ಯಮ ಕ್ಷೇತ್ರದ ಗಣ್ಯರಿಗಾಗಿ ಭವ್ಯ ಆರತಕ್ಷತೆ ಸಮಾರಂಭವನ್ನು ಆಯೋಜಿಸಿದ್ದಾರೆ.
































