ಸುಳ್ಯ:2025-26ನೇ ಸಾಲಿನ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು ಸುಳ್ಯ ತಾಲೂಕಿಗೆ ದಾಖಲೆಯ ಶೇ.99.10 ಫಲಿತಾಂಶ ಬಂದಿದೆ. ಸರಕಾರಿ, ಅನುದಾನಿತ ಹಾಗೂ ಅನುದಾನ ರಹಿತ ಸೇರಿ ಒಟ್ಟು 30 ಶಾಲೆಗಳಿಗೆ ಶೇ.100 ಫಲಿತಾಂಶ ದಾಖಲಿಸಿದೆ.861 ಹುಡುಗರು ಮತ್ತು 908 ಹುಡುಗಿಯರು ಸೇರಿ ಒಟ್ಟು1769 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 852 ಹುಡುಗರು ಮತ್ತು 901 ಹುಡುಗಿಯರು ಸೇರಿ
ಒಟ್ಟು1753 ಮಂದಿ ಉತ್ತೀರ್ಣರಾಗಿ ಶೇ.99.10 ಫಲಿತಾಂಶ ಬಂದಿದೆ. ತಾಲೂಕಿನಲ್ಲಿ ಕೇವಲ 16 ಮಂದಿ ವಿದ್ಯಾರ್ಥಿಗಳು ಮಾತ್ರ ಅನುತ್ತೀರ್ಣರಾಗಿದ್ದಾರೆ.
ತಾಲೂಕಿನ 37 ಶಾಲೆಗಳ ಪೈಕಿ 30 ಶಾಲೆಗಳಿಗೆ ಶೇ.100 ಫಲಿತಾಂಶ ಬಂದಿದೆ. ತಾಲೂಕಿನ 17 ಸರಕಾರಿ ಪ್ರೌಢ ಶಾಲೆಗಳ ಪೈಕಿ 13 ಸರಕಾರಿ ಶಾಲೆ, 7 ಅನುದಾನಿತ ಶಾಲೆಗಳಲ್ಲಿ 4 ಅನುದಾನಿತ ಶಾಲೆ ಹಾಗೂ ಎಲ್ಲಾ 13 ಅನುದಾನ ರಹಿತ ಶಾಲೆಗಳಲ್ಲಿ ಎಲ್ಲರೂ ಉತ್ತೀರ್ಣರಾಗಿ ಶೇ.100 ಫಲಿತಾಂಶ ದಾಖಲಿಸಿದೆ.
ಶೇ.100 ಫಲಿತಾಂಶ ದಾಖಲಿಸಿದ ಶಾಲೆಗಳು:
ಸರಕಾರಿ ಶಾಲೆಗಳ ಪೈಕಿ
ಕರ್ನಾಟಕ ಪಬ್ಲಿಕ್ ಸ್ಕೂಲ್ ಬೆಳ್ಳಾರೆ, ಸರಕಾರಿ ಪದವಿ ಪೂರ್ವ ಕಾಲೇಜು ಪಂಜ, ಸರಕಾರಿ ಪದವಿ ಪೂರ್ವ ಕಾಲೇಜು ಗುತ್ತಿಗಾರು, ಸರಕಾರಿ ಪ್ರೌಢ ಶಾಲೆ ಅಜ್ಜಾವರ, ಸರಕಾರಿ ಪದವಿಪೂರ್ವ ಕಾಲೇಜು ಹರಿಹರ ಪಲ್ಲತ್ತಡ್ಕ,ಸರಕಾರಿ ಪ್ರೌಢ ಶಾಲೆ ಮರ್ಕಂಜ, ಕರ್ನಾಟಕ ಪಬ್ಲಿಕ್ ಸ್ಕೂಲ್ ಗಾಂಧಿನಗರ, ಸರಕಾರಿ ಪ್ರೌಢ ಶಾಲೆ ಆಲೆಟ್ಟಿ, ಸರಕಾರಿ ಪ್ರೌಢ ಶಾಲೆ ಎಡಮಂಗಲ, ಸರಕಾರಿ ಪ್ರೌಢ ಶಾಲೆ ದುಗ್ಗಲಡ್ಕ, ಸರಕಾರಿ ಪದವಿಪೂರ್ವ ಕಾಲೇಜು ಐವರ್ನಾಡು, ಸರಕಾರಿ ಪ್ರೌಢ ಶಾಲೆ ಏನೆಕಲ್ಲು, ಮೊರಾರ್ಜಿ ದೇಸಾಯಿ ವಸತಿ ಶಾಲೆ ಪಂಜ ಶೇ.100 ಫಲಿತಾಂಶ ದಾಖಲಿಸಿದೆ.
ಅನುದಾನಿತ ಶಾಲೆಗಳ ಪೈಕಿ ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕ,ನೆಹರೂ ಸ್ಮಾರಕ ಪ.ಪೂ.ಕಾಲೇಜು ಅರಂತೋಡು, ಸುಳ್ಯ ಶ್ರೀ ಶಾರದಾ ಪದವಿ ಪೂರ್ವ ಕಾಲೇಜು(ಪ್ರೌಢ ಶಾಲಾ ವಿಭಾಗ), ಪಯಸ್ವಿನಿ ಪ್ರೌಢ ಶಾಲೆ ಜಾಲ್ಸೂರು ಶೇ100 ಫಲಿತಾಂಶ ದಾಖಲಿಸಿದೆ.
ಅನುದಾನ ರಹಿತ ಶಾಲೆಗಳಲ್ಲಿ ರೋಟರಿ ಆಂಗ್ಲ ಮಾಧ್ಯಮ ಶಾಲೆ ಸುಳ್ಯ, ಶ್ರೀಭಗವಾನ್ ಸತ್ಯ ಸಾಯಿ ಪ್ರೌಢ ಶಾಲೆ ಚೊಕ್ಕಾಡಿ, ಕುಮಾರಸ್ವಾಮಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಸುಬ್ರಹ್ಮಣ್ಯ, ಸ್ನೇಹ ಪ್ರೌಢ ಶಾಲೆ ಸುಳ್ಯ, ಸವೇರಪುರ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಕಲ್ಲುಗುಂಡಿ, ಗ್ರೀನ್ ವ್ಯೂ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಸುಳ್ಯ, ಸಂತ ಜೋಸೆಫ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಸುಳ್ಯ, ಕೆಎಸ್ಜಿ ಆಂಗ್ಲ ಮಾಧ್ಯಮ ಶಾಲೆ ನಿಂತಿಕಲ್ಲು, ಬ್ಲೆಸ್ಡ್ ಕುರಿಯಾಕೋಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಗುತ್ತಿಗಾರು, ಜ್ಞಾನದೀಪ ಪ್ರೌಢ ಶಾಲೆ ಎಲಿಮಲೆ, ವಿವೇಕಾನಂದ ಪ್ರೌಢ ಶಾಲೆ ವಿನೋಬನಗರ, ತೆಕ್ಕಿಲ್ ಪ್ರೌಢ ಶಾಲೆ ಗೂನಡ್ಕ, ಮಹಾತ್ಮಾಗಾಂಧಿ ಮಲ್ನಾಡ್ ಪ್ರೌಢ ಶಾಲೆ ಕೊಡಿಯಾಲಬೈಲ್ ಶೇ.100 ಫಲಿತಾಂಶ ದಾಖಲಿಸಿದೆ.














