ಸುಳ್ಯ:ಕಳೆದ ಎರಡು ವರ್ಷಗಳಿಂದ ಸುಳ್ಯ ತಹಶೀಲ್ದಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮಂಜುಳಾ ಎಂ. ಅವರಿಗೆ ವರ್ಗಾವಣೆಯಾಗಿದೆ. ಇವರನ್ನು ಮಂಗಳೂರು ಮಹಾನಗರ ಪಾಲಿಕೆಯ ವಲಯ ಆಯುಕ್ತರಾಗಿ ವರ್ಗಾವಣೆಗೊಳಿಸಿ ರಾಜ್ಯ ಸರಕಾರ ಆದೇಶಿಸಿದೆ. ಕೆಲವು ದಿನಗಳ ಹಿಂದೆ
ಅವರಿಗೆ ಕೆಎಎಸ್ ಕಿರಿಯ ಶ್ರೇಣಿ ಅಧಿಕಾರಿಯಾಗಿ ಮುಂಭಡ್ತಿ ನೀಡಲಾಗಿತ್ತು. ಮಂಜುಳಾ ಎಂ ಸೇರಿದಂತೆ ರಾಜ್ಯದ ಒಟ್ಟು 63 ಮಂದಿ ಅಧಿಕಾರಿಗಳನ್ನು ಕೆಎಎಸ್ ಕಿರಿಯ ಶ್ರೇಣಿ ವೃಂದಕ್ಕೆ ಉನ್ನತೀಕರಣಗೊಳಿಸಿ ಸರಕಾರ ಆದೇಶ ಮಾಡಿತ್ತು. ಇದೀಗ ಸರಕಾರ ಮಂಜುಳಾ ಮಂಗಳೂರು ಮಹಾ ನಗರ ಪಾಲಿಕೆಯ ವಲಯ ಆಯುಕ್ತರಾಗಿ ವರ್ಗಾವಣೆಗೊಳಿಸಿ ಆದೇಶ ಮಾಡಿದೆ. ಸುಳ್ಯ ತಹಶೀಲ್ದಾರ್ ಹುದ್ದೆಗೆ ಇನ್ನಷ್ಟೇ ಆದೇಶ ಆಗಬೇಕಾಗಿದೆ.











