ಬೆಂಗಳೂರು:2026ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆ-1 ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿ ಶೇ.94.10 ರಷ್ಟು ಉತ್ತೀರ್ಣತೆ ದಾಖಲಾಗಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.ಗುರುವಾರ ಮಧ್ಯಾಹ್ನ 12 ಗಂಟೆಗೆ ಫಲಿತಾಂಶ ಪ್ರಕಟಗೊಂಡಿದ್ದು, ವಿದ್ಯಾರ್ಥಿಗಳು
ಅಧಿಕೃತ ವೆಬ್ಸೈಟ್ ಮೂಲಕ ಫಲಿತಾಂಶವನ್ನು ಪರಿಶೀಲಿಸಬಹುದು. ಇದರ ಜೊತೆಗೆ ಎಸ್ಎಂಎಸ್ ಹಾಗೂ ವಾಟ್ಸಾಪ್ ಮೂಲಕವೂ ಫಲಿತಾಂಶ ಕಳುಹಿಸುವ ವ್ಯವಸ್ಥೆ ಮಾಡಲಾಗಿದೆ.
ಈ ಬಾರಿ ಒಟ್ಟು 7,70,209 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು 7,24,794 ಮಂದಿ ಉತ್ತೀರ್ಣರಾಗಿದ್ದು, ಇದು ರಾಜ್ಯದ ಶಿಕ್ಷಣ ಇತಿಹಾಸದಲ್ಲೇ ಅತ್ಯುನ್ನತ ಫಲಿತಾಂಶವಾಗಿದೆ. 98.4 ಫಲಿತಾಂಶದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆ ಮೊದಲ ಸ್ಥಾನ ಪಡೆದಿದ್ದು, ಉಡುಪಿ ಎರಡನೇ ಸ್ಥಾನ ಮತ್ತು ಉತ್ತರ ಕನ್ನಡ ಮೂರನೇ ಸ್ಥಾನವನ್ನು ಪಡೆದಿವೆ. ಕರಾವಳಿ ಜಿಲ್ಲೆಗಳ ಈ ಸಾಧನೆ ಮತ್ತೊಮ್ಮೆ ಗಮನ ಸೆಳೆದಿದೆ.














