ಸುಳ್ಯ: ಮೆಸ್ಕಾಂ, ಸುಳ್ಯ ಮತ್ತು ಸುಬ್ರಹ್ಮಣ್ಯ ಉಪವಿಭಾಗ ಮಟ್ಟದ ಜನಸಂಪರ್ಕ ಸಭೆ ಸೆ. 15 ಶುಕ್ರವಾರದಂದು ಪೂರ್ವಾಹ್ನ 11 ಗಂಟೆಯಿಂದ 12 ರ ತನಕ ಸುಳ್ಯ ಉಪವಿಭಾಗ ಕಛೇರಿಯಲ್ಲಿ ನಡೆಯಲಿದೆ. ಮಂಗಳೂರು ವೃತ್ತ
ಕಾರ್ಯ ಮತ್ತು ಪಾಲನಾ ಅಧೀಕ್ಷಕ ಇಂಜಿನಿಯರ್ ಅಧ್ಯಕ್ಷತೆಯಲ್ಲಿ ಸುಳ್ಯ ಮತ್ತು ಸುಬ್ರಹ್ಮಣ್ಯ ಉಪವಿಭಾಗ ಮಟ್ಟದ ಜನಸಂಪರ್ಕ ಸಭೆಯು ನಡೆಯಲಿದ್ದು ಗ್ರಾಹಕರು ತಮ್ಮ ಕುಂದುಕೊರತೆಗಳನ್ನು ಸುಳ್ಯ ಉಪವಿಭಾಗ ಕಚೇರಿಗೆ ಆಗಮಿಸಿ ಅಥವಾ ದೂರವಾಣಿ ಕರೆಯ ಮುಖಾಂತರ ಸಲ್ಲಿಸಬಹುದು ಎಂದು ಮೆಸ್ಕಾಂ
ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ಪ್ತಕಟಣೆಯಲ್ಲಿ ತಿಳಿಸಿದ್ದಾರೆ.