ಸುಳ್ಯ:ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಸಾಹಿತ್ಯ ಸಂಭ್ರಮ – ದಶಮಾನೋತ್ಸವದ ಅಂಗವಾಗಿ ಚೊಕ್ಕಾಡಿ ಪ್ರೌಢಶಾಲೆ ಕುಕ್ಕುಜಡ್ಕದಲ್ಲಿ ಸುಳ್ಯ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ‘ಪರಿಸರ ಸಾಹಿತ್ಯ ಸಂಭ್ರಮ’ ಕಾರ್ಯಕ್ರಮ ನವೆಂಬರ್ 2ರಂದು ನಡೆಯಿತು.’
ಕುವೆಂಪು, ಕಾರಂತ, ತೇಜಸ್ವಿಯವರ ಸಾಹಿತ್ಯದಲ್ಲಿ ಪರಿಸರ ಪ್ರಜ್ಞೆ’ಯ
ಕುರಿತಾಗಿ ‘ಬೊಗಸೆಯಲ್ಲಿ ಹಸಿರು’ ಎಂಬ ವಿಷಯದ ಬಗ್ಗೆ ಡಾ. ನರೇಂದ್ರ ರೈ ದೇರ್ಲ ಅವರು ಮಾತನಾಡಿ,’ಪರಿಸರ ಪ್ರೀತಿ ನಮ್ಮ ಮಕ್ಕಳು ಬೆಳಿಸಿಕೊಳ್ಳುವುದು ಅಗತ್ಯ, ನಾಲ್ಕು ಗೋಡೆಯ ನಡುವೆ ಶಾಲೆಯ ಅರಿವಿಗಿಂತ ಲೋಕ ಶಾಲೆಯಲ್ಲಿ ಕಲಿಯುವ ಜ್ಞಾನ ಅದ್ಭುತವಾಗಿರುತ್ತದೆ.’
ತೇಜಸ್ವಿಯವರ ಸಾಹಿತ್ಯದಲ್ಲಿ ಪರಿಸರ,ನೆಲ, ಜಲದ ಬಗ್ಗೆ ಸುಂದರ ಲೋಕವೇ ಅನಾವರಣ ಗೊಳ್ಳುತ್ತದೆ, ಕುವೆಂಪು ಅವರ ಪರಿಸರ ಪ್ರೇಮ ಅನನ್ಯವಾದುದು, ಅಂತಹ ಮಹಾನ್ ಸಾಹಿತಿಗಳ ಸಾಹಿತ್ಯ ಪ್ರೇಮದ ಎಳೆಯನ್ನು ಸುಂದರವಾಗಿ ತಮ್ಮ ಮಾತುಗಳ ಮೂಲಕ ಅನಾವರಣಗೊಳಿಸಿದರು.ಸುಳ್ಯ ತಾಲೂಕು

ಕನ್ನಡ ಸಾಹಿತ್ಯ ಪರಿಷತ್ನ ಅಧ್ಯಕ್ಷರಾದ ಚಂದ್ರಶೇಖರ ಪೇರಾಲು ಕನ್ನಡ ರಾಜ್ಯೋತ್ಸವದ ಸಾಹಿತ್ಯ ಸಂಭ್ರಮ ಕಾರ್ಯಕ್ರಮದ ಮಹತ್ವವನ್ನು ತಿಳಿಸಿದರು.
ಚೊಕ್ಕಾಡಿ ಎಜ್ಯುಕೇಶನ್ ಸೊಸೈಟಿ ಕುಕ್ಕುಜಡ್ಕ ಇದರ ಅಧ್ಯಕ್ಷ ನಿರಂಜನ ಕೋಡ್ತುಗುಳಿ ಕಾರ್ಯಕ್ರಮ ಉದ್ಘಾಟಿಸಿದರು. ಚೊಕ್ಕಾಡಿ ವಿದ್ಯಾಸಂಸ್ಥೆಗಳ ಸಂಚಾಲಕರಾದ ಸುಪ್ರೀತ್ ಮೋಂಟಡ್ಕ ಶುಭ ಹಾರೈಸಿದರು.
ವೇದಿಕೆಯಲ್ಲಿ ಕನ್ನಡ ಗೀತ ಗಾಯನ ಕಾರ್ಯಕ್ರಮವನ್ನು ನಡೆಸಿಕೊಟ್ಟ ಕೆ.ಆರ್. ಗೋಪಾಲಕೃಷ್ಣ, ದ.ಕ. ಜಿಲ್ಲಾ ಕ.ಸಾ.ಪ. ಜಿಲ್ಲಾ ಪ್ರತಿನಿಧಿಯಾದ ರಾಮಚಂದ್ರ ಪಲ್ಲತ್ತಡ್ಕ, ಕ.ಸಾ.ಪ.ದ ಗೌರವ ಕಾರ್ಯದರ್ಶಿಗಳಾದ ತೇಜಸ್ವಿ ಕಡಪಳ ಮತ್ತು ಚಂದ್ರಮತಿ, ಪಂಜ ಹೋಬಳಿ ಘಟಕದ ಅಧ್ಯಕ್ಷ ಬಾಬು ಗೌಡ ಅಚ್ರಪ್ಪಾಡಿ, ಸುಳ್ಯ ಹೋಬಳಿ ಘಟಕದ ಅಧ್ಯಕ್ಷೆ ಚಂದ್ರಾವತಿ ಬಡ್ಡಡ್ಕ ಉಪಸ್ಥಿತರಿದ್ದರು. ಆಡಳಿತ ಮಂಡಳಿ ಕಾರ್ಯದರ್ಶಿ ತೇಜಸ್ವಿ ಕಡಪಳ ಸ್ವಾಗತಿಸಿ, ಮುಖ್ಯೋಪಾಧ್ಯಾಯ ಸಂಕೀರ್ಣ ಚೊಕ್ಕಾಡಿ ವಂದಿಸಿದರು ಸಹಶಿಕ್ಷಕ ಹರಿಪ್ರಸಾದ. ಕೆ. ಕಾರ್ಯಕ್ರಮ ನಿರೂಪಿಸಿದರು.










