ಸುಳ್ಯ:2025-26ನೇ ಸಾಲಿನ ಎಸ್ಎಸ್ಎಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು ಸುಳ್ಯ ತಾಲೂಕಿಗೆ ದಾಖಲೆಯ ಶೇ.99.10 ಫಲಿತಾಂಶ ಬಂದಿದೆ. ಈ ಬಾರಿಯ ವಿಶೇಷತೆಯೆಂದರೆ ಇಡೀ ತಾಲೂಕಿನ 37 ಪ್ರೌಢ ಶಾಲೆಗಳಲ್ಲಿ ಕೇವಲ 16 ಮಂದಿ ವಿದ್ಯಾರ್ಥಿಗಳು ಮಾತ್ರ ಅನುತ್ತೀರ್ಣರಾಗಿದ್ದಾರೆ. 37 ಶಾಲೆಗಳಲ್ಲಿ 30 ಶಾಲೆಗಳಲ್ಲಿ ಶೇ.100 ಫಲಿತಾಂಶ ದಾಖಲಿಸಿದರೆ 7 ಶಾಲೆಗಳಿಗೆ ಶೇ.100 ನಷ್ಟವಾಗಿದೆ.
861 ಹುಡುಗರು ಮತ್ತು
908 ಹುಡುಗಿಯರು ಸೇರಿ ಒಟ್ಟು1769 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 852 ಹುಡುಗರು ಮತ್ತು 901 ಹುಡುಗಿಯರು ಸೇರಿ ಒಟ್ಟು1753 ಮಂದಿ ಉತ್ತೀರ್ಣರಾಗಿ ಶೇ.99.10 ಫಲಿತಾಂಶ ಬಂದಿದೆ. ತಾಲೂಕಿನಲ್ಲಿ ಕೇವಲ 16 ಮಂದಿ ವಿದ್ಯಾರ್ಥಿಗಳು ಮಾತ್ರ ಅನುತ್ತೀರ್ಣರಾಗಿದ್ದಾರೆ.ಸರಕಾರಿ ಶಾಲೆಯಲ್ಲಿ 13 ವಿದ್ಯಾರ್ಥಿಗಳು, ಅನುದಾನಿತ ಶಾಲೆಯಲ್ಲಿ 3 ವಿದ್ಯಾರ್ಥಿಗಳು ಅನುತ್ತೀರ್ಣರಾದರೆ, ಅನುದಾನ ರಹಿತ ಶಾಲೆಯಲ್ಲಿ ಎಲ್ಲರೂ ಉತ್ತೀರ್ಣರಾಗಿದ್ದಾರೆ.
ಇದರಲ್ಲಿ ಸುಳ್ಯ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಪರೀಕ್ಷೆಗೆ ಹಾಜರಾದ 227 ವಿದ್ಯಾರ್ಥಿಗಳಲ್ಲಿ 219 ಮಂದಿ ಉತ್ತೀರ್ಣರಾಗಿ ಶೇ.96.47 ಫಲಿತಾಂಶ ದಾಖಲಿಸಿದೆ. ಇಲ್ಲಿ 8 ಮಂದಿ ಅನುತ್ತೀರ್ಣರಾಗಿದ್ದಾರೆ.
ಎಲಿಮಲೆ ಸರಕಾರಿ ಪ್ರೌಢ ಶಾಲೆಯಲ್ಲಿ ಪರೀಕ್ಷೆಗೆ ಹಾಜರಾದ 65 ವಿದ್ಯಾರ್ಥಿಗಳಲ್ಲಿ 62 ಮಂದಿ ಉತ್ತೀರ್ಣರಾಗಿ ಶೇ. 95.38 ಫಲಿತಾಂಶ ದಾಖಲಿಸಿ 3 ಮಂದಿ ಅನುತ್ತೀರ್ಣರಾಗಿದ್ದಾರೆ.
ಎಣ್ಮೂರು ಸರಕಾರಿ ಪ್ರೌಢಶಾಲೆಯಲ್ಲಿ ಪರೀಕ್ಷೆಗೆ ಹಾಜರಾದ 74 ವಿದ್ಯಾರ್ಥಿಗಳಲ್ಲಿ 73 ಮಂದಿ ಉತ್ತೀರ್ಣರಾಗಿ ಶೇ.98.8 ಫಲಿತಾಂಶ ದಾಖಲಿಸಿ, ಒಬ್ಬರು ಅನುತ್ತೀರ್ಣರಾಗಿದ್ದಾರೆ.
ಸರಕಾರಿ ಪ್ರೌಢಶಾಲೆ ಸಂಪಾಜೆ(ಆರ್ಎಂಎಸ್) ಇಲ್ಲಿ ಪರೀಕ್ಷೆಗೆ ಹಾಜರಾದ 12 ವಿದ್ಯಾರ್ಥಿಗಳಲ್ಲಿ 11 ಮಂದಿ ಉತ್ತೀರ್ಣರಾಗಿ ಶೇ. 91.67 ಫಲಿತಾಂಶ ದಾಖಲಿಸಿ, ಒಬ್ಬರು ಅನುತ್ತೀರ್ಣರಾಗಿದ್ದಾರೆ.
ಅನುದಾನಿತ ಶಾಲೆಗಳಲ್ಲಿ ಬಾಳಿಲ ವಿದ್ಯಾಬೋಧಿನಿ ಪ್ರೌಢಶಾಲೆಯಲ್ಲಿ 92 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 91 ಮಂದಿ ಉತ್ತೀರ್ಣರಾಗಿ ಶೇ.98.9 ಫಲಿತಾಂಶ ಬಂದಿದೆ.ಇಲ್ಲಿ ಒಬ್ಬರು ಅನುತ್ತೀರ್ಣರಾಗಿದ್ದಾರೆ.
ಸುಬ್ರಹ್ಮಣ್ಯ ಶ್ರೀ ಸುಬ್ರಹ್ಮಣ್ಯೇಶ್ವರ ಪ.ಪೂ.ಕಾಲೇಜಿನಲ್ಲಿ 77 ಮಂದಿ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿ 76 ಮಂದಿ ಉತ್ತೀರ್ಣರಾಗಿ ಶೇ.98.7 ಫಲಿತಾಂಶ ಬಂದಿದೆ.ಇಲ್ಲಿ ಒಬ್ಬರು ಅನುತ್ತೀರ್ಣರಾಗಿದ್ದಾರೆ.
ಕೆವಿಜಿ ಪ್ರೌಢ ಶಾಲೆ ಕೊಲ್ಲಮೊಗ್ರ ಇಲ್ಲಿ 17 ವಿದ್ಯಾರ್ಥಿಗಳ ಪೈಕಿ 16 ಮಂದಿ ಉತ್ತೀರ್ಣರಾಗಿ ಶೇ. 94.11ಫಲಿತಾಂಶ ಬಂದಿದೆ. ಇಲ್ಲಿ ಒಬ್ಬರು ಅನುತ್ತೀರ್ಣರಾಗಿದ್ದಾರೆ.
ತಾಲೂಕಿನ 37 ಶಾಲೆಗಳ ಪೈಕಿ 30 ಶಾಲೆಗಳಿಗೆ ಶೇ.100 ಫಲಿತಾಂಶ ಬಂದಿದೆ. ತಾಲೂಕಿನ 17 ಸರಕಾರಿ ಪ್ರೌಢ ಶಾಲೆಗಳ ಪೈಕಿ 4ಸರಕಾರಿ ಶಾಲೆಗಳಿಗೆ ಮತ್ತು 7 ಅನುದಾನಿತ ಶಾಲೆಗಳಲ್ಲಿ 3 ಅನುದಾನಿತ ಶಾಲೆಗಳು ಸೇರಿ 7 ಶಾಲೆಗಳಿಗೆ ಅಲ್ಪ ಅಂತರದಲ್ಲಿ 100 ಶೇಕಡಾ ಫಲಿತಾಂಶ ಕೈ ತಪ್ಪಿತು.ಎಲ್ಲಾ 13 ಅನುದಾನ ರಹಿತ ಶಾಲೆಗಳಲ್ಲಿ ಎಲ್ಲರೂ ಉತ್ತೀರ್ಣರಾಗಿ ಶೇ.100 ಫಲಿತಾಂಶ ಬಂದಿದೆ.














