ಹೈದರಾಬಾದ್:ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ತಮ್ಮ ಕೊನೆಯ ಪಂದ್ಯದಲ್ಲಿ ಸೋಲನುಭವಿಸಿದರೂ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ಸಿಬಿ) ಅಗ್ರ ಸ್ಥಾನಿಯಾಗಿ ಅಭಿಯಾನ ಮುಗಿಸಿತು. ಇಂದು ನಡೆದ ಪಂದ್ಯದಲ್ಲಿ ಆರ್ಸಿಬಿ ವಿರುದ್ಧ
ಸನ್ರೈಸರ್ಸ್ ಹೈದರಾಬಾದ್ (ಎಸ್ಆರ್ಎಚ್) 55 ರನ್ಗಳ ಅಂತರದಲ್ಲಿ ಗೆಲುವು ಸಾಧಿಸಿತು. ಆರ್ಸಿಬಿ, ಎಸ್ಆರ್ಎಚ್ ಮತ್ತು ಗುಜರಾತ್ ಟೈಟನ್ಸ್ ತಲಾ
18 ಅಂಕ ಪಡೆದರೂ ಉತ್ತಮ ರನ್ ರೇಟ್ ಆಧಾರದಲ್ಲಿ ಆರ್ಸಿಬಿ ಮೊದಲ ಸ್ಥಾನ ಪಡೆಯಿತು. ಗುಜರಾತ್ ಟೈಟನ್ಸ್ ಎರಡನೇ ಸ್ಥಾನ ಮತ್ತು ಎಸ್ಆರ್ಎಚ್ ತೃತೀಯ ಸ್ಥಾನಿಯಾಯಿತು.
3 ತಂಡಗಳು ಈಗಾಗಲೇ ಪ್ಲೇ ಆಫ್ಗೆ ಪ್ರವೇಶಿಸಿದೆ.ಮೆ.26ರಂದು ಮೊದಲ ಕ್ವಾಲಿಫೈಯರ್ನಲ್ಲಿ ಆರ್ಸಿಬಿ ತಂಡ ಗುಜರಾತ್ ಟೈಟನ್ಸ್ ತಂಡವನ್ನು ಎದುರಿಸಲಿದೆ.ಮೊದಲು ಬ್ಯಾಟ್ ಮಾಡಿದ
ಎಸ್ಆರ್ಎಚ್ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 255 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಆರ್ಸಿಬಿ 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 200 ರನ್ ಗಳಿಸಿತು. ವೆಂಕಟೇಶ್ ಅಯ್ಯರ್ 19 ಎಸೆತಗಳಲ್ಲಿ ತಲಾ 4 ಸಿಕ್ಸರ್ ಮತ್ತು
ಬೌಂಡರಿ ನೆರವಿನಿಂದ 44 ರನ್ ಗಳಿಸಿದರೆ, ನಾಯಕ ರಜತ್ ಪಾಟಿದಾರ್ (56), ಕ್ರುನಾಲ್ ಪಾಂಡ್ಯ (41*), ದೇವದತ್ತ್ ಪಡಿಕಲ್(21) ರನ್ ಗಳಿಸಿದರು. ಮೊದಲು ಬ್ಯಾಟ್ ಮಾಡಿದ
ಎಸ್ಆರ್ಎಚ್ ಪರ ಬ್ಯಾಟರ್ಗಳು ಆರಂಭದಿಂದಲೇ ಸ್ಪೋಟಕ ಆಟಕ್ಕೆ ಒತ್ತು ನೀಡಿದರು. ಟ್ರಾವಿಸ್ ಹೆಡ್ 16 ಎಸೆತಗಳಲ್ಲಿ 26 ರನ್,
ಅಭಿಷೇಕ್ ಶರ್ಮಾ ಕೇವಲ 22 ಎಸೆತಗಳಲ್ಲಿ 4 ಬೌಂಡರಿ, 5 ಸಿಕ್ಸರ್ ಸಹಿತ 56 ರನ್ ಗಳಿಸಿ ಔಟಾದರೆ, ಹೆನ್ರಿಕ್ ಕ್ಲಾಸೆನ್ ಅವರು 24 ಎಸೆತಗಳಲ್ಲಿ 2 ಬೌಂಡರಿ, 5 ಸಿಕ್ಸರ್ ಸಹಿತ 51 ರನ್ ಗಳಿಸಿ
ಇಶಾನ್ ಕಿಶನ್ (79 ರನ್: 46 ಎಸೆತ 8 ಬೌಂಡರಿ, 3 ಸಿಕ್ಸರ್) ಹಾಗೂ ನಿತೀಶ್ ಕುಮಾರ್ ರೆಡ್ಡಿ (29 ರನ್: 12 ಎಸೆತ, 1ಬೌಂಡರಿ, 3 ಸಿಕ್ಸರ್) ತಂಡದ ಮೊತ್ತವನ್ನು 250ರ ಗಡಿ ದಾಟಿಸಿದರು.













