ನ್ಯೂರ್ಯಾಕ್: ಫಿಫಾ ವಿಶ್ವಕಪ್ ಟೂರ್ನಿಯಲ್ಲಿ ಅಮೆರಿಕ, ಇಂಗ್ಲೆಂಡ್ ಮತ್ತು ಬೆಲ್ಜಿಯಂ ತಂಡಗಳು ಪ್ರಿ-ಕ್ವಾರ್ಟರ್ ಫೈನಲ್ ಪ್ರವೇಶಿಸಿವೆ.ಕುತೂಹಲ ಕೆರಳಿಸಿದ್ದ ಪಂದ್ಯದಲ್ಲಿ ಸೆನೆಗಲ್ ತಂಡವನ್ನು 3-2 ಗೋಲುಗಳ ಅಂತರದಿಂದ ಮಣಿಸಿದ ಬೆಲ್ಜಿಯಂ ಫಿಫಾ ವಿಶ್ವಕಪ್ ಟೂರ್ನಿಯ ಪ್ರಿ-ಕ್ವಾರ್ಟರ್ ಫೈನಲ್ (16ರ ಘಟ್ಟ) ಪ್ರವೇಶಿಸಿದೆ.
ನಿಗದಿತ ಅವಧಿಯಲ್ಲಿ
ಉಭಯ ತಂಡಗಳು ಸಮಬಲ ಸಾಧಿಸಿದ್ದರಿಂದ ಪಂದ್ಯವು ಹೆಚ್ಚುವರಿ ಸಮಯಕ್ಕೆ ಸಾಕ್ಷಿಯಾಯಿತು. ಕೊನೆಯ ಕ್ಷಣದವರೆಗೂ ಮುನ್ನಡೆಯಲ್ಲಿದ್ದ ಸೇನೆಗಲ್ಗೆ ಅನಿರೀಕ್ಷಿತ ಸೋಲು ಆಘಾತ ಉಂಟು ಮಾಡಿತು.
ಮತ್ತೊಂದು ಪಂದ್ಯದಲ್ಲಿ ಬೊಸ್ನಿಯಾ ತಂಡವನ್ನು 2-0 ಗೋಲುಗಳಿಂದ ಸುಲಭವಾಗಿ ಮಣಿಸಿದ ಅಮೆರಿಕ, ವಿಶ್ವಕಪ್ ಇತಿಹಾಸದಲ್ಲಿ ಎರಡನೇ ಸಲ ಈ ಹಂತದಲ್ಲಿ ಜಯ ಸಾಧಿಸಿದೆ.ಪಂದ್ಯದ 45ನೇ ನಿಮಿಷದಲ್ಲಿ ಹಾಗೂ 81ನೇ ನಿಮಿಷದಲ್ಲಿ ಅಮೆರಿಕ ಗೋಲು ದಾಖಲಿಸುವ ಮೂಲಕ ಜಯದ ನಗೆ ಬೀರಿತು. ಆದರೆ ಬೊಸ್ನಿಯಾ ಯಾವುದೇ ಗೋಲು ಗಳಿಸುವಲ್ಲಿ ಸಾಧ್ಯವಾಗಲಿಲ್ಲ.
ಕಾಂಗೋ ತಂಡವನ್ನು 2-1 ಅಂತರದಲ್ಲಿ ಮಣಿಸಿದ ಇಂಗ್ಲೆಂಡ್ ಪ್ರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿತು. ಹಿನ್ನಡೆಯಲ್ಲಿದ್ದ ತಂಡಕ್ಕೆ ನಾಯಕ ಹ್ಯಾರಿ ಕೇನ್ ಅವಳಿ ಗೋಲು(76, 86ನೇ ನಿಮಿಷ) ಬಾರಿಸಿ ಜಯ ತಂದರು.






