ಮ್ಯಾಂಚೆಸ್ಟರ್: ವಿದೇಶದಲ್ಲಿ ಭಾರತದ ಸೋಲಿನ ಸರಣಿ ಮುಂದುವರಿದಿದ್ದು ಟಿ20ಯಲ್ಲಿ ಐರ್ಲೆಂಡ್ ವಿರುದ್ಧ ಸರಣಿ ಸೋತ ಇಂಗ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಸೋಲನುಭವಿಸಿದೆ.
ಭಾರತ ವಿರುದ್ಧದ ಐದು ಪಂದ್ಯಗಳ ಟಿ–20 ಸರಣಿಯ 2ನೇ ಪಂದ್ಯದಲ್ಲಿ ಜೇಕಬ್ ಬೆಥೆಲ್ ಅವರ ಅಬ್ಬರದ ಬ್ಯಾಟಿಂಗ್ ನೆರವಿನಿಂದ
ಇಂಗ್ಲೆಂಡ್ ತಂಡವು 4 ವಿಕೆಟ್ಗಳ ಗೆಲುವು ಸಾಧಿಸಿದೆ.ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡವು 20 ಓವರ್ಗಳ ಅಂತ್ಯಕ್ಕೆ 7 ವಿಕೆಟ್ ನಷ್ಟಕ್ಕೆ 190 ರನ್ ಗಳಿಸಿತ್ತು.191 ರನ್ ಗುರಿ ಬೆನ್ನಟ್ಟಿದ19 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ ಗುರಿ ತಲುಪಿದರು.
ಹ್ಯಾರಿ ಬ್ರೂಕ್ ಪಡೆಯು ಮೊದಲನೇ ಓವರ್ನಲ್ಲೇ ಇಬ್ಬರೂ ಆರಂಭಿಕರ ವಿಕೆಟ್ ಕಳೆದುಕೊಂಡಿತು. ಅರ್ಷದೀಪ್ ಸಿಂಗ್ ಎಸೆದ ಮೊದಲನೇ ಓವರ್ನಲ್ಲಿ ಫಿಲ್ ಸಾಲ್ಟ್, ಜೋಸ್ ಬಟ್ಲರ್ ಡಕ್ ಔಟ್ ಆದರು. ನಾಯಕ
ಹ್ಯಾರಿ ಬ್ರೂಕ್ 15 ಎಸೆತಗಳಲ್ಲಿ 39 ರನ್ ಗಳಿಸಿದರು. ಜೇಕಬ್ ಬೆಥೆಲ್( ಅಜೇಯ 76 ರನ್: 46 ಎಸೆತ: 5 ಬೌಂಡರಿ 5 ಸಿಕ್ಸರ್) ಮತ್ತು ಟಾಮ್ ಬ್ಯಾಂಟನ್ (39 ರನ್: 32 ಎಸೆತ) ನಾಲ್ಕನೇ ವಿಕೆಟ್ಗೆ 67 ರನ್ ಜೊತೆಯಾಟವಾಡುವ ಮೂಲಕ ತಂಡವನ್ನು ಕುಸಿತದಿಂದ ಕಾಪಾಡಿದರು.
ರವಿ ಬಿಷ್ಣೋಯಿ ಎಸೆದ 16ನೇ ಓವರ್ನಲ್ಲಿ 29 ರನ್ ಗಳಿಸುವ ಮೂಲಕ ಇಂಗ್ಲೆಂಡ್ ಬ್ಯಾಟರ್ಗಳು ಪಂದ್ಯದ ಗತಿಯನ್ನೇ ಬದಲಿಸಿದರು.
ಭಾರತದ ಪರ ಪದಾರ್ಪಣೆ ಮಾಡಿದ ವೈಭವ್ ಸೂರ್ಯವಂಶಿ, 2 ಸಿಕ್ಸರ್ ಸಿಡಿಸಿದರು. ಆದರೆ 14 ರನ್ ಗಳಿಸಿದ್ದ ವೇಳೆ ವಿಲ್ ಜಾಕ್ಸ್ ಎಸೆತದಲ್ಲಿ ಸ್ಟಂಪ್ ಔಟ್ ಆಗಿ ಪೆವಿಲಿಯನ್ ಸೇರಿದರು. ಸ್ಟೋಟಕ ಆಡವಾಡಿದ ಅಭಿಷೇಕ್ ಶರ್ಮಾ 24 ಎಸೆತಗಳಲ್ಲಿ 43 ರನ್ ಗಳಿಸಿ ಸ್ಯಾಮ್ ಕರನ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ಮೂರನೇ ವಿಕೆಟ್ಗೆ ಜೊತೆಯಾದ ನಾಯಕ ಶ್ರೇಯಸ್ ಅಯ್ಯರ್(37 ರನ್; 22 ಎಸೆತ) ಹಾಗೂ ಇಶಾನ್ ಕಿಶನ್(49 ರನ್; 40 ಎಸೆತ) ಮೂರನೇ ವಿಕೆಟ್ಗೆ 65 ರನ್ ಜೊತೆಯಾಟವಾಡಿದರು.
ಡೆತ್ ಓವರ್ನಲ್ಲಿ ಇಂಗ್ಲೆಂಡ್ನ ಬಿಗಿ ಬೌಲಿಂಗ್ ದಾಳಿ ಎದುರು ಭಾರತದ ಬ್ಯಾಟರ್ಗಳು ರನ್ ಗಳಿಸಲು ಪರದಾಡಿದರು. ತಿಲಕ್ ವರ್ಮ 11 ಎಸೆತಗಳಲ್ಲಿ ಅಜೇಯ 24 ರನ್ ಗಳಿಸುವ ಮೂಲಕ ತಂಡದ ಮೊತ್ತವನ್ನು 190ರ ಗಡಿ ದಾಟಿಸಿದರು.ಇಂಗ್ಲೆಂಡ್ ಪರ ಸ್ಯಾಮ್ ಕರನ್ 3 ವಿಕೆಟ್, ವಿಲ್ ಜ್ಯಾಕ್ಸ್ 1 ವಿಕೆಟ್ ಪಡೆದು ಮಿಂಚಿದರು.ಸರಣಿಯಲ್ಲಿ ಇಂಗ್ಲೆಂಡ್ 1–0 ಮುನ್ನಡೆ ಸಾಧಿಸಿದೆ. ಮೊದಲ ಪಂದ್ಯವು ಮಳೆಯಿಂದ ರದ್ದಾಗಿತ್ತು.







