ನವದೆಹಲಿ: ಪೆಟ್ರೋಲ್ ಮತ್ತು ಡೀಸೆಲ್ ದರ ಮತ್ತೆ ಏರಿಕೆಯಾಗಿದೆ. ದೇಶದಾದ್ಯಂತ ಪ್ರತಿ ಲೀಟರ್ ಪೆಟ್ರೋಲ್ ದರ 87 ಪೈಸೆ ಮತ್ತು ಡೀಸೆಲ್ ದರ 91 ಪೈಸೆ ಮತ್ತೆ ಏರಿಕೆಯಾಗಿದೆ.ಹತ್ತು ದಿನದೊಳಗೆ ಮೂರನೇ ಬಾರಿಗೆ ಏರಿಕೆಯಾಗಿದ್ದು ಮೂರು ಬಾರಿಯಾಗಿ ಒಟ್ಟು
5ರೂಗಿಂತ ಅಧಿಕ ಏರಿಕೆಯಾಗಿದೆ.ಮೇ.15ರಂದು ಪೆಟ್ರೋಲ್ ಮತ್ತು ಡೀಸೆಲ್ ದರವನ್ನು ಪ್ರತಿ ಲೀಟರ್ಗೆ ತಲಾ 3ರಷ್ಟು ಹೆಚ್ಚಿಸಿತ್ತು. ಬಳಿಕ ಮೇ 19ರಂದು ಪೆಟ್ರೋಲ್ ಮತ್ತು ಡೀಸೆಲ್ ದರ ತಲಾ 90 ಪೈಸೆ ಏರಿಕೆ ಮಾಡಲಾಗಿತ್ತು.
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 99.51ರಷ್ಟಿದ್ದರೆ, ಡೀಸೆಲ್ ದರ 92.49ಕ್ಕೆ ಏರಿಕೆಯಾಗಿದೆ.
ಸುಳ್ಯದಲ್ಲಿ ಪೆಟ್ರೋಲ್ ದರ ರೂ. 108.12 ಮತ್ತು ಡೀಸೆಲ್ ದರ ರೂ.96.01ಕ್ಕೆ ಏರಿಕೆಯಾಗಿದೆ. ಮೇ.15ರ ಮೊದಲು ಪೆಟ್ರೋಲ್ ದರ 102.98 ಇತ್ತು ಇದೀಗ 10 ದಿನದಲ್ಲಿ ರೂ.5.14 ಏರಿದೆ. ಡೀಸೆಲ್ 91.01 ಇತ್ತು, ಒಟ್ಟು 5 ರೂ.ಏರಿದಂತಾಗಿದೆ.













