ಪೆನ್ಸಿಲ್ವೇನಿಯಾ: 2026ರ ಫಿಫಾ ಫುಟ್ಬಾಲ್ ವಿಶ್ವಕಪ್ ಟೂರ್ನಿಯಲ್ಲಿ ಪರಗ್ವೆ ವಿರುದ್ಧ 1-0 ಗೋಲುಗಳ ಅಂತರದ ಗೆಲುವು ಸಾಧಿಸಿರುವ ಫ್ರಾನ್ಸ್ ಕ್ವಾರ್ಟರ್ ಫೈನಲ್ಗೆ ಲಗ್ಗೆ ಇಟ್ಟಿದೆ. ಶನಿವಾರ ತಡರಾತ್ರಿ ನಡೆದ ಪ್ರಿ-ಕ್ವಾರ್ಟರ್ ಪಂದ್ಯದಲ್ಲಿ ಕೈಲಿಯನ್ ಎಂಬಾಪೆ ಗಳಿಸಿದ
ಏಕೈಕ ಗೋಲು ನೆರವಿನಿಂದ ಫ್ರಾನ್ಸ್ ಅಂತಿಮ ಎಂಟರ ಘಟ್ಟಕ್ಕೆ ಪ್ರವೇಶಿಸಿತು.ತೀವ್ರ ಜಿದ್ದಾಜಿದ್ದಿನಿಂದ ಸಾಗಿದ ಈ ಪಂದ್ಯವು ಹಲವು ರೋಚಕ ನಿಮಿಷಗಳಿಗೆ ಸಾಕ್ಷಿಯಾಗಿತ್ತು. ಪಂದ್ಯದ 70ನೇ ನಿಮಿಷದಲ್ಲಿ ಲಭಿಸಿದ ಪೆನಾಲ್ಟಿ ಅನ್ನು ಗೋಲು ಆಗಿ ಪರಿವರ್ತಿಸಿದ ಎಂಬಾಪೆ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದರು.
ಮತ್ತೊಂದು ಪಂದ್ಯದಲ್ಲಿ ಆತಿಥೇಯ ಕೆನಡಾ ವಿರುದ್ಧ ಮೊರಕ್ಕೊ 3-0 ಗೋಲುಗಳ ಅಂತರದ ಭರ್ಜರಿ ಗೆಲುವು ಸಾಧಿಸಿತು. ಫ್ರಾನ್ಸ್ ಹಾಗೂ ಮೊರಕ್ಕೊ ನಡುವೆ ಕ್ವಾರ್ಟರ್ ಪಂದ್ಯ ನಡೆಯಲಿದೆ.







