ಹ್ಯೂಸ್ಟನ್:ಫಿಫಾ ವಿಶ್ವಕಪ್ ಪಂದ್ಯಾವಳಿಯಲ್ಲಿ ಜಪಾನ್ ತಂಡವನ್ನು ಸೋಲಿಸಿದ ಮಾಜಿ ಚಾಂಪಿಯನ್ ಬ್ರೆಜಿಲ್ ಪ್ರಿಕ್ವಾರ್ಟರ್ಫೈನಲ್ಗೆ ಮುನ್ನಡೆಯಿತು. ಪೆನಾಲ್ಟಿ ಶೂಟೌಟ್ನಲ್ಲಿ ಪರಾಗ್ವೆ ವಿರುದ್ಧ ಪರಾಭವಗೊಂಡ ಮಾಜಿ ಚಾಂಪಿಯನ್ ಜರ್ಮನಿ ಟೂರ್ನಿಯಿಂದ ಹೊರ ಬಿದ್ದಿದೆ.ಇಂಜುರಿ ಅವಧಿಯಲ್ಲಿ ಸಬ್ಸ್ಟಿಟ್ಯೂಟ್ ಆಟಗಾರ ಗೇಬ್ರಿಯಲ್ ಮಾರ್ಟಿನೆಲಿ ಅವರು ಗಳಿಸಿದ
ನಿರ್ಣಾಯಕ ಗೋಲಿನಿಂದಾಗಿ ಬ್ರೆಜಿಲ್ ತಂಡವು ಸೋಮವಾರ ರಾತ್ರಿ ನಡೆದ ಪಂದ್ಯದಲ್ಲಿ 2–1ರಿಂದ ಜಪಾನ್ ತಂಡವನ್ನು ಸೋಲಿಸಿ, ಪ್ರಿಕ್ವಾರ್ಟರ್ಫೈನಲ್ಗೆ ಮುನ್ನಡೆಯಿತು.
ಕೈಶು ಸಾನೊ ಅವರು 29ನೇ ನಿಮಿಷದಲ್ಲಿ ಗಳಿಸಿದ ಗೋಲಿನ ನೆರವಿನಿಂದ ಜಪಾನ್ ತಂಡವು ಮೊದಲಾರ್ಧದಲ್ಲಿ 1–0 ಮುನ್ನಡೆ ಯಲ್ಲಿತ್ತು. ವಿರಾಮದ ಬಳಿಕ ಪುಟಿದೆದ್ದ ಬ್ರೆಜಿಲ್ನ ಕೆಸೆಮಿರೊ 56ನೇ ನಿಮಿಷದಲ್ಲಿ ಸಮಬಲ ತಂದುಕೊಟ್ಟರು. ಕೊನೆಯಲ್ಲಿ, ಫಾರ್ವರ್ಡ್ ಆಟಗಾರ ಗೇಬ್ರಿಯಲ್ (90+6ನೇ ನಿಮಿಷ) ಗೋಲು ಬಾರಿಸಿದರು.
ಜರ್ಮನಿ-ಪರಾಗ್ವೆ ಪಂದ್ಯ ನಿಶ್ಚಿತ ಅವಧಿ ಹಾಗು ಎಕ್ಸ್ಟ್ರಾ ಅವಧಿಯಲ್ಲಿ ಸಮಬಲ(1-1) ಸಾಧಿಸಿತು. ಇದರಿಂದ ಪಂದ್ಯ ಪೆನಾಲ್ಟಿ ಶೂಟೌಟ್ಗೆ ಸಾಗಿತ್ತು. ಪೆನಾಲ್ಟಿ ಶೂಟೌಟ್ನಲ್ಲಿ 4-3 ಗೋಲು ಅಂತರದಲ್ಲಿ ನಾಲ್ಕು ಬಾರಿಯ ಚಾಂಪಿಯನ್ ಜರ್ಮನಿಯನ್ನು ಮಣಿಸಿದ ಪರಾಗ್ವೆ ಪ್ರಿಕ್ವಾರ್ಟರ್ ಫೈನಲ್ ಪ್ರವೇಶಿಸಿತು. ಜರ್ಮನಿ ಟೂರ್ನಿಯಿಂದ ಹೊರ ಬಿತ್ತು.






