ಸುಳ್ಯ:ಶಾಸಕಿ ಭಾಗೀರಥಿ ಮುರುಳ್ಯ ಅವರು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾಗಿ ಈ ಹಿಂದೆ ಸಲ್ಲಿಸಿದ್ದ ಅನುದಾನ ಬೇಡಿಕೆಯ ಅರ್ಜಿಗಳ ಬಗ್ಗೆ ಇಂದು ಮತ್ತೊಮ್ಮೆ ನೆನಪಿಸಿ ಅನುದಾನ ಬಿಡುಗಡೆ ಮಾಡುವಂತೆ ವಿನಂತಿಸಿದರು ಕಳೆದ ವರುಷ ಮೇ ತಿಂಗಳಿನಲ್ಲಿ ಕಡಬ ತಾಲ್ಲೂಕು ಕೆನ್ಯ ಗ್ರಾಮದ
ಮಜ್ಜಾರು- ಕಡಾವು ಎಂಬಲ್ಲಿ ಕಿರುಅಣೆಕಟ್ಟು ಮತ್ತು ಸೇತುವೆ ನಿರ್ಮಾಣಕ್ಕೆ ಮನವಿ ಸಲ್ಲಿಸಲಾಗಿ ನಂತರ ವರಾಹಿ ಮತ್ತು ಬೃಹತ್ ನೀರಾವರಿ ಯೋಜನೆಯ ಅಧಿಕಾರಿಗಳು ಭೇಟಿ ನೀಡಿ ಯೋಜನೆ ತಯಾರಿಸಿದ್ದರು ನಂತರ ಯೋಜನೆಯೂ ಯಾವುದೇ ರೀತಿಯಲ್ಲಿ ಮುಂದುವರಿಯದೆ ಉಳಿದಿತ್ತು ಇದರ ಬಗ್ಗೆ ಮಾಹಿತಿ ನೀಡಿದ ಶಾಸಕರು ಈಗಾಗಲೇ ಅನುದಾನ ಮಂಜೂರಾದ ಆಲೆಟ್ಟಿ ಗ್ರಾಮ ಕುಕ್ಕುಂಬಳ ಸೇತುವೆಯ ಇನ್ನೂ ಟೆಂಡರ್ ಹಂತದಲ್ಲಿ ಇದ್ದು ಅದನ್ನು ಅದಷ್ಟು ಬೇಗ ಪ್ರಕ್ರಿಯೆಗಳನ್ನು ಮುಗಿಸಿ ಕೆಲಸ ಆರಂಭಿಸುವಂತೆ ವಿನಂತಿ ಮಾಡಿದರು ಶಾಸಕರ ಮನವಿಗೆ ಸ್ಪಂದಿಸಿ ಡಿಸಿಎಂ ಅವರು ತಕ್ಷಣವೆ ಕೆಲಸ ಕಾರ್ಯಗಳನ್ನು ಮಾಡಿ ಮುಗಿಸುಂತೆ ಅಧಿಕಾರಿಗಳಿಗೆ ಸೂಚಿಸಿದರು.













