ನ್ಯೂರ್ಯಾಕ್:ಕಿಲಿಯನ್ ಎಂಬಾಪೆ ಅವರು ಗಳಿಸಿದ ಎರಡು ಗೋಲುಗಳ ನೆರವಿನಿಂದ ಬುಧವಾರ ಬೆಳಗ್ಗೆ ನಡೆದ ವಿಶ್ವಕಪ್ನ ರೌಂಡ್ ಆಫ್ 32 ಪಂದ್ಯದಲ್ಲಿ ಸ್ವೀಡನ್ ವಿರುದ್ಧ 3–0 ಅಂತರದಲ್ಲಿ ಫ್ರಾನ್ಸ್ ಭರ್ಜರಿ ಜಯ ಸಾಧಿಸಿತು.28 ವರ್ಷದ
ಎಂಬಾಪೆ ಆಕರ್ಷಕ ಎರಡು ಗೋಲುಗಳನ್ನು ಹೊಡೆಯುವ ಮೂಲಕ ಹೊಸ ದಾಖಲೆ ಬರೆದರು.ಈ ಎರಡು ಗೋಲುಗಳ ನೆರವಿನಿಂದ ಎಂಬಾಪೆ ವಿಶ್ವಕಪ್ನಲ್ಲಿ ತಮ್ಮ ಒಟ್ಟು ಗೋಲುಗಳ ಸಂಖ್ಯೆಯನ್ನು 18ಕ್ಕೆ ಹೆಚ್ಚಿಸಿಕೊಂಡರು.
ಮೆಕ್ಸಿಕೊ ತಂಡ 2-0 ಅಂತರದಲ್ಲಿ ಇಕ್ವೆಡಾರ್ ತಂಡವನ್ನು ಹಾಗು ನಾರ್ವೆ ತಂಡ ಐವರಿಕೋಸ್ಟ್ ತಂಡವನ್ನು 2-1 ಗೋಲುಗಳ ಅಂತರದಲ್ಲಿ ಸೋಲಿಸಿ ಪ್ರಿಕ್ವಾರ್ಟರ್ ಫೈನಲ್ಗೆ ಪ್ರವೇಶಿಸಿದೆ.






