ಹೈದರಾಬಾದ್: ಐಪಿಎಲ್ನ ರೋಚಕ ಪಂದ್ಯಗಳಲ್ಲಿ ಕೂಪರ್ ಕೊನೊಲಿ ಬಾರಿಸಿದ ಸ್ಫೋಟಕ ಶತಕದ ಹೊರತಾಗಿಯೂ, ಪಂಜಾಬ್ ಕಿಂಗ್ಸ್ ತಂಡವು ಸನ್ರೈಸರ್ಸ್ ಹೈದರಾಬಾದ್ ವಿರುದ್ಧ 33 ರನ್ಗಳ ಸೋಲೊಪ್ಪಿಕೊಂಡಿದೆ. ಈ ಗೆಲುವಿನೊಂದಿಗೆ ಪ್ಯಾಟ್ ಕಮಿನ್ಸ್ ನೇತೃತ್ವದ ಹೈದರಾಬಾದ್ ತಂಡವು ಅಂಕಪಟ್ಟಿಯಲ್ಲಿ ಪಂಜಾಬ್ ತಂಡವನ್ನು
ಕೆಳಗಿಳಿಸಿ ಅಗ್ರಸ್ಥಾನಕ್ಕೆ ಲಗ್ಗೆ ಇಟ್ಟಿದೆ.ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ದುಕೊಂಡ ಸನ್ರೈಸರ್ಸ್ ಆರಂಭಿಕರಾದ ಅಭಿಷೇಕ್ ಶರ್ಮಾ (13 ಎಸೆತಗಳಲ್ಲಿ 35) ಮತ್ತು ಟ್ರಾವಿಸ್ ಹೆಡ್ (19 ಎಸೆತಗಳಲ್ಲಿ 38), ಇಶಾನ್ ಕಿಶನ್ (32 ಎಸೆತಗಳಲ್ಲಿ 55) ಹೆನ್ರಿಚ್ ಕ್ಲಾಸೆನ್ ಕೇವಲ 43 ಎಸೆತಗಳಲ್ಲಿ 69 ರನ್ ಬಾರಿಸಿ ತಂಡದ ಮೊತ್ತವನ್ನು 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 235ಕ್ಕೆ ತಲುಪಿಸಿದರು.
236 ರನ್ಗಳ ಬೃಹತ್ ಗುರಿ ಬೆನ್ನಟ್ಟಿದ ಪಂಜಾಬ್ 20 ಓವರ್ಗಳಲ್ಲಿ 7 ವಿಕೆಟ್ ನಷ್ಟಕ್ಕೆ 202 ರನ್ ಗಳಿಸಲಷ್ಟೇ ಶಕ್ತವಾಯಿತು. ಪಂಜಾಬ್ ಕಿಂಗ್ಸ್ ತಂಡ, ಪ್ಯಾಟ್ ಕಮಿನ್ಸ್(2 ವಿಕೆಟ್) ಅವರ ಮಾರಕ ಬೌಲಿಂಗ್ ದಾಳಿಗೆ ಸಿಲುಕಿ ನಲುಗಿತು. ಒಂದು ತುದಿಯಲ್ಲಿ ಭದ್ರವಾಗಿ ನೆಲೆಯೂರಿದ ಕೂಪರ್ ಕೊನೊಲಿ(107 ರನ್), ಹೈದರಾಬಾದ್ ಬೌಲರ್ಗಳನ್ನು ದಂಡಿಸುತ್ತಾ ಶತಕ ಸಿಡಿಸಿದರು. ಅಂತಿಮವಾಗಿ
ಈ ಪಂದ್ಯದ ಗೆಲುವಿನೊಂದಿಗೆ ಸನ್ರೈಸರ್ಸ್ ಹೈದರಾಬಾದ್ ತಂಡವು ಪಂಜಾಬ್ ಕಿಂಗ್ಸ್ನಿಂದ ಅಗ್ರಸ್ಥಾನವನ್ನು ಕಿತ್ತುಕೊಂಡಿದೆ. ಸದ್ಯ ಹೈದರಾಬಾದ್ ಐಪಿಎಲ್ 2026ರ ಪಾಯಿಂಟ್ಸ್ ಟೇಬಲ್ನಲ್ಲಿ ಮೊದಲ ಸ್ಥಾನದಲ್ಲಿದ್ದರೆ, ಪಂಜಾಬ್ ಎರಡನೇ ಸ್ಥಾನಕ್ಕೆ ಕುಸಿದಿದೆ.











