ಹೂಸ್ಟನ್:ಸೌದಿ ಅರೇಬಿಯಾ ವಿರುದ್ಧದ ಪಂದ್ಯದಲ್ಲಿ ಡ್ರಾ ಸಾಧಿಸುವ ಮೂಲಕ ಕೇಪ್ ವರ್ದೆ ತಂಡವು ಫಿಫಾ ವಿಶ್ವಕಪ್ ನಾಕೌಟ್ ಪ್ರವೇಶಿಸಿದೆ.ಗುಂಪು ಹಂತದಲ್ಲಿ ಸತತ ಮೂರು ಪಂದ್ಯಗಳನ್ನು ಡ್ರಾ ಮಾಡಿಕೊಳ್ಳುವ ಮೂಲಕ ಈ ಸಾಧನೆ ಮಾಡಿದ ಅತ್ಯಂತ
ಚಿಕ್ಕ ದೇಶ ಎನ್ನುವ ಹಿರಿಮೆಗೆ ಪಾತ್ರವಾಗಿದೆ.ಇದೇ ಮೊದಲ ಬಾರಿ ಟೂರ್ನಿಯಲ್ಲಿ ಭಾಗವಹಿಸುತ್ತಿರುವ ಕೇಪ್ ವರ್ದೆ, ಬಲಿಷ್ಠ ಸ್ಪೇನ್ನೊಂದಿಗಿನ ಪಂದ್ಯದಲ್ಲಿ ಯಾವುದೇ ಗೋಲುಗಳಿಲ್ಲದೇ ಡ್ರಾ ಸಾಧಿಸಿದರೆ, ಉರುಗ್ವೆ ವಿರುದ್ಧದ ಪಂದ್ಯವನ್ನು 2-2 ಗೋಲುಗಳಲ್ಲಿ ಡ್ರಾ ಮಾಡಿಕೊಂಡಿತು. ನಾಕೌಟ್ ಹಂತದಲ್ಲಿ ಹಾಲಿ ವಿಶ್ವಕಪ್ ಚಾಂಪಿಯನ್ ಅರ್ಜೆಂಟೀನಾವನ್ನು ಎದುರಿಸಲಿದೆ.
ಉಸ್ಮಾನ್ ಡೆಂಬೆಲೆ ಬಾರಿಸಿದ ಹ್ಯಾಟ್ರಿಕ್ ಗೋಲುಗಳ ನೆರವಿನಿಂದ ಫ್ರಾನ್ಸ್ 4-1 ಅಂತರದಲ್ಲಿ ನಾರ್ವೆ ತಂಡವನ್ನು ಮಣಿಸಿತು.ಡಿಸೈರ್ ದುವೆ ಮತ್ತೊಂದು ಗೋಲು ಬಾರಿಸಿದರು.
ಎಚ್ ಗುಂಪಿನ ಪಂದ್ಯದಲ್ಲಿ ಉರುಗ್ವೆ ವಿರುದ್ಧ 1-0 ಗೋಲುಗಳ ಜಯ ಸಾಧಿಸಿದ ಸ್ಪೇನ್ ನಾಕೌಟ್ ಪ್ರವೇಶಿಸಿದ. ಉರುಗ್ವೆ ಟೂರ್ನಿಯಿಂದ ಹೊರ ಬಿದ್ದಿದೆ.
ಗ್ರೂಪ್ ಐ ಪಂದ್ಯದಲ್ಲಿ ಸೆನೆಗಲ್ ತಂಡ ಇರಾಕ್ ವಿರುದ್ಧ 5-0 ಅಂತರದಲ್ಲಿ ಜಯ ಗಳಿಸಿ ನಾಕೌಟ್ ಆಸೆಯನ್ನು ಜೀವಂತವಾಗಿರಿಸಿದೆ.






