ಸುಳ್ಯ:ರಾಷ್ಟ್ರೀಯ ಸ್ವಯಂಸೇವಕ ಸಂಘದ ಶತಾಬ್ದಿ ವರ್ಷದ ಹಿನ್ನಲೆಯಲ್ಲಿ ಭಾನುವಾರ ಸುಳ್ಯದಲ್ಲಿ ಗಣವೇಶಧಾರಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು. ಪಥಸಂಚಲನದುದ್ದಕ್ಕೂ

ಮಹಿಳೆಯರು, ಮಾತೆಯರು ಗಣವೇಶಧಾರಿಗಳಿಗೆ ಪುಸ್ಪಾರ್ಚನೆ ಗೈದರು. ಸುಳ್ಯ ಜ್ಯೋತಿ ವೃತ್ತದಿಂದ ಆರಂಭಗೊಂಡ ವಿಜಯದಶಮಿ ಪಥಸಂಚಲನವು ಗಾಂಧಿನಗರ ತೆರಳಿ ಅಲ್ಲಿಂದ ಕೇರ್ಪಳ ದುರ್ಗಾಪರಮೇಶ್ವರಿ ಸಭಾಂಗಣ ಬಳಿಯಲ್ಲಿ ಸಮಾಪ್ತಿ ಗೊಂಡಿತು ಪಥ ಸಂಚಲನದಲ್ಲಿ ಪ್ರಮುಖರು ಎರಡು ಸಾವಿರಕ್ಕೂ ಮಿಕ್ಕಿ ಸ್ವಯಂಸೇವಕರು ಪಾಲ್ಗೊಂಡಿದ್ದರು.















