ನವ ಚಂಡೀಗಢ:ಇಂದಿನ ಐಪಿಎಲ್ ಪಂದ್ಯದಲ್ಲಿ ಅಬ್ಬರಿಸಿದ ಬ್ಯಾಟರ್ಗಳ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಬೃಹತ್ ಮೊತ್ತ ಬೆನ್ನಟ್ಟಿದ ರಾಜಸ್ಥಾನ ರಾಯಲ್ಸ್ ತಂಡ,ಪಂಜಾಬ್ ಕಿಂಗ್ಸ್ ವಿರುದ್ಧ 6 ವಿಕೆಟ್ಗಳ ರೋಚಕ ಜಯ ದಾಖಲಿಸಿದೆ.ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡವು 20 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ
222 ರನ್ಗಳ ಬೃಹತ್ ಮೊತ್ತ ಕಲೆ ಹಾಕಿತು. ಗುರಿ ಬೆನ್ನಟ್ಟಿದ ರಾಜಸ್ಥಾನ 19.2 ಓವರ್ಗಳಲ್ಲಿ 4 ವಿಕೆಟ್ ನಷ್ಟಕ್ಕೆ 228 ರನ್ ಗಳಿಸಿ ಭರ್ಜರಿ ಗೆಲುವಿನ ನಗೆ ಬೀರಿತು. ರಾಜಸ್ಥಾನಕ್ಕೆ ವೈಭವ್ ಸೂರ್ಯವಂಶಿ ಹಾಗೂ ಯಶಸ್ವಿ ಜೈಸ್ವಾಲ್ ಸೇರಿ ಸ್ಪೋಟಕ ಆರಂಭ ಒದಗಿಸಿದರು.ಕೊನೆಯಲ್ಲಿ ಡೊನೋವನ್ ಫೆರೇರ ಮತ್ತು ಶುಭಂ ದುಬೆ ಅಕ್ಷರಷಃ ಅಬ್ಬರಿಸಿ ತಂಡಕ್ಕೆ ರೋಚಕ ಜಯ ತಂದಿತ್ತರು.
ಸೂರ್ಯವಂಶಿ ಮತ್ತು ಜೈಸ್ವಾಲ್ ಮೊದಲ ವಿಕೆಟ್ಗೆ 3.1 ಓವರ್ಗಳಲ್ಲಿ 51 ರನ್ ಸೇರಿಸಿದರು. ಈ ಹಂತದಲ್ಲಿ 16 ಎಸೆತಗಳಲ್ಲಿ 5 ಸಿಕ್ಸರ್ ಮತ್ತು 3 ಬೌಂಡರಿ ಸಹೀತ 43 ರನ್ ಗಳಿಸಿದ ಸೂರ್ಯವಂಶಿ ಓಟಾದರು. ಉಳಿದಂತೆ ಯಶಸ್ವಿ ಜೈಸ್ವಾಲ್ (51), ಧ್ರುವ್ ಜುರೆಲ್(16), ನಾಯಕ ರಿಯಾನ್ ಪರಾಗ್(29) ರನ್ ಗಳಿಸಿಸರು. ಕೊನೆಯಲ್ಲಿ ಡೊನೋವನ್ ಫೆರೇರ 26 ಎಸೆತಗಳಲ್ಲಿ 6 ಬೌಂಡರಿ, ಹಾಗೂ 3 ಸಿಕ್ಸರ್ ನೆರವಿನಿಂದ ಅಜೇಯ 52 ರನ್ ಹಾಗೂ ಶುಭಂ ದುಬೆ 12 ಎಸೆತಗಳಲ್ಲಿ 3 ಬೌಂಡರಿ ಹಾಗೂ 2 ಸಿಕ್ಸರ್ ನೆರವಿನಿಂದ ರನ್ ಅಜೇಯ 31 ರನ್ ಗಳಿಸಿದರು. ಇವರಿಬ್ಬರು 5ನೇ ವಿಕೆಟ್ಗೆ 34 ಎಸೆತಗಳಲ್ಲಿ 77 ರನ್ ಸೇರಿಸಿ ಗೆಲುವಿನ ದಡ ಸೇರಿಸಿದರು.ಪಂಜಾಬ್ ಪರ ಯೂಸ್ವೇಂದ್ರ ಚಹಲ್ 3 ವಿಕೆಟ್ ಪಡೆದರು.
ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಪಂಜಾಬ್ ತಂಡದ ಬ್ಯಾಟರ್ಗಳು ಎಂದಿನಂತೆ ಅಬ್ಬರಿಸಿದರು. ಆರಂಭಿಕರಾದ ಪ್ರಬ್ಸಿಮ್ರನ್ ಸಿಂಗ್(59)ಮತ್ತು ಪ್ರಿಯಾಂಶ್ ಆರ್ಯ(29) ಭದ್ರ ಬುನಾದಿ ಹಾಕಿ ಕೊಟ್ಟರು.ಬಳಿಕ, ನಾಯಕ ಶ್ರೇಯರ್ ಅಯ್ಯರ 30 ಮತ್ತು ಮಾರ್ಕ್ ಸ್ಟೋಯಿನಸ್ 22 ಎಸೆತಗಳಲ್ಲಿ 6 ಸಿಕ್ಸರ್ ಮತ್ತು 4 ಬೌಂಡರಿ ಸಹಿತ 62 ರನ್ ಸಿಡಿಸಿ ತಂಡ ಬೃಹತ್ ಮೊತ್ತಕ್ಕೆ ಕಾಣಿಕೆ ನೀಡಿದರು.
ರಾಜಸ್ಥಾನ ಪರ ಯಶ್ ರಾಜ್ ಪುಂಜ 41 ರನ್ಗೆ 2 ವಿಕೆಟ್ ಪಡೆದರು.
ಟೂರ್ನಿಯಲ್ಲಿ ಈವರೆಗೆ 8 ಪಂದ್ಯಗಳನ್ನಾಡಿರುವ ಪಂಜಾಬ್ ತಂಡಕ್ಕೆ ಮೊದಲ ಸೋಲಾಯಿತು.6 ರಲ್ಲಿ ಗೆದ್ದಿದೆ. ಒಂದು ಪಂದ್ಯ ಮಳೆಯಿಂದ ರದ್ದಾಗಿತ್ತು. ಈ ಪಂದ್ಯ ಸೋತರು 13 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಪಂಜಾಬ್ ಅಗ್ರಸ್ಥಾನದಲ್ಲಿದೆ. ರಾಜಸ್ಥಾನ ತಂಡ 9 ಪಂದ್ಯಗಳಲ್ಲಿ 6 ರಲ್ಲಿ ಗೆದ್ದು 12ಅಂಕ ಗಳಿಸಿ, 3ನೇ ಸ್ಥಾನದಲ್ಲಿದೆ.













