ಬಳ್ಪ: ಬಳ್ಪ ಬುಡೆಂಗಿ ಶ್ರೀ ವಿಷ್ಣುಮೂರ್ತಿ ದೈವಸ್ಥಾನದಲ್ಲಿ ಶ್ರೀ ವಿಷ್ಣುಮೂರ್ತಿ ದೈವದ ಒತ್ತೆಕೋಲ ಸಂಪನ್ನಗೊಂಡಿತು. ಭೋಗಾಯನಕೆರೆ ವಿಷ್ಣುನಗರದಲ್ಲಿ ನಡೆದ ಒತ್ತೆಕೋಲದಲ್ಲಿ ಎ. 27 ಸಂಜೆ ಶ್ರೀ ವಿಷ್ಣುಮೂರ್ತಿ ಭಂಡಾರ ತೆಗೆದು, ಮೇಲೇರಿಗೆ ಅಗ್ನಿ ಸ್ಪರ್ಶ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಿತು. ರಾತ್ರಿ
ಶ್ರೀ ದೈವದ ಕುಳ್ಚಾಟ ನಡೆಯಿತು. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ದುರ್ಗಾಂಬಾ ಮೆಲೋಡೀಸ್ ಸುಬ್ರಹ್ಮಣ್ಯ ಇವರಿಂದ ಸಂಗೀತ ರಸಮಂಜರಿ, ಜಿಲ್ಲೆಯ ಪ್ರಸಿದ್ಧ ಕಲಾವಿದರ ಕೂಡುವಿಕೆಯಿಂದ ಯಕ್ಷಗಾನ ಬಯಲಾಟ ಭೃಗು ಲಾಂಛನ ಶ್ರೀನಿವಾಸ ಕಲ್ಯಾಣ ನಡೆಯಿತು.
ಎ.28ರಂದು ಪ್ರಾತಃಕಾಲ ಶ್ರೀ ವಿಷ್ಣುಮೂರ್ತಿ ದೈವದ ಅಗ್ನಿ ಪ್ರವೇಶ, ಬಳಿಕ ಮಾರಿಕಳ, ಪ್ರಸಾದ ವಿತರಣೆ, ಮುಳ್ಳುಗುಳಿಗ ದೈವದ ನೇಮ, ಪ್ರಸಾದ ವಿತರಣೆ ನಡೆಯಿತು. ಆಡಳಿತ ಮಂಡಳಿ ಅಧ್ಯಕ್ಷ ಡಾ. ದೇವಿಪ್ರಸಾದ್ ಕಾನತ್ತೂರ್, ಉಪಾಧ್ಯಕ್ಷ ಉಮೇಶ್ ಬುಡೆಂಗಿ, ಕೋಶಾಧಿಕಾರಿ ಸಂತೋಷ್ ಕುಮಾರ್ ರೈ, ಮೊಕ್ತೇಸರರಾದ ಸುಂದರ ಬೆಳ್ಚಪ್ಪಾಡ ಬುಡೆಂಗಿ, ಮೋನಪ್ಪ ಬೆಳ್ಚಪ್ಪಾಡ ಬುಡೆಂಗಿ ಸೇರಿದಂತೆ ಆಡಳಿತ ಮಂಡಳಿ ಪದಾಧಿಕಾರಿಗಳು, ಸದಸ್ಯರು, ಭಕ್ತಾದಿಗಳು ಉಪಸ್ಥಿತರಿದ್ದರು.













