ಬಿ.ಸಿ.ರೋಡ್: ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವು ಗೊಳಿಸುವಂತೆ ಆಗ್ರಹಿಸಿ ಬಿ. ಸಿ. ರೋಡ್ ನಾರಾಯಣ ಗುರು ವೃತ್ತ ದಿಂದ ಟೋಲ್ ಗೇಟ್ ವರೆಗೆ ಜನಾಂದೋಲನ ನಡಿಗೆ ಮಾಜಿ ಸಚಿವರಾದ ಬಿ. ರಮಾನಾಥ ರೈ ಅವರ ನೇತೃತ್ವದಲ್ಲಿ ನಡೆಯಿತು.ಸಮಾನ ಮನಸ್ಕ ಸಂಘಟನೆಗಳ ವತಿಯಿಂದ ಜರಗಿದ ಜನಾಂದೋಲನ ನಡಿಗೆಯಲ್ಲಿ ಸುಳ್ಯದ ನಾಯಕರುಗಳು ಹಾಗೂ
ಕಾರ್ಯಕರ್ತರು ಭಾಗವಹಿಸಿದರು.ಮಾಜಿ ಸಚಿವ ರಮಾನಥ ರೈ, ಅಭಯ ಚಂದ್ರ ಜೈನ್, ಮುನೀರ್ ಕಾಟಿಪ್ಪಳ್ಳ ಮೊದಲಾದವರು ನೇತೃತ್ವ ವಹಿಸಿದ್ದರು.ಜಿಲ್ಲಾ ಗ್ಯಾರಂಟಿ ಸಮಿತಿ ಅಧ್ಯಕ್ಷ ಭರತ್ ಮುಂಡೋಡಿ, ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಾಧಾಕೃಷ್ಣ ಬೊಳ್ಳೂರು, ಮಾಜಿ ಅಧ್ಯಕ್ಷ ಪಿ. ಸಿ. ಜಯರಾಮ್,ಸುಳ್ಯ ನಗರ ಪಂಚಾಯತ್ ಮಾಜಿ ಅಧ್ಯಕ್ಷ ಎಂ. ವೆಂಕಪ್ಪ ಗೌಡ, ಸೂಡ ಅಧ್ಯಕ್ಷ ಕೆ. ಎಂ. ಮುಸ್ತಫ,ವಪಿ. ಎಸ್. ಗಂಗಾಧರ, ಗ್ಯಾರಂಟಿ ಸಮಿತಿ ತಾಲೂಕು ಅಧ್ಯಕ್ಷ ಶಾಹುಲ್ ಹಮೀದ್ ಹಮೀದ್ ಕುತ್ತಮೊಟ್ಟೆ, ದಿನೇಶ್ ಅಂಬೆಕಲ್ಲು,ಶಾಫಿ ಕುತ್ತಮೊಟ್ಟೆ, ರಾಜು ಪಂಡಿತ್, ಚೇತನ್ ಕಜೆಗದ್ದೆ, ಶಶಿಧರ ಎಂ.ಜೆ., ಭವಾನಿ ಶಂಕರ್ ಕಲ್ಮಡ್ಕ,ರಾಧಾಕೃಷ್ಣ ಪರಿವಾರಕಾನ,ಮಹೇಶ್ ಬೆಳ್ಳಾರ್ಕರ್, ಕೇಶವ ಮೊರಂಗಲ್ಲು,ಆನಂದ ನಾಗಪಟ್ಟಣ, ರಕ್ಷಿತ್ ನಾಗಪಟ್ಟಣ, ಆಶಿಕ್ ಆರಂತೋಡು,ಗಣೇಶ್, ನಾಗಪಟ್ಟಣ,ಪ್ರವೀಣ್ ಮುಂಡೋಡಿ, ಮಂಜುನಾಥ್ ಮಡ್ತಿಲ,ಜಯಪ್ರಕಾಶ್ ನೆಕ್ರಪ್ಪಾಡಿ,ಧರ್ಮಪಾಲ ಕೊಯಿoಗಾಜೆ, ವಿಜಯ ಕುಮಾರ್ ಮೊದಲಾದವರು ಸುಳ್ಯದಿಂದ ಭಾಗವಹಿದ್ದರು.













