ಸುಳ್ಯ: ಸುಳ್ಯ ರೋಟರಿ ಕ್ಲಬ್ನ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜು.2ರಂದು ಬುಧವಾರ ರಥಬೀದಿಯ ರೋಟರಿ ಸಮುದಾಯ ಭವನದಲ್ಲಿ ನಡೆಯಲಿದೆ ಎಂದು ರೋಟರಿ ಕ್ಲಬ್ನ ನೂತನ ಅಧ್ಯಕ್ಷ ಡಾ.ರಾಮ್ಮೋಹನ್ ಕೆ.ಎನ್. ತಿಳಿಸಿದ್ದಾರೆ. ಸುಳ್ಯ ಪ್ರೆಸ್ ಕ್ಲಬ್ನಲ್ಲಿ ಕರೆದ ಸುದ್ದಿಗೋಷ್ಢಿಯಲ್ಲಿ ಅವರು ಈ ವಿಷಯ ತಿಳಿಸಿದರು. ನೂತನ ಅಧ್ಯಕ್ಷ ಡಾ.ರಾಮ್ಮೋಹನ್, ಕಾರ್ಯದರ್ಶಿ ಭಾಸ್ಕರನ್ ನಾಯರ್. ಎಂ.ಆರ್, ಖಜಾಂಜಿ ಬಿ.ಟಿ.ಮಾಧವ ಅವರ ನೇತೃತ್ವದ
ತಂಡ ಅಧಿಕಾರ ವಹಿಸಿಕೊಳ್ಳಲಿದ್ದಾರೆ.ಪುತ್ತೂರು ರೋಟರಿ ಕ್ಲಬ್ನ ಅಧ್ಯಕ್ಷ ಡಾ.ಶ್ರೀಪ್ರಕಾಶ್ ಬಿ. ಪದಗ್ರಹಣ ನೆರವೇರಿಸುವರು. ಮಾಜಿ ಜಿಲ್ಲಾ ಗವರ್ನರ್ ಕೇಶವ ಹೆಚ್.ಆರ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದಾರೆ. ಅತಿಥಿಗಳಾಗಿ ವಲಯ 5ರ ಅಸಿಸ್ಟೆಂಟ್ ಗವರ್ನರ್ ಪ್ರಮೋದ್ ಕುಮಾರ್, ವಲಯ 5ರ ಝೋನಲ್ ಲೆಪ್ಟಿನೆಂಟ್ ಡಾ.ಪುರುಷೋತ್ತಮ ಕೆ.ಜಿ ಭಾಗವಹಿಸಲಿದ್ದಾರೆ ಎಂದು ಅವರು ವಿವರಿಸಿದರು.

ವಿವಿಧ ಯೋಜನೆಗಳು: ರೋಟರಿ ಕ್ಲಬ್ ಸುಳ್ಯ ವತಿಯಿಂದ ಈ ವರ್ಷ ಹಲವು ಯೋಜನೆಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಡಾ.ರಾಮ್ಮೋಹನ್ ವಿವರಿಸಿದರು. ಸದಸ್ಯತ್ವ ಅಭಿವೃದ್ಧಿ ಕುರಿತು ರೋಟರಿ ಜಿಲ್ಲಾ ವಿಚಾರ ಸಂಕಿರಣ, ಮಿತ್ತಡ್ಕ ರೋಟರಿ ಶಾಲೆಯಲ್ಲಿ ಬಯಲು ರಂಗಮಂದಿರ ನಿರ್ಮಾಣ, ಸುಳ್ಯದ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ ಸ್ತನ್ಯಪಾನ ಕೊಠಡಿ ನಿರ್ಮಾಣ, ಅಂಗನವಾಡಿ, ಶಾಲೆಗಳಿಗೆ ಸಹಾಯ,ಸಾರ್ವಜನಿಕ ಸ್ಥಳಗಳಲ್ಲಿ ಶುದ್ಧ ಕುಡಿಯುವ ನೀರಿನ ಸೌಲಭ್ಯ ಒದಗಿಸುವ ಯೋಜನೆ,ವೃದ್ಧಾಶ್ರಮಗಳಿಗೆ ನೆರವು,ಅಂಗವಿಕಲರಿಗೆ ವೈದ್ಯಕೀಯ ಸಹಾಯ,ಆರ್ಥಿಕವಾಗಿ ಬಡ ವಿದ್ಯಾರ್ಥಿಗಳಿಗೆ ಶಿಕ್ಷಣಕ್ಕೆ ನೆರವು, ಸಾರ್ವಜನಿಕರಿಗೆ, ಆರೋಗ್ಯ, ಸಾಮಾಜಿಕ ನೆರವು,
ಸ್ವಚ್ಛತಾ ಅಭಿಯಾನ,ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರಿಗೆ ರಸ್ತೆ ಸುರಕ್ಷತಾ ಕ್ರಮಗಳ ಬಗ್ಗೆ ಮಾಹಿತಿ ನೀಡುವ ಕೈಪಿಡಿ ಹೊರ ತರುವುದು,ಆರೋಗ್ಯ ಜಾಗೃತಿ ಕಾರ್ಯಕ್ರಮಗಳು,
ವನಮಹೋತ್ಸವ, ಪರಿಸರ ಸಂರಕ್ಷಣಾ ಅಭಿಯಾನ, ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಅವರು ವಿವರಿಸಿದರು.
ಸುದ್ದಿಗೋಷ್ಠಿಯಲ್ಲಿ ರೋಟರಿ ಕ್ಲಬ್ ಅಧ್ಯಕ್ಷೆ ಯೋಗಿತಾ ಗೋಪಿನಾಥ್,
ನೂತನ ಕಾರ್ಯದರ್ಶಿ ಭಾಸ್ಕರನ್ ನಾಯರ್ ಎಂ.ಆರ್, ಖಜಾಂಜಿ ಬಿ.ಟಿ.ಮಾಧವ, 2026-27ನೇ ಸಾಲಿನ ನಿಯೋಜಿತ ಅಧ್ಯಕ್ಷೆ ಲತಾ ಮಧುಸೂಧನ್, ರೋಟರಿ ಕ್ಲಬ್ ಸ್ಥಾಪಕ ಅಧ್ಯಕ್ಷ ರಾಮಚಂದ್ರ.ಪಿ, ರೋಟರಿ ಶಾಲಾ ಸಂಚಾಲಕ ಪ್ರಭಾಕರನ್ ನಾಯರ್ ಸ್ವಾಗತ್, ಝೋನಲ್ ಲೆಪ್ಟಿನೆಂಟ್ ಡಾ.ಪುರುಷೋತ್ತಮ ಕೆ.ಜಿ, ಮಧುಸೂಧನ ಕುಂಭಕ್ಕೋಡ್, ಆನಂದ ಖಂಡಿಗೆ, ಸಿ.ಎಚ್.ಪ್ರಭಾಕರನ್ ನಾಯರ್, ಶಾಫಿ ಕುತ್ತಮೊಟ್ಟೆ, ಡಾ.ಹರ್ಷಿತಾ ಪುರುಷೋತ್ತಮ ಉಪಸ್ಥಿತರಿದ್ದರು.