ಕೋಲ್ಕತ್ತ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಎರಡನೇ ಹಾಗೂ ಕೊನೆ ಹಂತದ ಮತದಾನ ಆರಂಭವಾಗಿದೆ. 142 ಕ್ಷೇತ್ರಗಳಲ್ಲಿ ಇಂದು (ಏ.29) ಮತದಾನ ನಡೆಯುತಿದೆ. ಕೋಲ್ಕತ್ತ, ಉತ್ತಮ ಮತ್ತು ದಕ್ಷಿಣ 24 ಪರಗಣ, ಹೂಗ್ಲಿ, ಹೌರಾ, ಪುರ್ಬಾ ಬರ್ಧಮಾನ್ ಜಿಲ್ಲೆಯಲ್ಲಿ ಬೆಳಿಗ್ಗೆ 7 ಗಂಟೆಯಿಂದಲೇ ಮತದಾನ ಆರಂಭವಾಗಿದೆ.ಒಟ್ಟು
3.21 ಕೋಟಿ ಮತದಾರರಿದ್ದಾರೆ. ಅದರಲ್ಲಿ 1.57 ಕೋಟಿ ಮಹಿಳೆಯರು, 792 ಲಿಂಗತ್ವ ಅಲ್ಪಸಂಖ್ಯಾತ ಮತದಾರರಿದ್ದಾರೆ. 41,001 ಮತಗಟ್ಟೆಗಳಲ್ಲಿ ಮತಚಲಾವಣೆಯಾಗಲಿದೆ.
ಏ.23ರಂದು ಮೊದಲ ಹಂತದ ಮತದಾನ ಆಗಿತ್ತು. ಅದರಲ್ಲಿ ಶೇ 93.19ರಷ್ಟು ಮತದಾನವಾಗಿತ್ತು. ಮೇ 4ರಂದು ಮತ ಎಣಿಕೆ ನಡೆಯಲಿದೆ. 142 ಕ್ಷೇತ್ರಗಳಿಗೆ ನಡೆಯುವ ಚುನಾವಣೆಯಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಹಲವು ಸಚಿವರು ಸೇರಿದಂತೆ ಕಣದಲ್ಲಿರುವ ಅಭ್ಯರ್ಥಿಗಳ ಭವಿಷ್ಯವನ್ನು ಮತದಾರರು ನಿರ್ಧರಿಸಲಿದ್ದಾರೆ.













