ಸುಳ್ಯ: ತುರ್ತು ಪರಿಸ್ಥಿತಿ ಘೋಷಣೆಯ 50ನೇ ವರ್ಷದ ಹಿನ್ನಲೆಯಲ್ಲಿ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಹೋರಾಟ ನಡೆಸಿದ ಹಿರಿಯರಾದ ಪಿ.ಕೆ.ಉಮೇಶ್ ಹಾಗು ರಾಮಚಂದ್ರ ಬೊಳ್ಳಾಜೆ ಜಯನಗರ ಅವರನ್ನು ಬಿಜೆಪಿ ಸುಳ್ಯ ನಗರ ಮಹಾ ಶಕ್ತಿ ಕೇಂದ್ರದ ವತಿಯಿಂದ

ಸನ್ಮಾನಿಸಲಾಯಿತು. ಪಿ.ಕೆ.ಉಮೇಶ್ ಅವರನ್ನು ಗಣೇಶ್ ಪ್ರಿಂಟರ್ಸ್ನಲ್ಲಿ ಹಾಗೂ ರಾಮಚಂದ್ರ ಬೊಳ್ಳಾಜೆ ಅವರನ್ನು ಜಯನಗರದ ಮನೆಯಲ್ಲಿ ಸನ್ಮಾನಿಸಲಾಯಿತು. ಬಿಜೆಪಿ ಸುಳ್ಯ ನಗರ ಮಹಾ ಶಕ್ತಿ ಕೇಂದ್ರದ ಅಧ್ಯಕ್ಷ ಕುಸುಮಾಧರ ಎ.ಟಿ, ಪ್ರಧಾನ ಕಾರ್ಯದರ್ಶಿ ನಾರಾಯಣ ಎಸ್.ಎಂ, ಪ್ರಮುಖರಾದ ತಿಮ್ಮಪ್ಪ ಗೌಡ ನಾವೂರು, ದಯಾನಂದ ಕೇರ್ಪಳ, ಸುನಿಲ್ ಕೇರ್ಪಳ, ಜಿನ್ನಪ್ಪ ಪೂಜಾರಿ, ಶಿವನಾಥ ರಾವ್, ಕುಸುಮಾಧರ ಕೆ.ಜೆ, ಪ್ರಶಾಂತ್ ಕಾಯರ್ತೋಡಿ, ನವೀನ್ ಕುದ್ಪಾಜೆ, ನವೀನ ಜೆ, ಚಂದ್ರಶೇಖರ ಕೇರ್ಪಳ, ಸುಧಾಕರ ಕುರುಂಜಿಭಾಗ್, ರಂಜಿತ್ಕುಮಾರ್ ಜಯನಗರ ಉಪಸ್ಥಿತರಿದ್ದರು.