ಬೆಂಗಳೂರು: ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಹಾಗೂ ದಣೆವದತ್ ಪಡಕಲ್ ಸಿಡಿಸಿದ ಆಕರ್ಷಕ ಅರ್ಧ ಶತಕದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಗುಜರಾತ್ ಟೈಟನ್ಸ್ ವಿರುದ್ಧ 5 ವಿಕೆಟ್ಗಳ ಜಯ ದಾಖಲಿಸಿದೆ. ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟನ್ಸ್ ಎಡಗೈ ಆರಂಭಿಕ ಬ್ಯಾಟರ್
ಸಾಯಿ ಸುದರ್ಶನ್ ಬಾರಿಸಿದ ಅಮೋಘ ಶತಕದ (100) ನೆರವಿನಿಂದ ನಿಗದಿತ 20 ಓವರ್ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ 205 ರನ್ ಪೇರಿಸಿತು. ಗುರಿ ಬೆನ್ನಟ್ಟಿದ ಆರ್ಸಿಬಿ 18.5 ಓವರ್ಗಳಲ್ಲಿ 5 ವಿಕೆಟ್ ನಷ್ಟಕ್ಕೆ 206 ರನ್ ಗಳಿಸಿ ಗೆಲುವಿನ ನಗೆ ಬೀರಿತು.
ಆರ್ಸಿಬಿ ಪರ ಕೊಹ್ಲಿ ಮತ್ತು ಪಡಿಕಲ್ ಉತ್ತಮ ಭಾಗೀದಾರಿಕೆಯ ಮೂಲಕ ಭದ್ರ ಅಡಿಪಾಯ ಹಾಕಿದರು. ಇವರಿಬ್ಬರು ಸೇರಿ ಎರಡನೇ ವಿಕೆಟ್ಗೆ 115 ರನ್ ಬಾರಿಸಿದರು.ಕೊಹ್ಲಿ ಕೇವಲ 44 ಎಸೆತಗಳಲ್ಲಿ 8 ಬೌಂಡರಿ ಹಾಗೂ 4 ಸಿಕ್ಸರ್ ನೆರವಿನಿಂದ 81 ರನ್ ಗಳಿಸಿದರೆ, ಪಡಿಕಲ್ 27 ಎಸೆತಗಳಲ್ಲಿ 2 ಬೌಂಡರಿ ಹಾಗೂ 6 ಸಿಕ್ಸರ್ ನೆರವಿನಿಂದ 55 ರನ್ ಗಳಿಸಿದರು. ಬಳಿಕ ನಾಯಕ ರಜತ್ ಪಾಟಿದಾರ್(8), ಜಿತೇಶ್ ಶರ್ಮ(10) ಬೇಗನೆ ಮರಳಿದರೂ, ಕೊನೆಯಲ್ಲಿ ಕ್ರುನಾಲ್ ಪಾಂಡ್ಯ 12 ಎಸೆತಗಳಲ್ಲಿ 3 ಬೌಂಡರಿ, 1ಸಿಕ್ಸರ್ ನೆರವಿನಿಂದ ಅಜೇಯ 23 ರನ್ ಮತ್ತು ಟಿಮ್ ಡೇವಿಡ್ 9 ಎಸೆತಗಳಲ್ಲಿ ಒಂದು ಸಿಕ್ಸರ್ ನೆರವಿನಿಂದ ಅಜೇಯ 10 ರನ್ ಗಳಿಸಿ ತಂಡವನ್ನು ಗೆಲುವಿನ ದಡ ಸೇರಿಸಿದರು.
ಟಾಸ್ ಸೋತು ಮೊದಲು ಬ್ಯಾಟಿಂಗ್ ನಡೆಸಿದ ಗುಜರಾತ್ ತಂಡಕ್ಕೆ ಸಾಯಿ ಸುದರ್ಶನ್ ಹಾಗೂ ಶುಭಮನ್ ಗಿಲ್ ಉತ್ತಮ ಆರಂಭವೊದಗಿಸಿದರು.
ನಾಯಕ ಗಿಲ್ 32 ರನ್ ಗಳಿಸಿ ಔಟ್ ಆದರು. ಮತ್ತೊಂದೆಡೆ ದಿಟ್ಟ ಬ್ಯಾಟಿಂಗ್ ಪ್ರದರ್ಶಿಸಿದ ಸಾಯಿ, ಬೆಂಗಳೂರು ಬೌಲರ್ಗಳನ್ನು ಬೆವರಿಳಿಸಿದರು.ಮೂರನೇ ಕ್ರಮಾಂಕದಲ್ಲಿ ಕ್ರೀಸಿಗಿಳಿದ ಜೋಸ್ ಬಟ್ಲರ್ 25 ರನ್ ಗಳಸಿದರು.ಇನ್ನೊಂದೆಡೆ ಅಮೋಘ ಆಟ ಪ್ರದರ್ಶಿಸಿದ ಸಾಯಿ 57 ಎಸೆತಗಳಲ್ಲಿ ಶತಕ ಗಳಿಸಿದರು. ಆ ಮೂಲಕ ಐಪಿಎಲ್ನಲ್ಲಿ ಮೂರನೇ ಶತಕದ ಸಾಧನೆ ಮಾಡಿದರು.58 ಎಸೆತಗಳನ್ನು ಎದುರಿಸಿದ ಸಾಯಿ 11 ಬೌಂಡರಿ ಹಾಗೂ ಐದು ಸಿಕ್ಸರ್ ನೆರವಿನಿಂದ 100 ರನ್ ಗಳಿಸಿದರು.ಕೊನೆಯ ಹಂತದಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದ ಜೇಸನ್ ಹೋಲ್ಡರ್ (ಅಜೇಯ 23) ಹಾಗೂ ವಾಷಿಂಗ್ಟನ್ ಸುಂದರ್ (ಅಜೇಯ 19) ತಂಡದ ಮೊತ್ತ 200ರ ದಾಟಲು ನೆರವಾದರು.












