ಕನಕಮಜಲು: ಭಾರತ ಕೃಷಿ ಅಭಿವೃದ್ಧಿ ಸಂಸ್ಥೆ ವಿಟ್ಲ ವತಿಯಿಂದ ಕನಕಮಜಲು ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಹಕಾರದೊಂದಿಗೆ 50 ಫಲಾನುಭವಿಗಳಿಗೆ ಏಣಿಗಳನ್ನು ವಿತರಿಸಲಾಯಿತು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸುಧಾಕರ ಕಾಮತ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ
ಪ್ರಾ. ಕೃ. ಪ. ಸ. ಸಂಘದ ಉಪಾಧ್ಯಕ್ಷ ವೆಂಕಪ್ಪ ನಾಯ್ಕ ದೇರ್ಕಜೆ, ಮೋಹಿನಿ ವಿಶ್ವನಾಥ್ (ನಿಶಾ) ಸಂಪಾಜೆ ಉಪಸ್ಥಿತರಿದ್ದರು. ಕೃಷಿಗೆ ಸಂಬಂಧಿಸಿದ ವಿವಿಧ ಸೌಲಭ್ಯ, ಮಾಹಿತಿ ನೀಡಲಾಯಿತು. ಖಾಲಿ ಜಾಗ ಇರುವ ಕೃಷಿಕರು ಹಿಪ್ಪುನೇರಳೆ ಗಿಡಗಳನ್ನು ಬೆಳೆಸಿ ಹಾಗೂ ಕಡಿಮೆ ಜಾಗ ಇರುವವರು ರೇಷ್ಮೆ ಹುಳಗಳನ್ನು ಸಾಕಿ ಆದಾಯ ಗಳಿಸಲು ಅವಕಾಶವಿದೆ ಎಂದು ಮಾಹಿತಿ ನೀಡಿದರು.

ಸಹಕಾರಿ ಸಂಘದ ಮಾಜಿ ಅಧ್ಯಕ್ಷ ನಾರಾಯಣ ಬೊಮ್ಮೆಟ್ಟಿ, ಗಂಗಾಧರ ಕಾಳಮನೆ, ಸಂಜೀವಿನಿ ಒಕ್ಕೂಟದ ಎಂ. ಬಿ.ಕೆ ಭವಾನಿ ಬೆಳ್ಳಿಪ್ಪಾಡಿ, ಎಲ್ ಸಿ ಆರ್ ಪಿ ಸುಶೀಲಾ ಕಾರಿಂಜ, ಪಶು ಸಖಿ ಪೂರ್ಣಿಮ, ಕೃಷಿ ಸಖಿ ಪ್ರೇಮಾ ಮುತ್ತಪ್ಪ ಗೌಡ, ಜಾಲ್ಸೂರು ಕೃಷಿ ಸಖಿ ವಿಜಯಾ, ಲೋಚನ ಆಲೆಟ್ಟಿ, ಮಹಿಳಾ ಮಂಡಲದ ಅಧ್ಯಕ್ಷ ವಾರಿಜ ದಾಮೋದರ ಕೋಡ್ತಿಲು, ಸಂಸ್ಥೆಯ ಪದಾಧಿಕಾರಿಗಳು, ಗ್ರಾಮಸ್ಥರು ಭಾಗವಹಿಸಿದರು. ಫಲಾನುಭವಿಗಳ ಹೆಸರನ್ನು ಪ್ರೇಮಾ ಮುತ್ತಪ್ಪ ಗೌಡ ವಾಚಿಸಿದರು.ಭವಾನಿ ಬೆಳ್ಳಿಪ್ಪಾಡಿ
ಸ್ವಾಗತಿಸಿ, ವಂದಿಸಿದರು












