ಸುಳ್ಯ: ಸುಳ್ಯದಲ್ಲಿ ಕಳೆದ 24 ಗಂಟೆಯಲ್ಲಿ ಮಳೆ ಅಬ್ಬರಿಸಿ ಧಾರಾಕಾರವಾಗಿ ಸುರಿದಿದೆ.ಶನಿವಾರ ಬೆಳಿಗ್ಗೆ ಎಂಟು ಭಾನುವಾರ ಬೆಳಿಗ್ಗೆ 8 ಗಂಟೆಯ ತನಕ 234 ಮಿ.ಮಿ.(23 ಸೆ.ಮಿ.) ಮಳೆಯಾಗಿದೆ. ಶನಿವಾರ ಬೆಳಿಗ್ಗೆ
8 ರಿಂದ ರಾತ್ರಿ10 ಗಂಟೆ ತನಕ 202 ಮಿ.ಮಿ. (20 ಸೆಂ.ಮಿ.)ಮಳೆಯಾಗಿತ್ತು. ರಾತ್ರಿ ಮಳೆಯ ಅಬ್ಬರ ಕಡಿಮೆ ಇದ್ದರೂ 32 ಮಿ.ಮಿ.ಮಳೆಯಾಗಿದೆ ಎಂದು ಸುಳ್ಯ ನಗರದಲ್ಲಿ ಮಳೆ ಮಾಪಕ ಇರಿಸಿ ಪ್ರತಿ ದಿನ ಮಳೆ ದಾಖಲೆ ಮಾಡುವ ಶ್ರೀಧರ ರಾವ್ ಹೈದಂಗೂರು ತಿಳಿಸಿದ್ದಾರೆ.ಸುಳ್ಯದಲ್ಲಿ ಶನಿವಾರ ಹಗಲು ಧಾರಾಕಾರ ಮಳೆ ಸುರಿದಿದೆ.












