ಬೆಂಗಳೂರು:ಕರ್ನಾಟಕದ ನಾಲ್ಕು ವಿಧಾನ ಪರಿಷತ್ ಕ್ಷೇತ್ರಗಳ ಮತ ಎಣಿಕೆ ಮುಕ್ತಾಯವಾಗಿದೆ. ಎನ್ಡಿಎ ಮೈತ್ರಿಕೂಟ ಎಲ್ಲಾ 4 ಕ್ಷೇತ್ರಗಳನ್ನು ತನ್ನದಾಗಿಸಿಕೊಂಡಿದೆ. ಈ ಪೈಕಿ ಬಿಜೆಪಿ 3, ಜೆಡಿಎಸ್ 1 ಸ್ಥಾನ ಪಡೆದುಕೊಂಡಿದೆ. ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ
ಜೆಡಿಎಸ್ ಅಭ್ಯರ್ಥಿ ಎಪಿ ರಂಗನಾಥ್ , ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಶಶೀಲ್ ಜಿ ನಮೋಶಿ, ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಎಸ್ವಿ ಸಂಕನೂರ, ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಕೆಎಂ ಸುರೇಶ್ ವಿಜೇತರಾಗಿದ್ದಾರೆ.
ಅಕ್ಟೋಬರ್ 23 ರಂದು ನಡೆದಿದ್ದ ಮತದಾನದ ಬಳಿಕ, ಬ್ಯಾಲೆಟ್ ಪೇಪರ್ನಲ್ಲಿ ಮತದಾನದ ಮತ ಎಣಿಕೆ ಅಕ್ಟೋಬರ್ 27 ನಡೆಯಿತು. ಕೆಲ ಕ್ಷೇತ್ರಗಳಲ್ಲಿ ಮಧ್ಯರಾತ್ರಿವರೆಗೂ, ಕೆಲವೆಡೆ ಬೆಳಗ್ಗಿನ ಜಾವ ತನಕ ನಡೆಯಿತು. ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್, ಈಶಾನ್ಯ ಶಿಕ್ಷಕರ ಕ್ಷೇತ್ರ, ಪಶ್ಚಿಮ ಮತ್ತು ಆಗ್ನೇಯ ಪದವೀಧರ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ದಾಖಲಿಸಿದೆ.
ಬೆಂಗಳೂರು ಶಿಕ್ಷಕರ ಕ್ಷೇತ್ರದಲ್ಲಿ ಜೆಡಿಎಸ್ ಬಿಜೆಪಿ ಮೈತ್ರಿ ಎನ್ಡಿಎ ಅಭ್ಯರ್ಥಿ ಎಪಿ ರಂಗನಾಥ್ ಅವರು 10,810 ಮತಗಳನ್ನು ಪಡೆದು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಪುಟ್ಟಣ್ಣನವರು 9902 ಮತಪಡೆದಿದ್ದಾರೆ. 908 ಮತಗಳ ಅಂತರದಲ್ಲಿ ಎಪಿ ರಂಗನಾಥ್ ಚುನಾಯಿತರಾಗಿದ್ದಾರೆ.
ಈಶಾನ್ಯ ಶಿಕ್ಷಕರ ಕ್ಷೇತ್ರದಲ್ಲಿ ಎನ್ಡಿಎ ಮೈತ್ರಿಕೂಟದ ಪಕ್ಷದ ಅಭ್ಯರ್ಥಿ ಶಶೀಲ್ ನಮೋಶಿ ಅವರು 5ನೇ ಬಾರಿಗೆ ಪುನರಾಯ್ಕೆ ಆಗುವ ಮೂಲಕ ದಾಖಲೆ ಬರೆದಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಶರಣಪ್ಪ ಮಟ್ಟೂರ್ ಪರಾಭವಗೊಂಡಿದ್ದಾರೆ.
ಪಶ್ಚಿಮ ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯ ಎಸ್ ವಿ ಸಂಕನೂರ ಅವರು ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ನ ಮೋಹನ್ ಲಿಂಬಿಕಾಯಿ ಪರಾಭವಗೊಂಡಿದ್ದಾರೆ.ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯ ಕೆಎಂ ಸುರೇಶ್ ಅವರು ಗೆಲುವು ದಾಖಲಿಸಿದ್ದಾರೆ. ಕಾಂಗ್ರೆಸ್ ಶಶಿ ಹುಲಿಕುಂಟೆಮಂಠ ಪರಾಭವಗೊಂಡರು.











