ಸುಳ್ಯ:ಮುಖ್ಯ ಚುನಾವಣಾ ಆಯುಕ್ತರ ರಾಜಿನಾಮೆ ಆಗ್ರಹಿಸಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ನೇತೃತ್ವದಲ್ಲಿ ದೆಹಲಿಯ ರಾಮ್ಲೀಲಾ ಮೈದಾನದಲ್ಲಿ ನಡೆಯುತ್ತಿರುವ ಪ್ರತಿಭಟನಾ ರ್ಯಾಲಿಗೆ ಬೆಂಬಲ ಸೂಚಿಸಿ ಸುಳ್ಯದಲ್ಲಿ ಕಾಂಗ್ರೆಸ್ ನಾಯಕರು ಹಾಗೂ
ಕಾರ್ಯಕರ್ತರು ಗಾಂಧಿನಗರದ ಮಹಾತ್ಮ ಗಾಂಧೀಜಿ ಪ್ರತಿಮೆ ಮೌನ ಪ್ರತಿಭಟನೆ ನಡೆಸಿದರು.ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಭರತ್ ಮುಂಡೋಡಿ, ಕೆ.ಗೋಕುಲ್ದಾಸ್, ಕೆ.ಎಂ.ಮುಸ್ತಫ, ಪಿ.ಎಸ್.ಗಂಗಾಧರ, ಸುರೇಶ್.ಎಂ.ಎಚ್, ಭವಾನಿಶಂಕರ ಕಲ್ಮಡ್ಕ, ಚೇತನ್ ಕಜೆಗದ್ದೆ,ಶಾಫಿ ಕುತ್ತಮೊಟ್ಟೆ, ಪಿ.ಎ.ಮಹಮ್ಮದ್, ಆನಂದ ಬೆಳ್ಳಾರೆ, ಮಹೇಶ್ ಬೆಳ್ಳಾರ್ಕರ್, ದಿನೇಶ್ ಸರಸ್ವತಿಮಹಲ್, ಧೀರಾ ಕ್ರಾಸ್ತಾ, ಮುಸ್ತಫ,ಪಕ್ಷದ ಪದಾಧಿಕಾರಿಗಳು, ವಿವಿಧ ಘಟಕಗಳ ಪ್ರತಿನಿಧಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.









