ಮಂಗಳೂರು: ಕಳೆದ 24 ಗಂಟೆಯಲ್ಲಿ ರಾಜ್ಯದಾದ್ಯಂತ ವ್ಯಾಪಕ ಮಳೆಯಾಗಿದ್ದು ಬೆಳ್ತಂಗಡಿ ತಾಲೂಕಿನಲ್ಲಿ ಭಾರೀ ಮಳೆ ದಾಖಲಾಗಿದೆ. ಬೆಳ್ತಂಗಡಿ ತಾಲೂಕಿನ ಮುಂಡಾಜೆ, ಕಲ್ಮಂಜ ಭಾಗದಲ್ಲಿ ರಾಜ್ಯದಲ್ಲಿಯೇ ಅತೀ ಹೆಚ್ಚು ಮಳೆ ಸುರಿದಿದೆ ಎಂದು
ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಹೊರಡಿಸಿದ ಬುಲೆಟಿನ್ ತಿಳಿಸಿದೆ. ಮುಂಡಾಜೆಯಲ್ಲಿ 24 ಗಂಟೆಯಲ್ಲಿ 379 ಮಿ.ಮಿ.ಮಳೆಯಾಗಿದೆ. ಕಲ್ಮಂಜದಲ್ಲಿ 318 ಮಿ.ಮಿ.ಮಳೆ ಸುರಿದಿದೆ. ಸುಳ್ಯ ತಾಲೂಕಿನಲ್ಲಿ ಸಂಪಾಜೆ(172.5 ಮಿ.ಮಿ.), ಮಂಡೆಕೋಲು(151 ಮಿ.ಮಿ.) ಮಳೆಯಾಗಿದೆ.












